ಯಾರು ಈ ಮೀಮ್ಸ್ ಮಾಡಿದ್ದು..? ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ ನಟ ಪ್ರಕಾಶ್ ರಾಜ್

 

ಗಗನಕ್ಕೇರಿದ್ದ ಪೆಟ್ರೋಲ್ ಬೆಲೆ ಕೊಂಚವೇ ಕೊಂಚ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ಟಮೋಟೋ ಬೆಲೆ ಗಗನಕ್ಕೇರಿದೆ. ಒಂದು ಕೆಜಿಗೆ 100 ರೂಪಾಯಿ ದಾಟಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಈ ಅವಾಂತರ ಸೃಷ್ಟಿಯಾಗಿದೆ. ತರಕಾರಿಗಳ ಬೆಲೆಯೆಲ್ಲಾ ಹೆಚ್ಚಲಕವಾಗಿದೆ.

ಇದನ್ನೆಲ್ಲಾ ಮೀಮ್ಸ್ ಮಾಡಿ, ಮನರಂಜನೆಯ ಜೊತೆಗೆ ಎಚ್ಚರಿಕೆಯನ್ನು ಮುಟ್ಟಿಸುವವರಿದ್ದಾರೆ. ಅದಕ್ಕೆ ಪ್ರಕಾಶ್ ರಾಜ್ ಅವರ ಸಿನಿಮಾವೇ ಸ್ಪೂರ್ತಿಯಾಗಿದೆ. ಇದು ಕೂಡ ಪ್ರಕಾಶ್ ರಾಜ್ ಅವರ ಕಣ್ಣಿಗೆ ಬಿದ್ದಿದ್ದು, ಖುಷಿ ಖುಷಿಯಲ್ಲೇ ಇದು ಯಾರು ಮಾಡಿದ್ದು ಎಂದು ಪ್ರಶ್ನಿಸಿದ್ದಾರೆ.

2010ರಲ್ಲಿ ಪ್ರಕಾಶ್ ರಾಜ್ ನಟಿಸಿದ್ದ ಸಿಂಗಂ ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾದ ಒಂದು ಫೋಟೋ ಬಳಸಿಕೊಂಡು ಪೆಟ್ರೋಲ್ ಹಾಗೂ ಟೊಮ್ಯಾಟೊ ರೇಟ್ ಹೈಕ್ ಆಗಿರುವ ಬಗ್ಗೆ ತೋರಿಸಿದ್ದಾರೆ. ನಟ ಸೂರ್ಯ ಕೂಡ ಈ ಮೀಮ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಸೂರ್ಯ ಫೋನ್ ನಲ್ಲಿ ಮಾತನಾಡುತ್ತಿದ್ದು, ಅದರಲ್ಲಿ ಲೀಟರ್ ಪೆಟ್ರೋಲ್ ಗೆ 110 ರೂ ಆಗಿದೆ ಎಂದು ಹೇಳುತ್ತಿರುವಂತೆ. ಅದರ ಕೆಳಗೆ ಇರುವ ಚಿತ್ರ ಟೊಮೋಟೋ ಕೂಡ 110 ಆಗಿದೆ ಅಂತ ಪ್ರಕಾಶ್ ರಾಜ್ ಹೇಳುತ್ತಿರುವಂತೆ ಮೀಮ್ಸ್ ಮಾಡಿದ್ದಾರೆ. ಈ ವೈರಲ್ ಆದ ಫೋಟೋವನ್ನ ಪ್ರಕಾಶ್ ರಾಜ್ ತಮ್ಮ ಟ್ವಿಟ್ಟನಲ್ಲಿ ಶೇರ್ ಮಾಡಿಕೊಂಡಿದ್ದು, #justasking ಹ್ಯಾಶ್ ಟ್ಯಾಗ್ ಬಳಸಿ ಇದನ್ನ ಮಾಡಿದ್ದು ಯಾರು ಎಂದು ಕೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *