ಭಾರತೀಯ ಸಾಂಸ್ಕೃತಿಕ ಚರಿತ್ರೆಯ ಧೃವತಾರೆ ಆದಿಗುರು ಶಂಕರಾಚಾರ್ಯ

 

ದಿನಾಂಕ 06-05-2022 ರಂದು  ಶಂಕರಾಚಾರ್ಯರ ಜಯಂತಿ ನಿಮಿತ್ತ ವಿಶೇಷ ಲೇಖನ…

ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಧೃವತಾರೆಯಂತೆ ಪ್ರಕಾಶಮಾನವಾಗಿರುವ ಮಹಾನ್ ಚೇತನ, ದಾರ್ಶನಿಕ ಆದಿಗುರು ಶಂಕರಾಚಾರ್ಯ. ಸನಾತನ ಧರ್ಮಸಾರವನ್ನು ಜಗತ್ತಿಗೆ ಸಾರಿ ಹೇಳಿ, ಧರ್ಮದ ಉಳಿವಿಗಾಗಿ ದೇಶ ಸಂಚಾರ ಮಾಡಿ ಅದ್ವೈತ ತತ್ವ ಪ್ರತಿಪಾದಿಸಿದ ಶಂಕರಾಚಾರ್ಯರು ಆದಿಗುರು ಎಂದೇ ಪ್ರಸಿದ್ಧರು.

ಬಾಲ್ಯ ಜೀವನ ಹಾಗೂ ಸನ್ಯಾಸತ್ವ ಸ್ವೀಕಾರ:

ಕ್ರಿಸ್ತಶಕ ೮ನೇ ಶತಮಾನದಲ್ಲಿ ಕೇರಳದ ಪರಿಯಾರ್ ನದಿ ದಡದ ಕಾಲಡಿ ಎಂಬ ಊರಿನಲ್ಲಿ ಶಿವಗುರು ನಂಬದೂರಿ ಹಾಗೂ ಆರ್ಯಾಂಬಾ ಎಂಬ ದಂಪತಿಗಳಿಗೆ ಶಂಕರಾಚಾರ್ಯರು ಜನಿಸಿದರು. ಬಾಲ್ಯದಲ್ಲಿ ಆಗಾಧ ಜ್ಞಾನ ಹೊಂದಿದ್ದ ಶಂಕರಾಚಾರ್ಯರು ತಮ್ಮ ಎಂಟನೇ ವರ್ಷಕ್ಕೆ ನಾಲ್ಕು ವೇದಗಳನ್ನು ಕರಗತ ಮಾಡಿಕೊಂಡರು.

12 ನೇ ವಯಸ್ಸಿಗೆ ಎಲ್ಲಾ ಶಾಸ್ತ್ರಗಳಲ್ಲಿ ಪಾರಂಗತರಾದರು. ಶಂಕರಾಚಾರ್ಯರು ಓರ್ವ ದಾರ್ಶನಿಕರಷ್ಟೇ ಆಗಿರದೆ ಮಹಾನ್ ಕವಿಯು ಆಗಿದ್ದರು. ಮಗ ಮಹಾನ್ ಪುರುಷ ಆಗಬೇಕು ಎಂಬ ಇಚ್ಚೆ ತಾಯಿಗಿತ್ತು. ಆದರೆ ಶಂಕರಾಚಾರ್ಯರ ವಿಚಾರವೇ ಬೇರೆಯಾಗಿತ್ತು. ಶಂಕರಾಚಾರ್ಯರಿಗೆ ಲೌಕಿಕ ಪ್ರಪಂಚದ ಬಗ್ಗೆ ಆಸಕ್ತಿ ಇರಲಿಲ್ಲ. ಅವರ ಎಲ್ಲಾ ವಿಚಾರಗಳು ಚಿಂತನೆಗಳು, ಆಧ್ಯಾತ್ಮಿಕ ಜಗತ್ತಿನ ಕಡೆ ಸೆಳೆಯುತ್ತಿದ್ದವು. ಹಾಗಾಗಿ ತನ್ನ ತಾಯಿ ಬಳಿ ಸನ್ಯಾಸಿಯಾಗುವ ಇಚ್ಛೆ ವ್ಯಕ್ತಪಡಿಸಿದಾಗ ತಾಯಿ ಒಪ್ಪಲಿಲ್ಲ ಆದರೆ ಶಂಕರಾಚಾರ್ಯರ ತನ್ನ ತಾಯಿಯನ್ನು ಉಪಾಯವಾಗಿ ಒಪ್ಪಿಸಿ ಸನ್ಯಾಸತ್ವವನ್ನು ಸ್ವೀಕರಿಸಿದರು.

ದೇಶ ಸಂಚಾರ ಹಾಗೂ ಜ್ಞಾನಾರ್ಜನೆ:

ಸನ್ಯಾಸತ್ವ ಸ್ವೀಕರಿಸಿದ ಬಳಿಕ ಗುರುಗಳನ್ನು ಹರಸಿ ಹೊರಟ ಶಂಕರಾಚಾರ್ಯರಿಗೆ ನರ್ಮದಾ ನದಿಯ ತೀರದಲ್ಲಿ ಗುರು ಗೋವಿಂದ ಭಾಗವತ್ಪಾದರು ಸಿಗುತ್ತಾರೆ. ಗೋವಿಂದ ಭಗವತ್ಪಾದರಿಂದ ಅನೇಕ ವಿಷಯಗಳನ್ನು ತಿಳಿದು ಅವುಗಳನ್ನು ಕರಗತ ಮಾಡಿಕೊಂಡು ಜ್ಞಾನದಾಹವನ್ನು ನೀಗಿಸಿಕೊಂಡರು.

ಮತ್ತಷ್ಟು ಜ್ಞಾನ ಪಡೆಯಬೇಕೆಂದು ದೇಶ ಸಂಚಾರಕ್ಕಾಗಿ ಶಂಕರಾಚಾರ್ಯರು ಹೊರಡುತ್ತಾರೆ. ಮೂರು ಬಾರಿ ಕಾಲ್ನಡಿಗೆಯಲ್ಲಿ ದೇಶವನ್ನು ಸಂಚರಿಸುತ್ತಾರೆ. ದೇಶದ ಪುರಿ, ಕಾಶ್ಮೀರ, ನೇಪಾಳ, ಬನಾರಸ್, ಬದ್ರಿನಾಥ, ದ್ವಾರಕ, ಕಂಚಿ ಹೀಗೆ ಹಲವಾರು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಇಡೀ ದೇಶ ಸಂಚಾರದಿಂದ ಅವರಿಗೆ ನಮ್ಮ ದೇಶದ ವಾಸ್ತವ ಏನು ಎಂಬುದು ಅರಿವಾಗುತ್ತದೆ. ಆ ವಾಸ್ತವನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಚಿಂತನೆಗಳನ್ನು ಆರಂಭಿಸಿದರು.

ಅದ್ವೈತ ಸಿದ್ಧಾಂತ ಹಾಗೂ ಶಕ್ತಿಪೀಠಗಳು:

ಅದ್ವೈತ ತತ್ವವನ್ನು ದೇಶದ ಮೂಲೆ ಮೂಲೆಗೂ ಸಾರಲು ಶಂಕರಾಚಾರ್ಯರು ನಾಲ್ಕು ದಿಕ್ಕುಗಳಲ್ಲಿ ಶಕ್ತಿ ಪೀಠಗಳನ್ನು ಸ್ಥಾಪಿಸಿದರು. ಉತ್ತರದಲ್ಲಿ ಬದರಿ ಜ್ಯೋತಿರ್ ಮಠ, ದಕ್ಷಿಣದಲ್ಲಿ ಶೃಂಗೇರಿ ಶರದಾ ಪೀಠ, ಪೂರ್ವದಲ್ಲಿ ಪುರಿ ಗೋವರ್ಧನ ಪೀಠ, ಪಶ್ಚಿಮದಲ್ಲಿ ದ್ವಾರಕ ಕಾಳಿಕಾ ಪೀಠಗಳು ಇಂದಿಗೂ ಈ ನಾಲ್ಕೂ ಮಠಗಳು ತಮ್ಮ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದು ಅದ್ವೈತ ತತ್ವಗಳನ್ನು ಸಾರುತ್ತಿವೆ. ಅದ್ವೈತವೆಂದರೆ ಅಂದರೆ ಜೀವ ಮತ್ತು ಆತ್ಮ ‘ಒಂದೇ’ ಆಗಿರುವುದು. ಜೀವಿಯಲ್ಲಿರುವ ಆತ್ಮನೂ, ಪರಮ ಸತ್ಯವಾದ ಬ್ರಹ್ಮ ಚೈತನ್ಯವೂ ಒಂದೇ ಎಂಬುದು ಇದರ ಸಾರ.

ವಿವಿಧ ಪಂಥಗಳ ಒಗ್ಗೂಡಿಕೆ ಹಾಗೂ‌ ಸನಾತನ ಧರ್ಮದ ಪುನರುತ್ಥಾನ:

ಜ್ಞಾನ ಸಾಧನೆಯ ಮೂಲಕ ಜಗದ್ಗುರು ಎಂಬ ಬಿರುದು ಪಡೆದುಕೊಂಡ ಹೆಗ್ಗಳಿಗೆ ಶಂಕರಾಚಾರ್ಯರದ್ದು. ದೇಶ ಸಂಚಾರ ಸಂದರ್ಭದಲ್ಲಿ ದೇಶದಲ್ಲಿ ವಿವಿಧ ಪಂಥಗಳ ಬಗ್ಗೆ ಅರಿತುಕೊಂಡ ಶಂಕರಾಚಾರ್ಯರು ಅವುಗಳ ನಡುವಿನ ಭೇಧವನ್ನು ಹೋಗಲಾಡಿಸಿ ಸನಾತನ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದರು.
ಶೈವ, ವೈಷ್ಣವ, ಶಕ್ತಿ ಸೇರಿದಂತೆ ಅನೇಕ ಪಂಥಗಳು ಒಗ್ಗೂಡಲು. ಸನಾತನ ಧರ್ಮದ ಆರು ದೇವರುಗಳಾದ ಶಿವ, ಶಕ್ತಿ, ಕುಮಾರ, ಗಣೇಶ, ಸೂರ್ಯ, ವಿಷ್ಣುವಿಗೆೆ ಪ್ರಾಮುಖ್ಯತೆಯನ್ನು ನೀಡಿ ಪೂಜೆಗೆ ಅವಕಾಶ ಕಲ್ಪಿಸಿಕೊಡುತ್ತಾರೆ. ಎಲ್ಲ ಪಂಥಗಳನ್ನು ಒಗ್ಗೂಡಿಸಿದ ಶಂಕರಾಚಾರ್ಯರಿಗೆ ಷಣ್ಮಥಸ್ಥಾಪನಾಚಾರ್ಯ ಎಂದು ಬಿರುದು ಲಭಿಸಿತು.

ಶಂಕರಾಚಾರ್ಯರ ಪ್ರಮುಖ ಕೃತಿಗಳು:

ಸೌಂದರ್ಯಲಹರಿ, ವಿವೇಕಚೂಡಾಮಣಿ, ಉಪದೇಶಸಾಹಸ್ರೀ, ಆನಂದಲಹರಿ, ದಕ್ಷಿಣಾಮೂರ್ತಿಸ್ತೋತ್ರ, ಚರ್ಪಟಮಂಜರಿಕಾ (ಭಜಗೋವಿಂದಮ್), ಗೋಪಾಲಾಷ್ಟಕ, ದಶಶ್ಲೋಕೀ, ಮನೀಷಾಪಂಚಕ, ನಿರ್ವಾಣಮಂಜರೀ, ಯತಿಪಂಚಕ ಸೇರಿದಂತೆ ಇನ್ನೂರಕ್ಕೂ ಹೆಚ್ಚಿನ ಕೃತಿಗಳನ್ನು ಶಂಕರಾಚಾರ್ಯರರು ರಚಿಸಿದ್ದಾರೆ.

ಶಂಕರಾಚಾರ್ಯರ ಬೋಧನೆ ಹಾಗೂ ತತ್ವಗಳು:

ಶಂಕರಾಚಾರ್ಯರು ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸುತ್ತಾರೆ. ಅದ್ವೈತ ಎಂದರೆ ಎರಡಲ್ಲದ್ದು, ಏಕತ್ವ ಎಂಬ ಅರ್ಥವನ್ನು ನೀಡುತ್ತದೆ. ಆತ್ಮ ಮತ್ತು ಪರಮಾತ್ಮ ಒಂದೇ ಅವು ಬೇರೆ ಬೇರೆ ಅಲ್ಲ ಎಂದು ಶಂಕರಾಚಾರ್ಯರು ತಿಳಿಸಿದರು.

ದೇವರು ನಿರ್ಗುಣ, ನಿರಾಕಾರ, ಸ್ವಪ್ರಕಾಶಶವುಳ್ಳವನೇ ಬ್ರಹ್ಮ, ಬ್ರಹ್ಮ ಅಂತಿಮ ಸತ್ಯ ಎಂದು ಹೇಳಿದರು. ಶಂಕರಾಚಾರ್ಯರು ಮಾಯಾವಾದ ಸಿದ್ಧಾಂತದಲ್ಲಿ ಲೌಕಿಕ ಪ್ರಪಂಚ ಸುಳ್ಳು ಆಧ್ಯಾತ್ಮಿಕ ಪ್ರಪಂಚ ಸತ್ಯ ಎಂದು ತಿಳಿಸುತ್ತಾರೆ. ‘ಅಹಂ ಬ್ರಹ್ಮಾಸ್ಮಿ’ನಾನೇ ಬ್ರಹ್ಮ ಎಂದು ಹೇಳುತ್ತಾರೆ. ನನ್ನಲ್ಲಿ ಆತ್ಮ ಮತ್ತು ಪರಮಾತ್ಮ ಇಬ್ಬರು ಇದ್ದಾರೆ. ಈ ಐಕ್ಯ ಭಾವವೇ ಅಹಂ ಬ್ರಹ್ಮಾಸ್ಮಿ ಅರ್ಥ ಎಂದು ಬೋದಿಸಿದರು.ಮೋಕ್ಷಕ್ಕೆ ಜ್ಞಾನ ಮಾರ್ಗವಿದೆ. ಮೋಕ್ಷ ಸಾಧನೆಗೆ ನಮ್ಮಲ್ಲಿರುವ ಒಳ್ಳೆಯ ತನದ ಅರಿವು ಮುಖ್ಯ ಎಂದು ತಿಳಿಸುತ್ತಾರೆ.
ಜಾತಿ ಪದ್ದತಿ, ಮೂಢ ನಂಬಿಕೆ ಕಂದಾಚಾರಗಳಿಗೆ ಒಳಗಾಗಿ, ಅನ್ಯ ಧರ್ಮಗಳಿಂದ ಬಗ್ಗೆ ಸಾಕಷ್ಟು ಟೀಕೆಗೆ ಒಳಗಾಗಿದ್ದ ಸನಾತನ ಧರ್ಮದ ಪುನರುತ್ಥಾನಕ್ಕೆ ಶಂಕರಚಾರ್ಯರು ಶ್ರಮಿಸಿದರು. ಭಾರತೀಯ ವೈಚಾರಿಕ ರಂಗದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಶಂಕರಚಾರ್ಯರು ಕಾಶ್ಮೀರದ ಸರ್ವಜ್ಞ ಪೀಠ ಅಂಕರಿಸಿದ್ದರು.

32 ವಯಸ್ಸಿಗೆ ಇಹಲೋಹ ತ್ಯಜಿಸಿದ ಶಂಕರಚಾರ್ಯರ ತತ್ವಗಳು ಇಂದಿಗೂ ಸಾರ್ವಕಾಲಿಕ ಮೌಲ್ಯಗಳನ್ನು ಒಳಗೊಂಡಿವೆ.

ವಿಶೇಷ ಲೇಖನ :
ನಾಗವೇಣಿ.ಎಸ್
ಪ್ರಶಿಕ್ಷಣಾರ್ಥಿ, ವಾರ್ತಾ ಇಲಾಖೆ, ಚಿತ್ರದುರ್ಗ

suddionenews

Recent Posts

ವಿರಾಟ್ ಕೊಹ್ಲಿ ಸೂಪರ್ ಸೆಂಚುರಿ : ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿದ ಭಾರತ

  ಸುದ್ದಿಒನ್ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ತಮ್ಮ 51 ನೇ ಶತಕವನ್ನು ಗಳಿಸಿದರು. ಟೀಮ್ ಇಂಡಿಯಾ ಪಾಕಿಸ್ತಾನವನ್ನು 6…

5 minutes ago

ಕಬೀರಾನಂದಾಶ್ರಮಕ್ಕೆ ಯಾವುದೆ ಜಾತಿ, ಧರ್ಮ ಇಲ್ಲ, ಎಲ್ಲರೂ ಸಮಾನರು : ಡಾ.ಬಸವಕುಮಾರ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…

30 minutes ago

ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ : ವಿಶೇಷತೆ ಏನು ಗೊತ್ತಾ?

  ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…

1 hour ago

ವಿಜಯೇಂದ್ರ ನೇತೃತ್ವದಲ್ಲಿಯೇ ತಾಲೂಕು, ಜಿಲ್ಲಾ ಪಂಚಾಯತಿಗೆ ಸ್ಪರ್ಧೆ : ರೇಣುಕಾಚಾರ್ಯ

    ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…

1 hour ago

ತುಮಕೂರಿನ ಈ ಪ್ರದೇಶಗಳಲ್ಲಿ ಫೆಬ್ರವರಿ 24 , 27 ಹಾಗೂ 28ರಂದು ವಿದ್ಯುತ್ ವ್ಯತ್ಯಯ…!

  ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…

1 hour ago

ಭಾರತ vs ಪಾಕಿಸ್ತಾನ : 25 ವರ್ಷಗಳ ಹಳೆಯ ದಾಖಲೆ ಮುರಿದ ಕಿಂಗ್ ಕೊಹ್ಲಿ

    ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳನ್ನು ನಿರೀಕ್ಷಿಸುತ್ತಾರೆ.…

2 hours ago