ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188
ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 : ಮಹಾಶಿವರಾತ್ರಿ ಅಂಗವಾಗಿ ಮೂರು ದಿನಗಳ ಕಾಲ ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಶಿವಲಿಂಗಗಳ ಪ್ರತಿಷ್ಠಾಪನೆ ಮತ್ತು ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದು ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದ ವಿಮಲಕ್ಕೆ ಹೇಳಿದರು.
ನಗರದ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಗರದ ಬಿಇಒ ಕಚೇರಿ ಆವರಣದಲ್ಲಿ ಮೂರು ದಿನಗಳ ಕಾಲ ಶಿವರಾತ್ರಿ ಪ್ರಯುಕ್ತ ಪೂಜಾ ಕಾರ್ಯ ನೆರವೇರಿಸಲಾಗುವುದು. ಕೆಲ ಹಬ್ಬಗಳು ಜಾತಿ, ಜನಾಂಗ, ಬುಡಕಟ್ಟು ಆಚರಣೆ ವಿಭಾಗವಾಗಿ ಕಾಣುತ್ತೇವೆ. ಆದರೆ, ಮಹಾಶಿವರಾತ್ರಿ ಮನುಕುಲವೇ ಆಚರಿಸುವ ಹಬ್ಬವಾಗಿದೆ.
ಶಿವರಾತ್ರಿ ಅಂಗವಾಗಿ ಫೆ.25 ರಂದು ರೈತ ಸಶಕ್ತೀಕರಣೋತ್ಸವ, ಫೆ.26 ರಂದು ಶಿವರಾತ್ರಿ ಮಹೋತ್ಸವ, ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ, ಫೆ.27ರಂದು ಭಕ್ತರಿಗೆ ಅಭಿನಂದನಾ ಉತ್ಸವ ಆಚರಿಸುತ್ತೇವೆ. ಮೂರುದಿನಗಳ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಶಿವ ಪರಮಾತ್ಮ ಎಂದರೆ ಯಾರು, ತಪಸ್ವಿ ಶಂಕರನೆಂದರೆ ಯಾರು, ಶಿವಲೋಕ ಎಲ್ಲಿದೆ, ಗುಹ್ಯ ರಹಸ್ಯ ಹೀಗೆ ಆಧ್ಯಾತ್ಮಿಕ ವಿಚಾರ ಚಿಂತನೆಗಳ ಗೋಷ್ಟಿಗಳು ನಡೆಯುತ್ತವೆ. ಇದನ್ನು ಶಿವಭಕ್ತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಎಂ.ಎಸ್. ರಾಧಾ, ಓಂಕಾರಮ್ಮ, ಲಲಿತಮ್ಮ, ಚೂಡಾಮಣಿ ಇದ್ದರು.
ಸಾಕಷ್ಟು ಜನರಿಗೆ ಪಿತ್ತದ ಸಮಸ್ಯೆ ಇರುತ್ತದೆ. ಪಿತ್ತ ಜಾಸ್ತಿಯಾದಷ್ಟು ಮನುಷ್ಯನಿಗೆ ಕಂಫರ್ಟಬಲ್ ಇರುವುದೇ ಇಲ್ಲ. ಪಿತ್ತ ಹೆಚ್ಚಾದರೆ ತಲೆ ಸುತ್ತು…
ಈ ರಾಶಿಯ ಮಠದ ಸಾರಥ್ಯ ಹೊಂದಿದವರಿಗೆ ತೊಂದರೆ, ಈ ರಾಶಿಯ ಗಂಡ ಹೆಂಡತಿ ಎಷ್ಟುಚೆನ್ನಾಗಿದ್ದರೆ ಗೊತ್ತು, ಶನಿವಾರದ ರಾಶಿ ಭವಿಷ್ಯ…
ಸುದ್ದಿಒನ್ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿರುವ ಬಾಗೇಶ್ವರ ಧಾಮ ಪೀಠದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಏಪ್ರಿಲ್ 2 ರಂದು…
ಅಣ್ಣಾಮಲೈ ಅಂದ್ರೆನೇ ಅದೆಷ್ಟೋ ಜನ ಗಢಗಢ ಅಂತ ನಡುಗುತ್ತಾ ಇದ್ದರು. ಕರ್ನಾಟಕದ ರಿಯಲ್ ಸಿಂಗಂ ಆಗಿ ಘರ್ಜಿಸಿದ್ದರು. ಆದರೆ ಬಿಜೆಪಿಗೆ…
ಚಿನ್ನ ಬೆಳ್ಳಿ ದರ ಏರಿಕೆಯತ್ತಲೇ ಸಾಗುತ್ತಿತ್ತು. ಇಂದು ಮಹಿಳೆಯರ ಚಿನ್ನದ ಕನಸಿಗೆ ಬೇಸರವನ್ನೇ ತಂದಿತ್ತು. ಇದೀಗ ದಿಢೀರನೇ ಚಿನ್ನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 04…