ಕೋಲ್ಕತ್ತಾ: ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ಅಳಿಯ ಹಾಗೇ ಟಿಎಂಸಿ ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ಇಂದು ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅಭಿಷೇಕ್, ನನ್ನ ವಿರುದ್ಧದ ಆರೋಪ ಸಾಬೀತಾದ್ರೆ ಸಾರ್ವಜನಿಕವಾಗಿಯೇ ನೇಣಿಗೆ ಶರಣಾಗ್ತೀನಿ ಎಂದಿದ್ದಾರೆ.
ಅಕ್ರಮ ಹಣ ವರ್ಗಾವಣೆ ವಿಚಾರ ಜಾರಿ ನಿರ್ದೇಶನಾಲಯ ಅಭಿಷೇಕ್ ಬ್ಯಾನರ್ಜಿಗೂ ನೋಟೀಸ್ ನೀಡಿದೆ. ಈ ಹಿನ್ನೆಲೆ ವಿಚಾರಣೆಗೆ ಹಾಜರಾಗಲು ಹೊರಟಿದ್ದಾಗ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತಿರೋದ್ರಿಂದ ರಾಜಕೀಯ ವೈಷಮ್ಯ ಮಾಡ್ತಾ ಇದೆ. ನಾನು ಅಕ್ರಮವಾಗಿ 10 ಪೈಸೆಯನ್ನು ವರಚಗಾವಣೆ ಮಾಡಿಲ್ಲ. ಕೇಂದ್ರದ ಯಾವುದೇ ಏಜೆನ್ಸಿಯಾದರು ಸರಿ ನಾನು ಅಕ್ರಮವಾಗಿ 10 ಪೈಸೆಯನ್ನ ವರ್ಗಾವಣೆ ಮಾಡಿರೋದನ್ನ ತೋರಿಸಿದ್ರೆ, ನಾನೇ ಸಾರ್ವಜನಿಕವಾಗಿ ಬಂದು ನೇಣಿಗೆ ಶರಣಾಗ್ತೀನಿ ಎಂದಿದ್ದಾರೆ.