in ,

ಎಸಿಬಿ ದಾಳಿ ; ಮೂವರು ಭೂಸ್ವಾಧೀನ ಅಧಿಕಾರಿಗಳು ಎಸಿಬಿ ವಶಕ್ಕೆ

suddione whatsapp group join

ಸುದ್ದಿಒನ್, ಚಿತ್ರದುರ್ಗ: ಹಿರಿಯೂರು ನಗರದಲ್ಲಿ ಮಹಿಳೆಯೊಬ್ಬರಿಂದ ಭೂಸ್ವಾಧೀನ ಅಧಿಕಾರಿಗಳು 6 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಹಿರಿಯೂರು ಭೂಸ್ವಾಧೀನ ವಿಶೇಷ ಅಧಿಕಾರಿಗಳಾದ ವೀರೇಶ್ ಕುಮಾರ್, ಮ್ಯಾನೇಜರ್ ಮೋಹನ್ ಕುಮಾರ್, ಹಾಗೂ ಕಾರು ಚಾಲಕ ಮನ್ಸೂರ್ ಅವರು ಎಸಿಬಿ ಬಲೆಗೆ ಸಿಕ್ಕಿಬಿದ್ದಿರುವ ಅಧಿಕಾರಿಗಳು.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಹಿರಿಯೂರು ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಭೂಸ್ವಾಧೀನ ಕಚೇರಿ ಹಾಗೂ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಾದ ಬಸವರಾಜ್ ಆರ್. ಮಗದುಮ್ ಹಾಗೂ ಪೋಲಿಸ್ ನಿರೀಕ್ಷಕರುಗಳಾದ ಪ್ರವೀಣ್ ಕುಮಾರ್, ಹಸನ್ ಸಾಬ್ ಹಾಗೂ ಸಿಬ್ಬಂದಿ  ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

Please wait while flipbook is loading. For more related info, FAQs and issues please refer to DearFlip WordPress Flipbook Plugin Help documentation.

ದೂರು ನೀಡಿರುವ ಮಹಿಳೆಯ ಜಮೀನು ಬೀದರ್ ನಿಂದ ಹಿರಿಯೂರು ಮೂಲಕ ಶ್ರೀರಂಗಪಟ್ಟಣ  ಹಾದು ಹೋಗುವ ಎನ್.ಹೆಚ್ -150 ರಸ್ತೆ ಬಳಿ‌ ಇದ್ದು, ರಸ್ತೆ ಕಾಮಗಾರಿಗೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ.

ಜಮೀನಿನ ಪರಿಹಾರ ಹಣ ನೀಡುವುದಕ್ಕೆ 9 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಮಹಿಳೆ ಒಪ್ಪದಿದ್ದಾಗ ಅಂತಿಮವಾಗಿ ಕಾರು ಚಾಲಕನ ಮಾತುಕತೆಯ ಮೂಲಕ 6 ಲಕ್ಷ ರೂಪಾಯಿ ಲಂಚ ನೀಡಲು ಒಪ್ಪಿಗೆ ನೀಡಿದ್ದಾರೆ.

ಮಂಗಳವಾರ ಸಂಜೆ 7.30 ಕ್ಕೆ  ಮಹಿಳೆಯಿಂದ ಕಾರು ಚಾಲಕ ಹಣ ಪಡೆದು ಮ್ಯಾನೇಜರ್ ಮೋಹನ್ ಕುಮಾರ್ ಗೆ ಕೊಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ..ಆತನಿಗೆ 20 ವರ್ಷ..ಸಾಥ್ ಕೊಟ್ಟಕಾಗೆ 5 ವರ್ಷ ಕಠಿಣ ಶಿಕ್ಷೆ..!

ತಿರುಪತಿಯಲ್ಲಿ ಇನ್ಮುಂದೆ ಲಡ್ಡು ಜೊತೆಗೆ ಘಮಘಮಿಸೋ ಅಗರಬತ್ತಿಯೂ ಸಿಗುತ್ತೆ