in ,

ಹೆತ್ತವರ ಬಗ್ಗೆಯೇ ದೂರು ನೀಡಿದ ಖ್ಯಾತ ನಟ..ಕಾರಣ ಏನು ಗೊತ್ತಾ..?

suddione whatsapp group join

ಚೆನ್ನೈ: ತಮಿಳಿನ ಖ್ಯಾತ ನಟ ವಿಜಯ್ ಥಳಪತಿ ಇದ್ದಕ್ಕಿದ್ದ ಹಾಗೇ ಕುಟುಂಬಸ್ಥರ ಮೇಲೂ ಗರಂ ಆಗಿದ್ದಾರೆ. ತಂದೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತಂದೆ-ತಾಯಿ ಸೇರಿ 11 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಸದ್ಯ, ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ವಿಜಯ್ ತಂದೆ 2020ರಲ್ಲಿ ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್ ಪಕ್ಷ ಆರಂಭಿಸಿದ್ದರು. ಆದರೆ ಅದು ವಿಜಯ್‍ಗೆ ಇಷ್ಟವಿಲ್ಲ. ನನ್ನ ತಂದೆಯ ಪಕ್ಷ ಎಂದು ಸಫೋರ್ಟ್ ಮಾಡಬೇಡಿ. ಆ ಪಕ್ಷದ ಜೊತೆಗೆ ನೇರವಾಗಿ, ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ.

ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್ ಪಾರ್ಟಿ ಜೊತೆಗೆ ನನ್ನ ಹೆಸರು ಸೇರಿಸಿದರೆ, ಫೋಟೋ ಬಳಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಇದು ದೊಡ್ಡಮಟ್ಟದ ಸುದ್ದಿಯಾಗಿತ್ತು. ಇದೀಗ ಆ ಬಗ್ಗೆಯೇ ಪ್ರಕರಣ ದಾಖಲು ಮಾಡಲಾಗಿದೆ. ವಿಜಯ್ ಹೆಸರು, ಅಭಿಮಾನಿಗಳ ಸಂಘಗಳ ಹೆಸರನ್ನು ಎಲ್ಲಿಯೂ ಬಳಸದಂತೆ ತಡೆಯಾಜ್ಞೆ ತರಲಾಗಿದೆ. 11 ಜನರ ವಿರುದ್ಧ ಪ್ರಕರಣದ ದಾಖಲಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಐದು ವರ್ಷದ ಪ್ರೀತಿ..ಮದುವೆಯಾಗುವ ವೇಳೆ ಮನಸು ಬದಲು..ಪ್ರೇಯಸಿಯಿಂದ ಗೂಸಾ..!

ಲಸಿಕೆಯ ಗ್ರಾಫ್ ಹಾಕಿ ಕೇಂದ್ರ ಸರ್ಕಾರವನ್ನ ಟೀಕಿಸಿದ ರಾಹುಲ್ ಗಾಂಧಿ..!