
ಬೆಂಗಳೂರು: ಪ್ರೀತಿಯ ಪಕ್ಷಿಗಳಾಗಿ ಹಾರಾಡುತ್ತಿದ್ದ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಾಳೆ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸರಳವಾಗಿ, ಸಾಂಪ್ರಾದಾಯಿಕವಾಗಿ ನಡೆಯಲಿದೆ. ಎರಡು ಕುಟುಂಬಸ್ಥರು ಆಶ್ರಮದಲ್ಲಿ ಉಳಿದುಕೊಂಡಿದ್ದಾರೆ. ಮದುವೆಗೆ ಎಲ್ಲಾ ಸಿದ್ಧತೆಗಳು ನಡೆದಿದ್ದು, ನಾಳಿನ ಮುಹೂರ್ತದಲ್ಲಿ ಇಬ್ಬರು ಸತಿ ಪತಿಯಾಗಲಿದ್ದಾರೆ.
ವಸಿಷ್ಠ ಸಿಂಹ ಮೂಲತಃ ಮೈಸೂರಿನವರೇ ಆಗಿದ್ದಾರೆ. ಜೊತೆಗೆ ಇಬ್ಬರಿಗೂ ಈ ಆಶ್ರಮ ತುಂಬಾ ಇಷ್ಟವಾದ ಆಶ್ರಮ ಹೀಗಾಗಿ ಇದೇ ಆಶ್ರಮದಲ್ಲಿ ಮದುವೆಯಾಗಬೇಕು ಎಂದು ನಿರ್ಧಾರ ಮಾಡಿದ್ದಾರೆ. ಕುಟುಂಬಸ್ಥರು ಹಾಗೂ ಕೆಲವು ಆಪ್ತರಿಗಷ್ಟೇ ನಾಳೆಯ ಮದುವೆಗೆ ಆಹ್ವಾನ ನೀಡಲಾಗಿದೆ. ಜನವರಿ 28ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಳ್ಳಲಿದೆ. ಆರತಕ್ಷತೆಯ ಸಮಾರಂಭಕ್ಕೆ ಎಲ್ಲರನ್ನು ಆಹ್ವಾನ ಮಾಡಲಾಗಿದೆ.
ಇನ್ನು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಪ್ರೀತಿಸಿ ಮದುವೆಯಾಗುತ್ತಿರುವವರು. ಇವರಿಬ್ಬರ ಪ್ರೀತಿ ಕೇಳಿ ಎಲ್ಲರಿಗೂ ಆಶ್ಚರ್ಯವಾಗಿತ್ತು. ಅಷ್ಟಾಗಿ ಯಾರಿಗೂ ಹೇಳದೆ, ಖಾಸಗಿಯಾಗಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ.

GIPHY App Key not set. Please check settings