ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಿ : ಮಯೂರ ಜಯಕುಮಾರ್

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಫೆ. 05 : ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ 6 ವಿಧಾನಸಭಾ ಸ್ಥಾನಗಳಲ್ಲಿ 5 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದಕ್ಕೆ ಪಕ್ಷ ಕಾರ್ಯಕರ್ತರಿಗೆ ಅಭಾರಿಯಾಗಿದೆ ಅವರಿಗೂ ಸಹಾ ಸ್ಥಾನವನ್ನು ನೀಡಬೇಕಿದೆ. ಈ ಹಿನ್ನಲೆಯಲ್ಲಿ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸುವ ಹೊಣೆಗಾರಿಕೆ ಪಕ್ಷದ ಮುಖಂಡರಾದ ನಮ್ಮಲಿದೆ ಎಂದು  ಅಖಿಲ ಭಾರತ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಕಾರ್ಯದರ್ಶಿಗಳಾದ ಮಯೂರ ಜಯಕುಮಾರ್ ತಿಳಿಸಿದರು.

ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧಿ ಭಾರತ, ಪಂಚಾಯಿತಿ ಮತ್ತು ವಾರ್ಡ್ ಸಮಿತಿಗಳ ಹಾಗೂ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಪ್ರಯುಕ್ತ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಸಂಘಟನೆಯನ್ನು ಚುನಾವಣೆಯ ಪೂರ್ವದಲ್ಲಿಯೇ ಸಂಘಟನೆಯನ್ನು ಶುರು ಮಾಡಿದ್ದೆವು.. ಅದರ ಪರಿಣಾಮವಾಗಿ ರಾಜ್ಯದಲ್ಲಿ 135 ಸ್ಥಾನಗಳನ್ನು ಗೆದ್ದು ಪಕ್ಷ ಅಧಿಕಾರಕ್ಕೆ ಬಂದಿತು.ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಾವು ಸಂಘಟನೆಯನ್ನು ತಡವಾಗಿ ಪ್ರಾರಂಭಿಸಿದ ಪರಿಣಾಮ ಚುನಾವಣೆಯಲ್ಲಿ ಸೋಲಬೇಕಾಯಿತು. ಆದ್ದರಿಂದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಯ ಚುನಾವಣೆಯ ಇನ್ನೂ ಪ್ರಾರಂಭವಾಗಲು ಸಮಯ ಇರುವುದರಿಂದಲೇ ಈಗಿನಿಂದಲೇ ಪಕ್ಷ ಸಂಘಟನೆಯನ್ನು ಮಾಡಿದರೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಾಗುತ್ತದೆ ಎಂದರು.

 

ಕಾಂಗ್ರೆಸ್ ಪಕ್ಷ ತಾಯಿ ಹೃದಯ ಇರುವಂತ ಪಕ್ಷ. ಪಕ್ಷ ಯಾವತ್ತೂ ಕಾರ್ಯಕರ್ತರಿಗೆ ಅನ್ಯಾಯ ಮಾಡಿಲ್ಲ..ಪಕ್ಷದಲ್ಲಿ ಸಂಘಟನೆಯು ಸದೃಢವಾಗಿದ್ದರೆ.ಆಡಳಿತ ಸದೃಢವಾಗಿರುತ್ತೆ.ಪಕ್ಷದಲ್ಲಿನ ದೊಡ್ಡ ನಾಯಕರುಗಳು ಶಾಸಕರುಗಳು, ಸಚಿವರು, ನಿಗಮ ಮಂಡಳಿಯ ಅಧ್ಯಕ್ಷರಾಗುತ್ತಾರೆ ಆದರೆ ಸಾಮಾನ್ಯ ಕಾರ್ಯಕರ್ತರಿಗೆ ಆ ಸ್ಥಾನಮಾನ ಸಿಗಬೇಕು.ನಾನು ಈ ಬಗ್ಗೆ ಕಮಿಟಿಯ ಗಮನಕ್ಕೆ ತರುತ್ತೇನೆ.ಕಾಂಗ್ರೆಸ್ ಪಕ್ಷ ಒಂದು ಕುಟುಂಬವಿದ್ದಂತೆ.. ಕುಟುಂಬ ನಮಗೆ ಏನು ಮಾಡಿದೆ ಎನ್ನುವ ಬದಲು. ಕುಟುಂಬಕ್ಕೆ ನಾವು ಏನು ಮಾಡಿದ್ದೇವೆ ಎಂಬುದು ಮುಖ್ಯ.. ಆದರೆ ಕುಟುಂಬ ನಮ್ಮ ಬೆಂಬಲಕ್ಕೆ ಸದಾ ಇರುತ್ತದೆ ಎಂದು ಮಯೂರು ತಿಳಿಸಿದರು.

ನಿಮಗೆ ಸಭೆಯ ಬಗ್ಗೆ ನಿರ್ದೇಶನ ಇದ್ದರೂ ಸಹ ಬಹಳಷ್ಟು ಜನ ಬಂದಿಲ್ಲ.. ನೀವು ಶಿಸ್ತಿನಿಂದ ಇದ್ದರೆ ಒಳ್ಳೆಯದು.ಇಲ್ಲ ಅಂದರೆ ನನಗೆ ಶಿಸ್ತು ಕಲಿಸುವುದು ಗೊತ್ತು.ಜಿಲ್ಲಾಧ್ಯಕ್ಷರಿಗೆ ಈಗಾಗಲೇ ನಿರ್ದೇಶನ ನೀಡಿದ್ದೇನೆ ಸಭೆಗೆ ಗೈರು ಹಾಜಾರಾದವರಿಗೆ ಶೋಕಸ್ ನೋಟೀಸ್ ನೀಡಲಿಕ್ಕೆ ಸೂಚಿಸಿದ್ದೆನೆ ಎಂದ ಅವರು ಜಿಲ್ಲೆಯಲ್ಲಿ 32 ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಗಳಿವೆ.ಪ್ರತಿ ಸದಸ್ಯ ಸ್ಥಾನಕ್ಕೂ ಒಬ್ಬ ಪಕ್ಷದ ಕೋ ಆರ್ಡಿನೇಟರನ್ನು ನೇಮಕ ಮಾಡಲಾಗುವುದು. ನಮ್ಮ ಸರ್ಕಾರದ ಎಲ್ಲಾ ಗ್ಯಾರಂಟಿಗಳು ಜನರಿಗೆ ತಲುಪಬೇಕು.. ನಮ್ಮ ಪಕ್ಷದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರೆ ನಮ್ಮ ಬೆಂಬಲಕ್ಕೆ ಜನ ನಿಲ್ಲುತ್ತಾರೆ ಎಂದು ಹೇಳಿದರು.

ಡಿಸಿಸಿ ಅಧ್ಯಕ್ಷ ತಾಜ್‍ಪೀರ್ ಮಾತನಾಡಿ, ಈಗಾಗಲೇ ವಿಧಾನಸಭೆಯಲ್ಲಿ ಜಿಲ್ಲೆಯಲ್ಲಿ 5  ಸ್ಥಾನಗಳನ್ನು ಗೆಲ್ಲಲಾಗಿದೆ, ಲೋಕಸಭಾ ಸ್ಥಾನ ಕಡಿಮೆ ಅಂತರದಿಂದ ಕೈ ತಪ್ಪಿದೆ. ಈಗ ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವನ್ನು ಸಾಧಿಸಿ ಅಧಿಕಾರವನ್ನು ಹಿಡಿಯಬೇಕಿದೆ ಇದಕ್ಕೆ ಈಗಿನಿಂದಲೇ ತಯಾರಿಯನ್ನು ಮಾಡಿಕೊಳ್ಳಬೇಕಿದೆ ಕ್ಷೇತ್ರದ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿದವರು ಅಲ್ಲಿ ಜನಪ್ರಿಯತೆಯನ್ನು ಗಳಿಸಿದವರನ್ನು ಗುರುತಿಸುವ ಕಾರ್ಯವಾಗ ಬೇಕಿದೆ ಎಂದರು.

 

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜೆಜೆಹಟ್ಟಿ ತಿಪ್ಪೇಸ್ವಾಮಿ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲುವನ್ನು ಸಾಧಿಸಿ ಅಧಿಕಾರವನ್ನು ಹಿಡಿಯಬೇಕಿದೆ, ಇದಕ್ಕಾಗಿ ಈಗಿನಿಂದಲೇ ಶ್ರಮವನ್ನು ಹಾಕಬೇಕಿದೆ. ಬೇರೆ ಪಕ್ಷದವರು ಚುನಾವಣಾ ಸಮಯದಲ್ಲಿ ವಿವಿಧ ರೀತಿಯಬ ತಂತ್ರಗಾರಿಕೆಯನ್ನು ಮಾಡುವುದರ ಮೂಲಕ ಚುನಾವಣೆಯನ್ನು ಗೆಲ್ಲುತ್ತಿದ್ದಾರೆ ಇದಕ್ಕೆ ಪ್ರತಿಯಾಗಿ ನಾವು ಸಹಾ ತಂತ್ರಗಾರಿಕೆಯನ್ನು ಮಾಡಿ ಜನರ ಸ್ನೇಹವನ್ನು ಸಂಪಾದಿಸಿ ಗೆಲುವನ್ನು ಸಾಧಿಸಬೇಕಿದೆ ಎಂದರು.

 

ಪೂರ್ವಬಾವಿ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ದ್ರಾಕ್ಷ ರಸ ಮಂಡಳಿಯ ಅಧ್ಯಕ್ಷರಾದ ಯೋಗಿಶ್ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಕುಮಾರಗೌಡ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಗೀತಾ ನಂದಿನಿಗೌಡ, ಪ್ರಕಾಶ್, ಉಲ್ಲಾಸ ಕಾರೇಹಳ್ಳಿ, ಲಕ್ಷ್ಮೀಕಾಂತ, ಖುದ್ದುಸ್, ಎನ್.ಡಿ.ಕುಮಾರ್, ಚಾಂದ್ ಪೀರ್. ಇಂದಿರಾ ನಜ್ಮಾತಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

suddionenews

Recent Posts

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ : ಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ : ಡಾ.ಶಾಲಿನಿ ರಜನೀಶ್

ಚಿತ್ರದುರ್ಗ. ಫೆ.05: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು,ಮರುಪಾವತಿಸುವಲ್ಲಿ ವಿಳಂಬ…

1 hour ago

ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ

ಚಿತ್ರದುರ್ಗ.ಫೆ.05: ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ ಸೂಕ್ತ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಮೂಲಭೂತ…

1 hour ago

ಹೆಣ್ಣು ಮಕ್ಕಳು ಶಿಕ್ಷಣವಂತರಾಗಿ, ಸ್ವಾವಲಂಬಿಯಾಗಬೇಕು :  ಡಾ.ನಾಗಲಕ್ಷ್ಮಿಚೌಧರಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

1 hour ago

ಹಿರೇಗುಂಟನೂರು ಲೈಂಗಿಕ ಪ್ರಕರಣ : ಪಿಡಿಒ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ : ಅನಂತಮೂರ್ತಿನಾಯ್ಕ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

1 hour ago

ಕಾಂಗ್ರೆಸ್ ನವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ : ಯತ್ನಾಳ್ ಬಗ್ಗೆ ರೇಣುಕಾಚಾರ್ಯ ಹಿಂಗ್ಯಾಕಂದ್ರು..?

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನು ಕೆಳಗೆ ಇಳಿಸಬೇಕೆಂದು ಯತ್ನಾಳ್ ಬಣ ಪ್ರಯತ್ನ ಪಡುತ್ತಿದೆ. ಇದರ ನಡುವೆ…

3 hours ago

ಉತ್ತಮ ಪೋಷಕಾಂಶಗಳುಳ್ಳ ಆಹಾರ ಸೇವಿಸಿ ಸದೃಢ ಆರೋಗ್ಯವಂತರಾಗಿ : ಶ್ರೀನಿವಾಸ ಮೂರ್ತಿ

ಚಿತ್ರದುರ್ಗ ಫೆ. 05 : ಉತ್ತಮ ಪೋಷಕಾಂಶಗಳುಳ್ಳ ಸಮತೋಲನ ಆಹಾರ ಸೇವನೆಯಿಂದ ಉತ್ತಮ ಸದೃಡ ಆರೋಗ್ಯವಂತರಾಗಬಹುದು ಎಂದು  ಬುದ್ಧನಗರ ಆರೋಗ್ಯ…

4 hours ago