ಚಿತ್ರದುರ್ಗ : ರಂಗಭೂಮಿಯಲ್ಲಿ ವಿಶಿಷ್ಟ ಸೇವೆಸಲ್ಲಿಸಿರುವ ಅನೇಕ ಚೈತನ್ಯಗಳು ನಮ್ಮ ಕಣ್ಣಮುಂದಿವೆ ಅಂತಹ ಅದಮ್ಯ ಚೇತನಗಳ ಬಗ್ಗೆ ಮಕ್ಕಳಿಗೆ ತಿಳಿಸಿದರೆ ಸುಸ್ಥಿರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಪ್ರಗತಿಪರ ಚಿಂತಕ ಡಾ.ಮಲ್ಲಿಕಾರ್ಜುನಪ್ಪ ಹೇಳಿದರು.
ನಗರದ ಹೇಮರೆಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಶನಿವಾರ ರಂಗಸೌರಭ ಕಲಾ ಸಂಘ, ಜಿಲ್ಲಾ ಕಸಾಪ ಹಾಗು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ನೀನಾಸಂ ಕೆ.ವಿ.ಸುಬ್ಬಣ್ಣ ಹಾಗು ಡಾ.ರಾಮಚಂದ್ರನಾಯಕ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈದಿನ ಇಬ್ಬರು ಮಹನೀಯರ ಸಂಸ್ಮರಣೆ ಏರ್ಪಡಿಸಿರುವ ಸಂಘಟನೆಗಳಿಗೆ ಧನ್ಯವಾದ ಹೇಳುವೆ. ಕಾರಣ ರಂಗಭೂಮಿ, ಅಭಿನಯ, ಕಲೆ ಇವುಗಳು ಇತ್ತೀಚೆಗೆ ಕಣ್ಮರೆಯಾಗುತ್ತಿವೆ. ಮಕ್ಕಳಿಗೆ ಇವರ ಬಗ್ಗೆ ಪರಿಚಯಿಸಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿ ನಾಟಕಗಳು ತನ್ನದೇ ಆದ ಪ್ರಭಾವವನ್ನು ಬೀರುತ್ತವೆ. ಶಿಕ್ಷಕರು ಈ ನಾಟಕ, ಅಭಿನಯ, ಕಲೆ ರೂಢಿಸಿಕೊಂಡರೆ ಮಕ್ಕಳಿಗೆ ತಿಳಿಸುವ ವಿಷಯಗಳನ್ನು ಭಿನ್ನರೀತಿಯಲ್ಲಿ ಅರ್ಥೈಸಲು ಸಾಧ್ಯವಿದೆ. ಕೆ.ವಿ.ಸುಬ್ಬಣನವರ ಬಗ್ಗೆ ಉಪನ್ಯಾಸ ನೀಡಿದ ಡಾ.ಮೋಹನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶಿಕ್ಷಕರಾಗಿರುವುದು ಖುಷಿಯ ಸಂಗತಿ ಸಮಾಜವನ್ನು ರೂಪಿಸುವ ಶಿಕ್ಷಕರಿಗೆ ತರಬೇತಿ ನೀಡುವ ನೀವುಗಳು ರಂಗಭೂಮಿಯ ಬಗ್ಗೆ ಪ್ರಶಿಕ್ಷಣಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು. ನೀನಾಸಂ ಸುಬ್ಬಣ್ಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದರೆ ನಮ್ಮ ಬಯಲು ಸೀಮೆಯ ಡಾ.ರಾಮಚಂದ್ರ ನಾಯಕರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದರು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಉಜ್ಜಿನಪ್ಪ ಮಾತನಾಡಿ, ನೀಲಕಂಠೇಶ್ವರ ನಾಟ್ಯ ಸೇವಾ ಸಂಘ ಎನ್ನುವುದು ದಶಕಗಳ ಹಿಂದೆ ಒಂದು ರಂಗ ಚಳುವಳಿಯಾಗಿ ನಾಡಿನಾದ್ಯಂತ ಮನೆಮಾತಾಯಿತು. ಅವರ ತಂಡದಲ್ಲಿ ಯು.ಆರ್.ಅನಂತಮೂರ್ತಿ, ಶಾಂತವೇರಿಗೋಪಾಲ ಗೌಡ, ಕೋಣಂದೂರು ಲಿಂಗಪ್ಪ ಅಂತಹ ಮೇಧಾವಿಗಳು ಸುಬ್ಬಣ್ಣನವರ ಕಾರ್ಯಗಳಿಗೆ ಬೆನ್ನೆಲುಬಾಗಿ ಪ್ರೋತ್ಸಾಹಿಸುತ್ತಿದ್ದರು. ಹೆಗ್ಗೋಡು ಎಂಬ ಚಿಕ್ಕಹಳ್ಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಅವರ ಅವಿರತ ಶ್ರಮವೇ ಕಾರಣ. ಏಷ್ಯಾದಲ್ಲಿಯೇ ಅತ್ಯುತ್ತಮ ಪ್ರಶಸ್ತಿ ಮ್ಯಾಗ್ಸೆಸೆ ಪ್ರಶಸ್ತಿ, ಕಾಳಿದಾಸ ಸಮ್ಮಾನ ಪ್ರಶಸ್ತಿ ಅವರಿಗೆ ಸಂದಿರುವುದು ಅವರ ಬದ್ಧತೆಗೆ ಧೀಮಂತ ದೃಷ್ಟಾಂತವಾಗಿದೆ ಎಂದರು.
ಡಾ.ಮೋಹನ್ ಕುಮಾರ್ ಕೆ.ವಿ.ಸುಬ್ಬಣ್ಣನವರ ಬದುಕು ಮತ್ತು ಸಾಧನೆಗಳ ಬಗ್ಗೆ ಸುದೀರ್ಘವಾಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಡಾ. ರಾಮಚಂದ್ರನಾಯಕರು ಜಿಲ್ಲೆಯಲ್ಲಿ ಯಾವ ರೀತಿ ಮನೆಮಾತಾಗಿದ್ದರು ಎಂಬುದನ್ನು ತಿಳಿಸಿದರು.
ಹಿರಿಯ ಕಲಾವಿದ ಜಂಬುನಾಥರವರು ಡಾ.ರಾಮಚಂದ್ರನಾಯಕ ಅವರೊಂದಿಗಿನ ಒಡನಾಟದ ಸಂದರ್ಭಗಳನ್ನು ತಿಳಿಸಿದರು.
ರಂಗಸೌರಭ ಕಲಾ ಸಂಘದ ಕೆ.ಪಿ.ಎಂ.ಗಣೇಶಯ್ಯ ಮತ್ತು ಪದಾಧಿಕಾರಿಗಳು ಜಿ.ಕ ಸಾ.ಪ ಸಂಘಟನಾ ಕಾರ್ಯದರ್ಶಿ ವಿ.ಧನಂಜಯ, ಗೌರವ ಕೋಶಾಧ್ಯಕ್ಷ ಚೌಳೂರು ಲೋಕೇಶ್, ಮುಖ್ಯಶಿಕ್ಷಕ ಸಿ.ರಂಗಾನಾಯ್ಕ್, ಕಲಾವಿದ ಎಂ.ಕೆ.ಹರೀಶ್, ಪೋಲೀಸ್ ಮನು, ಗಾಯಕ ಗಂಗಾಧರ, ಹಿಮಂತರಾಜ್, ಮೈಲಾರಿ ಮತ್ತಿತರರು ಇದ್ದರು.
ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 25 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಮಂಗಳವಾರ, ಫೆಬ್ರವರಿ. 25 ) ಹತ್ತಿ…
ಸುದ್ದಿಒನ್ :ಭಾರತದಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಹೆಚ್ಚುತ್ತಿದೆ. ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಬಹಳ…
ಅಂತೂ ಇಂತೂ ಈ ರಾಶಿಯವರದು ಮದುವೆಯಾಯಿತು, ಈ ರಾಶಿಯವರಿಗೆ ಉದ್ಯೋಗದ ವರ್ಗಾವಣೆಯಿಂದ ಸಂತಸ, ಮಂಗಳವಾರದ ರಾಶಿ ಭವಿಷ್ಯ 25 ಫೆಬ್ರವರಿ…
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…