
ಗುವಾಹಟಿ: ಪಠಾಣ್ ಸಿನಿಮಾದಿಂದ ಶಾರುಖ್ ಖಾನ್ ಗೆ ಈ ಬಾರಿ ಸಕ್ಸಸ್ ಸಿಗಲಿದೆ. ಸತತ ಸೋಲು ಕಂಡ ಶಾರುಖ್ ಖಾನ್ ಪಠಾಣ್ ಮೇಲೆ ಬಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಸಿನಿಮಾದ ಸಾಂಗ್ ರಿಲೀಸ್ ಆದ ಮೇಲಿಂದಾನೇ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಸೆನ್ಸಾರ್ ಮಂಡಳಿಯಿಂದಾನೂ ಒಂದಷ್ಟು ಸೀನ್ ಗಳನ್ನು ತೆಗೆದು ಹಾಕಿ, ರಿಲೀಸ್ ಮಾಡಲು ಸೂ ನೆ ನೀಡಲಾಗಿತ್ತು. ಇದೀಗ ಪಠಾಣ್ ಸಿನಿಮಾದ ವಿಚಾರ ಅಸ್ಸಾಂ ಸಿಎಂ ತನಕ ಕರೆ ಹೋಗಿದೆ.
ನಟ ಶಾರೂಖ್ ಖಾನ್ ಅಸ್ಸಾಂ ಸಿಎಂ ಗೆ ಕರೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಂತ್ ಶರ್ಮಾ, ಈ ಮೊದಲು, ಶಾರುಖ್ ಖಾನ್ ಎಂದರೆ ಯಾರು..? ನಾನು ಅವರ ಸಿನಿಮಾಗಳನ್ನು ನೋಡುವುದಿಲ್ಲ. ಹೀಗಾಗಿ ನನಗೆ ಅವರ ಪರಿಚಯ ಅಷ್ಟಾಗಿ ಇಲ್ಲ ಎಂದು ಹೇಳಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿತ್ತು.
ಈ ವಿಚಾರ ವೈರಲ್ ಆದ ಬೆನ್ನಲ್ಲೇ ಶಾರುಖ್ ಖಾನ್ ಖುದ್ದು, ಸಿಎಂ ಶರ್ಮಾ ಅವರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಶರ್ಮಾ, ಶಾರುಖ್ ಖಾನ್ ನನಗೆ ಕರೆ ಮಾಡಿದ್ದರು. ಶಾರುಖ್ ಖಾನ್ ಅವರ ಪಠಾಣ್ ಸಿನಿಮಾದ ವಿರುದ್ಧ ಗುವಾಹಟಿಯಲ್ಲಿ ನಡೆದ ಅಹಿತಕರ ಘಟನೆ ಬಗ್ಗೆ ಮಾತನಾಡಿದರು. ಕಳವಳ ವ್ಯಕ್ತಪಡಿಸಿದರು. ಈ ನೆಲದ ಕಾನೂನು ಕಾಪಾಡುವುದು ನಮ್ಮ ಸರ್ಕಾರದ ಕರ್ತವ್ಯ. ಘಟನೆ ಬಗ್ಗೆ ನಮ್ಮ ಸರ್ಕಾರ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

GIPHY App Key not set. Please check settings