in ,

ನಟಿ ಜ್ಯೋತಿಕಾಗೆ ಈಗ್ಲೂ ಫುಲ್ ಡಿಮ್ಯಾಂಡಪ್ಪೋ..ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೇ ಫಾಲೋವರ್ಸ್..!

suddione whatsapp group join

ಇದು ಮೊಬೈಲ್ ಕಾಲ. ಸ್ಮಾರ್ಟ್ ಫೋನ್ ಕೈನಲ್ಲಿತ್ತು ಅಂದ್ರೆ ಮುಗೀತು. ಬೇರೆ ಏನೂ ಬೇಕಾಗಿಲ್ಲ. ಇನ್ನು ಹೆಚ್ಚೆಂದರೆ ಏನ್ ಬೇಕಾದ್ರೂ ಬಿಟ್ಟಿರ್ತಾರೆ ಜನ ಮೊಬೈಲ್ ಬಿಟ್ಟಿರಲ್ಲ ಅಂತಹ ಕಾಲ ಬಂದಿದೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲೇ ಮುಳುಗಿರುವವರ ಸಂಖ್ಯೆ ಹೆಚ್ಚು. ಇದನ್ನರಿತ ಸೆಲೆಬ್ರೆಟಿಗಳು ಕೂಡ ತಮ್ಮ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲೇ ಹೆಚ್ಚು ಸಂಪರ್ಕ ಮಾಡ್ತಾರೆ.

ಎಷ್ಟೇ ವರ್ಷ ಆದ್ರೂ ಒಂದಷ್ಟು ನಟ-ನಟಿಯರ ಕ್ರೇಜ್ ಕಡಿಮೆಯಾಗಲ್ಲ. ಆ ಸಾಲಿಗೆ ಸೇರೋರು ಅಂದ್ರೆ ನಟಿ ಜ್ಯೋತಿಕಾ. ಆಗಿನ ಸಮಯದಲ್ಲೇ ಕನ್ನಡದಲ್ಲೂ ಸಿನಿಮಾ ಮಾಡಿ ಸೈ ಎನಿಸಿಕೊಂಡವರು, ಕನ್ನಡಿಗರ ಹೃದಯವನ್ನ ಕದ್ದವರು. ಜ್ಯೋತಿಕಾ ಅಂದ್ರೆ ಈಗ್ಲೂ ಫುಲ್ ಕ್ರೇಜ್. ಅದಕ್ಕೆ ಸಾಕ್ಷಿ ಸೋಷಿಯಲ್ ಮೀಡಿಯಾ.

ಹೌದು, ಇತ್ತೀಚೆಗೆ ಎಲ್ಲಾ ಸೆಲೆಬ್ರೆಟಿಗಳು ಸೋಷಿಯಲ್ ಮೀಡಿಯಾ ಫಾಲೋ ಮಾಡೇ ಮಾಡ್ತಾರೆ. ಜ್ಯೋತಿಕಾ ಸೋಷಿಯಲ್ ಮೀಡಿಯಾದಿಂದ ಕೊಂಚ ದೂರವೇ ಇದ್ರು. ಹೀಗಾಗಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟಿ ಏನ್ ಮಾಡ್ತಿದ್ದಾರೆ ಅಂತ ತಿಳಿಯೋ ಕುತೂಹಲ. ಅವರ ಆಸೆಯಂತೆ ನಟಿ ಜ್ಯೋತಿಕಾ ಕೂಡ ಸೋಷಿಯಲ್ ಮೀಡಿಯಾಗೇನೋ ಎಂಟ್ರಿ ಕೊಟ್ರು.

ಜ್ಯೋತಿಕಾ ಎಂಟ್ರಿಯಾಗುತ್ತಿದ್ದಂತೆ, ಫ್ಯಾನ್ಸ್ ಗೆ ಹಬ್ಬದೂಟ. ಎಲ್ಲೆಲ್ಲಿದ್ರೂ ಓಡೋಡಿ ಬಂದಿದ್ದಾರೆ. ಜ್ಯೋತಿಕಾ ಅವರ ಅಕೌಂಟ್ ಚೆಕ್ ಮಾಡಿದ್ದಾರೆ. ಜ್ಯೋತಿಕಾ ಮೊದಲ ಪೋಸ್ಟ್ ಭಾರತದ ಮ್ಯಾಪ್ ಹಿಡಿದ ಫೋಟೋ ಹಾಕಿದ್ದಾರೆ. ಸಿಕ್ಕಾಪಟ್ಟೆ ಲೈಕ್ ಸಿಕ್ಕಿದೆ. ಅಷ್ಟೇ ಅಲ್ಲ ಕೇವಲ ಎರಡೇ ಗಂಟೆಯಲ್ಲಿ ಜ್ಯೋತಿಕಾ ಅವ್ರನ್ನ ಫಾಲೊಕ ಮಾಡಿದ್ದು, 1.4 ಮಿಲಿಯನ್ ಫಾಲೋವರ್ಸ್ ಸಿಕ್ಕಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಕೇರಳದಲ್ಲಿ‌ ಸೋಂಕಿತರ ಸಂಖ್ಯೆ ಹೆಚ್ಚಳ : ದಕ್ಷಿಣ ಕನ್ನಡದಲ್ಲಿ ಮತ್ತಷ್ಟು ಟೈಟ್ ರೂಲ್ಸ್

ಲಂಕೆ’ಯಲ್ಲಿ ಲೂಸ್ ಮಾದ ಯೋಗಿ ನಯಾ ಅವತಾರ