ಚೆನ್ನೈ: ಬೆಂಕಿಪೊಟ್ಟಣ ಖರೀದಿ ಮಾಡದವರು ಯಾರಾದ್ರೂ ಇದ್ದಾರಾ..? ನೋ ವೆ ಚಾನ್ಸೆ ಇಲ್ಲ. ಪ್ರತಿಯೊಬ್ಬರ ಮನೆ ದೇವರ ಕೋಣೆಯಲ್ಲಿ ಇರುತ್ತೆ. ಕೆಲವು ಪುರುಷರ ಜೇಬಲ್ಲಿ ಸದಾ ಇರುತ್ತೆ. ದಿನನಿತ್ಯದ ಅಗತ್ಯ ವಸ್ತುಗಳಲ್ಲಿ ಬೆಂಕಿಪೊಟ್ಟಣ ಸಹ ಒಂದು. ಹೀಗಿದ್ರು ಸಹ ಬೆಂಕಿಪೊಟ್ಟಣ ತನ್ನ ಬೆಲೆಯನ್ನ ಹೆಚ್ಚಳ ಮಾಡಿಕೊಂಡಿರಲಿಲ್ಲ. ಸುಮಾರು 14 ವರ್ಷಗಳ ಬಳಿಕ 1 ರೂಪಾಯಿ ಏರಿಕೆ ಮಾಡಿದೆ.
ಡಿಸೆಂಬರ್ 1 ರಿಂದ ಬೆಂಕಿಪೊಟ್ಟಣದ ಬೆಲೆ 2 ರೂಪಾಯಿ ಆಗಲಿದೆ. ಸದ್ಯಕ್ಕೆ ಬೆಂಕಿಪೊಟ್ಟಣದ ಬೆಲೆ 1 ರೂಪಾಯಿ ಇದೆ. ಅಷ್ಟೆ ಅಲ್ಲ ಬೆಲೆ ಹೆಚ್ಚಳವಾದಂತೆ ಅದರಲ್ಲಿರುವ ಕಡ್ಡಿಯೂ ಹೆಚ್ಚಳವಾಗಲಿದೆ.
ಈ ಬಗ್ಗೆ ಸ್ಪಷ್ಟಪಡಿಸಿರುವ ಕಂಪನಿ, ಬೆಂಕಿಪೊಟ್ಟಣಕ್ಕೆ ಖರ್ಚಾಗುವ ಸಾಮಾಗ್ರಿಗಳ ಬೆಲೆ ಏರಿಕೆಯನ್ನು ತಿಳಿಸಿದೆ. ಸದ್ಯಕ್ಕೆ 1 ರೂಪಾಯಿ ಪಟ್ಟಣದಲ್ಲಿ 36 ಕಡ್ಡಿಗಳಿವೆ. 2 ರೂಪಾಯಿ ಪೊಟ್ಟಣದಲ್ಲಿ 50 ಕಡ್ಡಿಗಳಿರುತ್ತವೆ ಎಂಬುದನ್ನ ತಿಳಿಸಿದೆ. ಈ ಮೂಲಕ ಬೆಲೆ ಏರಿಕೆ ಜೊತೆಗೆ ಹೆಚ್ವಿನ ಕಡ್ಡಿಗಳು ನಮಗೆ ದೊರೆಯಲಿದೆ.
ಬೆಂಕಿಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಒಂದು ಕೆಜಿ ಕೆಂಪು ರಂಜಕ ರೂ. 425 ರಿಂದ ರೂ. 810 ಕ್ಕೆ, ಮೇಣ ರೂ. 58 ರಿಂದ ರೂ. 80 ಕ್ಕೆ, ಹೊರ ಬಾಕ್ಸ್ ಬೋರ್ಡ್ ರೂ. 36 ರಿಂದ ರೂ. 55 ಕ್ಕೆ ಮತ್ತು ಒಳ ಪೆಟ್ಟಿಗೆ ಬೋರ್ಡ್ ರೂ. 32 ರಿಂದ ರೂ. 58 ಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 10 ರಿಂದ ಪೇಪರ್, ಸ್ಪ್ಲಿಂಟ್ಸ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಬೆಂಕಿಪೊಟ್ಟಣದ ಬೆಲೆ ಏರಿಕೆಗೆ ಕಂಪನಿ ನಿರ್ಧರಿಸಿದೆ.
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್…