in

ಸಂಪ್ರದಾಯಗಳನ್ನು ಪ್ರತಿಯೊಬ್ಬರೂ ಧಿಕ್ಕರಿಸಿ ವೈಚಾರಿಕತೆ, ವೈಜ್ಞಾನಿಕ ಮನೋಭಾವನೆ ಬೆಳಸಿಕೊಳ್ಳಿ : ರಮೇಶ್ ಸುಗ್ಗನಹಳ್ಳಿ

suddione whatsapp group join

 

ಬಳ್ಳಾರಿ. ನ.26 : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಪರುಶುರಾಮ್ ನೀಲನಾಯಕ್ ಬಣ ಬಳ್ಳಾರಿ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನದ

ಅಂಗವಾಗಿ ಸಂವಿಧಾನ ವಿಶೇಷ ಉಪನ್ಯಾಸ ಕಾರ್ಯಕ್ರಮ ವನ್ನು ಬಳ್ಳಾರಿ ಯ ಸ್ನೇಹ ಕಾಂಪ್ಲೆಕ್ಸ್ ನಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಸಂವಿಧಾನದ ಬಗ್ಗೆ ವಿಶೇಷ ಉಪನ್ಯಾಸ ಕುರಿತು ಶ್ರೀನಿವಾಸ್ ಮೂರ್ತಿ ಮಾತನಾಡಿ, ಮೂಢನಂಬಿಕೆ, ಗೊಡ್ಡು ಸಂಪ್ರದಾಯಗಳನ್ನು ಪ್ರತಿಯೊಬ್ಬರೂ ಧಿಕ್ಕರಿಸಿ ವೈಚಾರಿಕತೆ, ವೈಜ್ಞಾನಿಕ ಮನೋಭಾವನೆ ಬೆಳಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಂವಿಧಾನದ ಪ್ರತಿಯನ್ನು ದೇಶದ ಪ್ರತಿಯೊಂದು ಮನೆಗೂ ತಲುಪಿಸಿ ಸಂವಿಧಾನದ ಮಹತ್ವವನ್ನು ತಿಳಿಸಿ ಕೊಡಬೇಕಾಗಿದೆ ಎಂದರು.ಭಾರತೀಯರಾದ ನಾವು ದೇಶದ ಸಾರ್ವಭೌಮತ್ವ, ಸಮಾಜವಾದಿ, ಧರ್ಮನಿರ
ಪೇಕ್ಷತೆಯನ್ನು ಕಾಪಾಡಬೇಕಿದೆ. ಪ್ರಜೆಗಳಿಗೆ ಸ್ವಾತಂತ್ರ್ಯ, ಸಮಾನತೆ ದೊರೆಯಲಿ ಎಂದರು.

ಉತ್ತರ ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ನಂತರ ರಮೇಶ್ ಸುಗ್ಗನಹಳ್ಳಿ ಅವರು ಉಪನ್ಯಾಸ ನೀಡಿ ಮಾತನಾಡಿ,‘ದೇಶದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ’
ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಪಾಲಕರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು’ ಎಂದು ಕೋರಿದರು.

ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ದೇಶದಲ್ಲಿಯೇ ಸಂವಿಧಾನವನ್ನು ಪವಿತ್ರ ಗ್ರಂಥ ಎಂದು ಗೌರವಿಸಲಾಗುತ್ತದೆ. ಸಂವಿಧಾನ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಅದ್ಭುತ ಕೊಡುಗೆ. ಅದನ್ನು ನಾವೆಲ್ಲರೂ ಗೌರವದಿಂದ ಕಾಣಬೇಕು’ ಎಂದು ಹೇಳಿದರು.

ಪರಮಶ್ರೇಷ್ಠ ಸಂವಿಧಾನದ ದುರ್ಬಳಕೆಯನ್ನು ತಡೆಯುವುದೆ ನಮ್ಮಲ್ಲೇರ ಕರ್ತವ್ಯ.

ಇಡೀ ಸಂವಿಧಾನದ ಪುನರ್ ವಿಮರ್ಶೆಯ ವರದಿಯನ್ನು ಸಲ್ಲಿಸಿತು. ಅದನ್ನು ಹೋರಾಟದ ಮೂಲಕ ತಡೆಯಲಾಯಿತು. ಕಾರ್ಮಿಕರಿಗೆ ಸಂಬಂಧಿಸಿದ ೬೭ ಕಾನೂನುಗಳನ್ನು ಸರಳೀಕರಿಸಿ ಕೇವಲ ೫ ಕೋಡ್ ಮಾಡಲು ಹೊರಟಿದ್ದ ಹುನ್ನಾರವನ್ನು ದೇಶದ ೧೧ ಟ್ರೇಡ್ ಯೂನಿಯನ್‌ಗಳು ತಡೆದವು. ಆದರೆ ಇದಕ್ಕೆ ಇನ್ನೂ ಪೂರ್ಣವಾದ ಯಶಸ್ಸು ದೊರೆತಿಲ್ಲ ಎಂದ ಅವರು ಹೀಗೆ ತಿದ್ದುವ ನೆಪದಲ್ಲಿ ಸಂವಿಧಾನವನ್ನು ತಿರುಚುವ ಕೆಲಸದ ವಿರುದ್ಧ ಎಲ್ಲರೂ ದನಿ ಎತ್ತಬೇಕು ಎಂದರು.

ಪ್ರಾರಂಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ರಾಜ್ಯ ಸಮಿತಿ ಸದಸ್ಯ ಕಪ್ಪಗಲ್ ಒಂಕಾರಪ್ಪ ವಹಿಸಿದ್ದರು.
ಡಿ. ಎಚ್. ಹನುಮೇಶಪ್ಪ, ವಿಜಯ್ ಕುಮಾರ್, ಜಿಲ್ಲಾ ಸಂಚಾಲಕ ಬೈಲೂರ್ ಲಿಂಗಪ್ಪ, ನೆಲ್ಲುಡಿ ಲೋಕೇಶ್ ಸೇರಿದಂತೆ ಇತರರು ಇದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

9ನೇ ತರಗತಿ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ..!

ಯಾರು ಈ ಮೀಮ್ಸ್ ಮಾಡಿದ್ದು..? ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ ನಟ ಪ್ರಕಾಶ್ ರಾಜ್