
ಬೆಂಗಳೂರು: ಕಾಂತಾರ ಸಿನಿಮಾ ಆದ್ಮೇಲೆ ರಿಷಬ್ ಶೆಟ್ಟಿ ಕ್ರೇಜ್ ಹೆಚ್ಚಾಗಿದೆ. ರಿಷಬ್ ಶೆಟ್ಟಿ ಎಲ್ಲಿ ಹೋದ್ರು, ಎಲ್ಲಿ ಬಂದ್ರು ಫ್ಯಾನ್ಸ್ ಫಾಲೋ ಮಾಡುತ್ತಾರೆ. ಈ ಖ್ಯಾತಿಯ ಬೆನ್ನಲ್ಲೇ ರಿಷಬ್ ಶೆಟ್ಟಿ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಮಾತಿದೆ. ಬಾರೀ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಸ್ಪಷ್ಟನೆ ಕೂಡ ನೀಡಿದ್ದಾರೆ.

ಪತ್ರಕರ್ತರ ಚಲನಚಿತ್ರ ಪತ್ರಕರ್ತರ ಸಂಘದಿಂದ ಮುಖಾಮುಖಿ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಅತಿಥಿಯಾಗಿ ಬಂದಿದ್ದರು. ಈ ವೇಳೆ ಪತ್ರಕರ್ತರು ಈ ಬಾರಿಯ ಚುನಾವಣೆಯಲ್ಲಿ ನೀವೂ ಸ್ಪರ್ಧಿಸುತ್ತೀರಂತೆ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ರಿಷಬ್ ಶೆಟ್ಟಿ, ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದೀನಿ. ಸಮಾಜಸೇವೆ ಮಾಡುವುದಕ್ಕೆ ರಾಜಕಾರಣವೇ ಬೇಕಿಲ್ಲ ಎಂದಿದ್ದಾರೆ.
ಬಳಿಕ ಈ ಬಾರಿಯ ಚುನಾವಣೆ ವೇಳೆ ನೀವೂ ಎಲ್ಲಿ ಇರುತ್ತೀರಿ ಎಂಬ ಪ್ರಶ್ನೆ ಎದುರಾಗಿತ್ತು. ಆಗ ರಿಷಬ್, ಕಾಂತಾರ ಸಿನಿಮಾದ ಕೆಲಸದಲ್ಲಿ ಇರುವೆ. ಮತದಾನ ನಮ್ಮೆಲ್ಲರ ಹಕ್ಕು. ತಪ್ಪದೆ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವೆ ಎಂದು ಹೇಳುವ ಮೂಲಕ ರಾಜಕಾರಣಕ್ಕೆ ಬರುತ್ತಾರೆ ಎಂಬ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

GIPHY App Key not set. Please check settings