ಮತ್ತೆ ಆರ್ ಎಸ್ ಎಸ್ ವಿರುದ್ದವಾಗಿ ವಾಗ್ದಾಳಿ ನಡೆಸಿದ: ಹೆಚ್ ಡಿ ಕುಮಾರಸ್ವಾಮಿ.

suddionenews
1 Min Read

 

ರಾಮನಗರ: ರಾಷ್ಟ್ರೀಯ ಸ್ವಯಂಸೇವಕ ಸಂಘ ವಿರುದ್ಧ ಮತ್ತೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ, ಸಂಘ ಪರಿವಾರದ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.

ದೇಶದ ಎಲ್ಲಾ ಯೂನಿವರ್ಸಿಟಿಗಳಲ್ಲಿಯೂ ಆರ್ ಎಸ್ ಎಸ್ ಕಾರ್ಯಕರ್ತರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ಮಾಡಿದ್ದಾರೆ. ಯಾವುದೇ ಕೆಲಸವಾಗಬೇಕು ಅಂದರೆ 1 ರಿಂದ 2 ಲಕ್ಷ ರೂಪಾಯಿ ಬೇಡಿಕೆ ಇರಿಸಿಕೊಂಡು ಕೂತಿದ್ದಾರೆ ಎಂದು ಆರೋಪಿಸಿದರು.

ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಇದು ಎಲ್ಲರಿಗೂ ಗೊತ್ತಿರುವ ವಿಚಾರ. 40 ವರ್ಷದ ಹಿಂದಿನ ಆರ್ಎಸ್ಎಸ್ ಬೇರೆ ,ಈಗಿನ ಆರ್ಎಸ್ಎಸ್ ಬೇರೆ. ಈಗ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ವಿಜಯದಶಮಿ ದಿನ ಹೇಳಿಕೆ ಕೊಟ್ಟಿದ್ದಾರೆ. ಅವರಲ್ಲಿ ದೇಶ ಒಡೆಯುವ ಉದ್ದೇಶವಿದೆ. ದೇಶವನ್ನು ಇವರಿಗೆ ನಾವು ಗೊತ್ತಿಗೆ ಕೊಟ್ಟಿದ್ದೀವಾ? ಎಂದು ಹರಿಹಾಯ್ದರು.

ಎಲ್ಲಾ ಹಿಂದೂ ದೇವಾಲಯಗಳನ್ನು ಇವರ ಸುಪರ್ದಿಗೆ ಕೊಡಬೇಕಂತೆ, ಇವರ ಅಕೌಂಟ್ ಎಲ್ಲಿಟ್ಟಿದ್ದಾರೆ? 1989 – 1991 ರವರೆಗೆ ಅಡ್ವಾನಿಯವರು ರಥಯಾತ್ರೆ ಮಾಡಿದ್ರಲ್ಲ. ಇಟ್ಟಿಗೆ, ಹಣ ಸಂಗ್ರಹ ಮಾಡಿದ್ರಲ್ಲ. ಅದರ ಬಗ್ಗೆ ಮಾಹಿತಿ ಎಲ್ಲಿದೆ? ಅವರು ಸಂಗ್ರಹಿಸಿದ ಹಣ ಎಷ್ಟು, ಅದಕ್ಕಾದ ಬಡ್ಡಿ ಎಷ್ಟು? ಎಲ್ಲಿದೆ ಆ ಹಣ. ಈಗ ಸಹ ರಾಮಮಂದಿರ ನಿರ್ಮಾಣಕ್ಕೆ ಜನರಿಂದ ಹಣ ಸಂಗ್ರಹ ಮಾಡಿದ್ದಾರೆ. ಅದರ ಲೆಕ್ಕ ಎಲ್ಲಿದೆ? ಎಂದು ಪ್ರಶ್ನಿಸಿದರು.

ರಾಮಮಂದಿರ ನಿರ್ಮಾಣದ ಹಣದ ವಿಚಾರದಲ್ಲಿ 200% ಲೋಪ ಆಗಿದೆ. ರಾಮನ ಹೆಸರಿನಲ್ಲಿ ಆಗಿರುವ ದುರುಪಯೋಗದ ಬಗ್ಗೆ ನಾನು ಹೇಳಿದ್ದೇನೆ. ನೀವ್ಯಾರು ಕೇಳೋಕೆ ಎಂದು ಅವರು ನನ್ನನ್ನು ಕೇಳಬಹುದು ಆದರೆ ರಾಮನ ಹೆಸರಿನಲ್ಲಿ ದುರುಪಯೋಗ ಆಗಿರುವುದಂತೂ ಹೌದು ಎಂದು ಗಂಭೀರ ಆರೋಪ ಮಾಡಿದರು

Share This Article
Leave a Comment

Leave a Reply

Your email address will not be published. Required fields are marked *