ಈ ಮಗು ನೆನೆಪಿದೆಯಾ..? ತಾಲಿಬಾನಿಗಳಿಂದ ರಕ್ಷಿಸಲು ಅಮೆರಿಕಾ ಸೈನಿಕರಿಗೆ ಕೊಟ್ಟದ್ದು.. ಈಗ ನಾಪತ್ತೆಯಾಗಿದೆ..!

ಕಾಬೂಲ್ : ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ಆಕ್ರಮಣ ಮಾಡಿದಾಗ ದೇಶದಲ್ಲಿ ಸಾಕಷ್ಟು ಹೃದಯ ವಿದ್ರಾವಕ ಘಟನೆಗಳಿಗೆ ಸಾಕ್ಷಿಯಾಗಿತ್ತು. ಆಗ ಅಫ್ಘನ್ ಪ್ರಜೆಯೊಬ್ಬ ಮುದ್ದಾದ ಮಗುವೊಂದನ್ನ ಗೋಡೆ ಮೇಲೆ ನಿಂತಿದ್ದ ಅಮೆರಿಕಾ ಸೈನಿಕರಿಗೆ ಕೊಟ್ಟಿದ್ದ. ಆ ಫೋಟೋ ಈಗಲೂ ಕಣ್ಣು ಕಟ್ಟಿದಂತಿದೆ. ಆದ್ರೆ ಈಗ ಆ ಮಗು ನಾಪತ್ತೆಯಾಗಿದೆಯಂತೆ.

ತಾಲಿಬಾನಿಗಳು ಅದೆಷ್ಟು ನೀಚರೆಂದರೆ ಮಗು ಎಂಬುದನ್ನು ನೋಡದೆ ಹೆಣ್ಣು ಮಕ್ಕಳ ಮೇಲದ ಅತ್ಯಾಚಾರ ಮಾಡ್ತಾ ಇದ್ರಂತೆ. ಈ ಕ್ರೂರತೆಗೆ ಹೆದರಿ, ನಾವೂ ಸತ್ತರು ಮಕ್ಕಳು ಬದುಕಲಿ ಎಂದು ತಂತಿ ಬೇಲಿ ಯತ್ತ ಅಮೆರಿಕಾ ಸೈನಿಕರೆಡೆಗೆ ತಮ್ಮ ಮಕ್ಕಳನ್ನ ಎಸೆಯುತ್ತಿದ್ದರು.

ಸುಮಾರು 5 ಮೀಟರ್ ಎತ್ತರದ ಗೋಡೆಯನ್ನೇರಿ ಮಿರ್ಜಾ ಅಲಿ ದಂಪತಿ ತಮ್ಮ ಎರಡು ತಿಂಗಳ ಸುಹೈಲ್ ಕಂದನನ್ನ ಅಮೆರಿಕಾ ಸೈನ್ಯಕ್ಕೆ ಎಸೆದಿದ್ದರು. ಆಗ ನೀವೂ ವಿಮಾನ ನಿಲ್ದಾಣ ತಲುಪುವುದರೊಳಗೆ ಮಗು ಸಿಗುತ್ತದೆ ಎಂದಿದ್ದರು. ಆದ್ರೆ ವಿಮಾನ ನಿಲ್ದಾಣ ತಲುಪಿದ್ದರು ಮಗು ಮಾತ್ರ ಇನ್ನು ಸಿಕ್ಕಿಲ್ಲ. ಮಿಲಿಟರಿ ಪಡೆಯಲ್ಲಿ ಇಂಗ್ಲೀಷ್ ಬಳಕೆ ಇರುವ ಕಾರಣ ಸಂವಹನ ಕೂಡ ಆ ದಂಪತಿಗೆ ಕಷ್ಟವಾಗ್ತಿದೆ. ಸದ್ಯ ಮಗುವಿಗಾಗಿ ಹುಡುಕಾಟ ನಡೆಸುತ್ತಿರುವ ದಂಪತಿ ಟೆಕ್ಸಾಸ್ ಪೋರ್ಟ್ ನ ಬ್ಲೀಸ್ ನಲ್ಲಿರುವ ಅಫ್ಘನ್ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *