Connect with us

Hi, what are you looking for?

ಪ್ರಮುಖ ಸುದ್ದಿ

ಜಿಲ್ಲೆಗೆ ಸಮರ್ಪಕ ಆಕ್ಸಿಜನ್ ಪೂರೈಕೆ; ಯಾವ ಆಸ್ಪತ್ರೆಗೆ ಎಷ್ಟು ಆಕ್ಸಿಜನ್ ಹಂಚಿಕೆ ; ಸಂಪೂರ್ಣ ಮಾಹಿತಿ

ಸುದ್ದಿಒನ್,ಚಿತ್ರದುರ್ಗ, (ಮೇ.18) : ಜಿಲ್ಲೆಗೆ ಬೇಕಾಗಿರುವ ಆಕ್ಸಿಜನ್ ಪೂರೈಕೆ ಆಗುತ್ತಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ನಿತ್ಯ 8.5 ಕೆ.ಎಲ್. ಆಕ್ಸಿಜನ್ ಬೇಕಾಗಿದ್ದು ಅಷ್ಟನ್ನು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಗೆ 3 ಕೆ.ಎಲ್, ಬಸವೇಶ್ವರ ಆಸ್ಪತ್ರೆಗೆ 2.5 ಕೆ.ಎಲ್, ರೇಣುಕಾ ಗ್ಯಾಸ್‍ಗೆ 1 ಕೆ.ಎಲ್, ಸದರನ್ ಪೂರೈಕೆದಾರರಿಗೆ 2 ಕೆ.ಎಲ್ ಹಂಚಿಕೆ ಮಾಡಿ ಪೂರೈಸಲಾಗುತ್ತಿದೆ. ಇದರೊಂದಿಗೆ 379 ಜಂಬೂ ಸಿಲೆಂಡರ್ ಪೂರೈಕೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಆಸ್ಪತ್ರೆಗೆ 80,
ಬಸವೇಶ್ವರ ಆಸ್ಪತ್ರೆಗೆ 5,
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ 40,
ಕೃಷ್ಣಾ ನರ್ಸಿಂಗ್ ಹೋಂಗೆ 20,
ಬಸಪ್ಪ ಆಸ್ಪತ್ರೆಗೆ 25,
ಸಾಯಿ ನಾರಾಯಣ ಆಸ್ಪತ್ರೆಗೆ 20,

ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ 8, ಸಿರಿಗೆರೆಗೆ 8,
ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ 20, ಪರಶುರಾಂಪುರಕ್ಕೆ 5,
ನಾಯಕನಹಟ್ಟಿಗೆ 5,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ 17 ಸೇರಿ 253 ಹಾಗೂ ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ 28, ಧರ್ಮಪುರಕ್ಕೆ 10,
ಮರಡಿಹಳ್ಳಿಗೆ 10,
ಹೊಳಲ್ಕೆರೆಗೆ 30,
ಬಿ.ದುರ್ಗಕ್ಕೆ 9,
ಹೊಸದುರ್ಗಕ್ಕೆ 20,
ಕಂಚೀಪುರ-ಕಿಟ್ಟದಾಳ್‍ಗೆ 5 ಹಾಗೂ
ಶ್ರೀರಾಂಪುರಕ್ಕೆ 4 ಸೇರಿ 126 ಸೇರಿದಂತೆ ಒಟ್ಟು 379 ಜಂಬೂ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದ್ದು ಇನ್ನು ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಕರೆ ತರಲಾಗುತ್ತದೆ. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿವಾರು ತಂಡಗಳನ್ನು ರಚಿಸಲಾಗಿದೆ. ಇದರ ಜೊತೆಗೆ ಗ್ರಾಮವಾರು ಸಾಮಾನ್ಯ ಲಕ್ಷಣ ಹೊಂದಿದವರನ್ನು ಸಹ ಪರೀಕ್ಷೆಗೆ ಒಳಪಡಿಸಿ ಪ್ರತ್ಯೇಕಿಸಬೇಕಾಗಿದ್ದು ಈ ನಿಟ್ಟಿನಲ್ಲಿ ಆರೋಗ್ಯಾಧಿಕಾರಿಗಳು ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *

Latest

ಚಿತ್ರದುರ್ಗ

upper bhadra meeting in DS Hally, chitradurga ಡಿಎಸ್ ಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಸಭೆ; ಗ್ರಾಮಸ್ಥರು ಭಾಗಿ ಸುದ್ದಿಒನ್, ಚಿತ್ರದುರ್ಗ, (ಆ.03) : ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜ್ಞಾನಪೂರ್ಣ ಶಾಲೆ ಆವರಣದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಜೆ ಎಮ್ ಸಿ ಬಿ ಎಸ್ ಇ ರೆಸಿಡೆನ್ಷಿಯಲ್ ಶಾಲೆಯು 2020-21 ನೇ ಸಾಲಿನ ಸಿ ಬಿ ಎಸ್ ಇ...

ಪ್ರಮುಖ ಸುದ್ದಿ

ಬೆಂಗಳೂರು: ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋದಕ್ಕಾಗಿಯೇ ಸಿಎಂ ಮೂರು ದಿನದಿಂದ ದೆಹಲಿಯಲ್ಲಿದ್ದಾರೆ. ಈಗಾಗಲೇ ಹೈಕಮಾಂಡ್ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಸಂಪುಟದಲ್ಲಿ ಯಾರೆಲ್ಲಾ ಇರ್ಬೇಕು...

ಪ್ರಮುಖ ಸುದ್ದಿ

ಮುಂಬೈ: ಶಿಲ್ಲಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ರೋ ಮಗ ವಿಹಾನ್ ಕುಂದ್ರಾ ಕೂಡ ಅಷ್ಟೇ ಆ್ಯಕ್ಟೀವ್ ಆಗಿದ್ದ. ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕ್ತಾ ಇದ್ದ. ಆದ್ರೆ ರಾಜ್...

ಪ್ರಮುಖ ಸುದ್ದಿ

ರಾಜಸ್ಥಾನ : ಹಿಂದಿನ ಕಾಲದಿಂದಲೂ ಪಾರಿವಾಳ ಸಂದೇಶ ರವಾನಿಸುವ, ಬೇಹುಗಾರಿಕೆಯಲ್ಲೂ ತನ್ನ ಚಾಣಾಕ್ಯತನ ತೋರಿದೆ. ತಂತ್ರಜ್ಞಾನ ಮುಂದುವರೆದ ಕಾಲದಲ್ಲೂ ಪಾಕಿಸ್ತಾನದಿಂದ ಪತ್ರವೊಂದನ್ನ ಹೊತ್ತು ತಂದಿದೆ ಪಾರಿವಾಳ. ಹೌದು, ಈ ಘಟನೆ ನಡೆದಿರೋದು ರಾಜಸ್ಥಾನದ...

ಪ್ರಮುಖ ಸುದ್ದಿ

ಬೆಂಗಳೂರು :ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೊನೆ ಕ್ಷಣದಲ್ಲಿ ತನ್ನ ಪಾಳಯದ ಬಸವರಾಜ್ ಬೊಮ್ಮಾಯಿ ಅವರಿಗೆ ಪಟ್ಟ ಕಟ್ಟಿ ಇದೀಗ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ ಬಿ.ಎಸ್.ಯಡಿಯೂರಪ್ಪ. ದೆಹಲಿಯಲ್ಲಿ ಸಚಿವ ಸಂಪುಟ ಕಸರತ್ತು...

You May Also Like

ಚಿತ್ರದುರ್ಗ

ಚಿತ್ರದುರ್ಗ, (ಜು.31): ಕೋಟೆನಾಡಿನಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೆಳಗಿ ಹೊತ್ತು ವಾಯು ವಿಹಾರಕ್ಕೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಕಳ್ಳರು ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಶನಿವಾರ ಬೆಳಗ್ಗೆ...

ಪ್ರಮುಖ ಸುದ್ದಿ

ಅಭಿಮಾನಿಗಳು ತಮ್ಮ ಅಭಿಮಾನವನ್ನ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಅಭಿಮಾನ ತೋರಿಸ್ತಾರೆ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಫೋಟೋಗಳಿಗೆ ಹಾರ ಹಾಕಿ, ಅಭಿಷೇಕ‌ ಮಾಡಿ ಎಂಜಾಯ್ ಮಾಡ್ತಾರೆ. ಇನ್ನು ಒಂದೆಜ್ಜೆ...

ಆರೋಗ್ಯ

ರಾಗಿ ತಿಂದೋನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿರ್ತೀರಿ. ಆದ್ರೆ ಈ ಮಾತು ಯಾಕೆ ಹೇಳ್ತಾರೆ ಅಂತ ಗೊತ್ತಾಗ್ಬೇಕಂದ್ರೆ ರಾಗಿಯಿಂದ ಆರೋಗ್ಯಕ್ಕೆ ಅದೆಷ್ಟೆಲ್ಲ ಲಾಭಗಳಿವೆ ಎಂದು ತಿಳ್ಕೋಬೇಕು. ರಾಗಿಯಲ್ಲಿ ಸಾಕಷ್ಟು ಕ್ಯಾಲ್ಶಿಯಂ ಇದೆ. ಆಸ್ಟಿಯೋಪೋರೋಸಿಸ್...

ಆರೋಗ್ಯ

ಅರಳಿ ಮರ ಸಾಮಾನ್ಯವಾಗಿ ಎಲ್ಲೆಡೆ ಇರುತ್ತೆ. ಅದಕ್ಕೆ ನಗರ, ಗ್ರಾಮೀಣ ಅಂತೆಲ್ಲಾ ಏನಿಲ್ಲ. ನಗರ ಪ್ರದೇಶದಲ್ಲೂ ದೇವಾಲಯದ ಮುಂದೆ ಅರಳಿಮರವನ್ನ ಕಾಣಬಹುದು. ಈ ಅರಳಿ‌ಮರದ ಎಲೆಗಳಿಂದ ಸಾಕಷ್ಟು ಲಾಭಗಳಿವೆ. ಅದು ಅಷ್ಟಾಗಿ ಯಾರಿಗೂ...

Copyright © 2021 Suddione. Kannada online news portal

error: Content is protected !!