ಬೆಂಗಳೂರು; ಇತ್ತೀಚೆಗಷ್ಟೇ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾ ಅವರು ಸಿಕ್ಕಿಬಿದ್ದಿದ್ದು, ಇದೀಗ ರಾಜಕಾರಣಿಗಳು, ಅಧಿಕಾರಿಗಳ ಕೈವಾಡ ಇರೋದು ಕೂಡ ಅದರಲ್ಲಿ ಪ್ರೂವ್ ಆಗಿದೆ. ಹೀಗಾಗಿ ಈ ಕೇಸನ್ನ ಸಿಬಿಐ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಸದ್ಯ ಡಿಆರ್ಐ ಕಸ್ಟಡಿಯಲ್ಲಿರುವ ರನ್ಯಾ ಬಗ್ಗೆ ಇನ್ನಷ್ಟು ಹೆಚ್ಚಿನ ತನಿಖೆ ನಡೆಯಬೇಕಿದೆ. ಒಂದು ಬಾರಿ ಹೀಗೆ ಗೋಲ್ಡ್ ರವಾನೆ ಮಾಡಿರೋದಲ್ಲ. ಬಹಳ ಕಾಲದಿಂದಾನೂ ಇದು ನಡೆಯುತ್ತಲೇ ಇದೆ. ಹಾಗಾಗಿ ವಿದೇಶದಲ್ಲಿ ಯಾರ ಸಂಪರ್ಕವಿದೆ..? ಇವರ ಹಿಂದೆ ಇದ್ದ ಚಿನ್ನದ ಅಂಗಡಿಮಾಲೀಕರು ಯಾರ್ಯಾರು ಇದ್ದರು..? ರಾಜಕಾರಣಿಗಳು ಯಾರೆಲ್ಲಾ ಇದ್ದರು ಎಂಬೆಲ್ಲಾ ವಿಚಾರಗಳು ತನಿಖೆಯಿಂದ ಹೊರ ಬರಬೇಕಿದೆ. ಹೀಗಾಗಿ ಈ ಸಂಬಂಧ ಸದನದಲ್ಲಿಯೂ ಈ ವಿಚಾರ ಬಾರೀ ಚರ್ಚೆಗೆ ಗ್ರಾಸವಾಗಿದ್ದು, ಶಾಸಕ ಸುನಿಲ್ ಕುಮಾರ್ ಈ ವಿಚಾರವನ್ನು ತೆಗೆದಿದ್ದಾರೆ. ಇದಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇಲ್ಲಿ ಸ್ಮಗಿಂಗ್ ಆಗಿಲ್ಲ ಅಥವಾ ಅವರ್ಯಾರೋ ಗೋಲ್ಡ್ ತಂದಿಲ್ಲ. ನಮ್ಮ ಹಂತದಲ್ಲಿ ಏನು ತನಿಖೆ ನಡೆಸಬೇಕು ಅದನ್ನೆಲ್ಲ ಮಾಡ್ತೇವೆ. ಆದ್ರೆ ಈಗ ಸಿಬಿಐನವರು ತನಿಖೆ ನಡೆಸುತ್ತಿದ್ದಾರೆ. ಯಾರೂ ಇನ್ವಾಲ್ ಆಗಿದ್ದಾರೆ, ಸ್ಮಗ್ಲಿಂಗ್ ಎಷ್ಟಾಗಿದೆ ಎಂಬುದೆಲ್ಲಾ ತನಿಖೆಯ ನಂತರವಷ್ಟೇ ಗೊತ್ತಾಗಲಿದೆ. ಅದಕ್ಕೂ ಮುಂಚೆ ನಾವೇನು ಹೇಳೋದಕ್ಕೆ ಆಗೋದಿಲ್ಲ. ಸಿಬಿಐ ನವರು ತನಿಖೆ ನಡೆಸುತ್ತಿದ್ದಾರೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.
ಸಿಬಿಐಗೆ ಕೊಟ್ಟಿರೋದು ಗೊತ್ತಿಲ್ಲ ಅಂತಾನೂ ಹೇಳ್ತಾ ಇದ್ದಾರೆ. ಸಿಬಿಐಗೆ ಕೊಡುವುದಕ್ಕೆ ಇನ್ನು ಏನು ಸ್ಪಷ್ಟ ಮಾಡುತ್ತಿಲ್ಲ. ಹಾಗಾದ್ರೆ ಸರ್ಕಾರಕ್ಕೆ ಗೊತ್ತಿಲ್ಲ ಅಂತ ಅಂದ್ರೆ ಹೇಗೆ..? ಇದರಿಂದ ಇನ್ಯಾರದ್ದೋ ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಅಷ್ಟೇ ಎಂದು ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ; ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಬಿಜೆಪಿ ಪಕ್ಷದಲ್ಲಿಯೇ ಇದ್ರು ಕೂಡ ಕಾಂಗ್ರೆಸ್ ಪಕ್ಷದ ನಾಯಕರ ಜೊತೆಗೆ…
ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 15 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಶನಿವಾರ, ಮಾರ್ಚ್. 15 ) ಹತ್ತಿ ಮಾರುಕಟ್ಟೆ…
ಚಿತ್ರದುರ್ಗ; ನಗರ ಠಾಣೆ ಪಿಎಸ್ಐ ಗಾದಿಲಿಂಗಪ್ಪ ಮೇಲೆ ತುಮಕೂರು ಜಿಲ್ಲೆಯ ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ…
ಬೆಂಗಳೂರು; ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಈಗಾಗಲೇ…
ಈ ರಾಶಿಯವರು ವ್ಯಾಪಾರ ವೈಹಿವಾಟಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ, ಈ ರಾಶಿಯವರು ಸೋಲಿಲ್ಲದ ಸರದಾರನಾಗಿ ಮುಟ್ಟಿದ್ದೆಲ್ಲ ಚಿನ್ನ. ಶನಿವಾರದ ರಾಶಿ ಭವಿಷ್ಯ…
ಸುದ್ದಿಒನ್, ಹಿರಿಯೂರು, ಮಾರ್ಚ್. 14 : ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಉಪ ಸಭಾಪತಿ ರುದ್ರಪ್ಪ ಲಮಾಣಿಯವರು…