ಮುಧೋಳ : ಶೈಕ್ಷಣಿಕ ಪ್ರಗತಿಗಾಗಿ ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತರುವುದರ ಮೂಲಕ ಅದರ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ.ಎಂ.ಕಾರಜೋಳ ಹೇಳಿದರು.
ಅವರು ತಾಲ್ಲೂಕಿನ ಹಲಗಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ,ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಮ್ಮ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲು ಇಟ್ಟಿದ್ದಾರೆ.
ಅಲ್ಲದೇ ಆ ಅನುದಾನದಲ್ಲಿ ಅತಿ ಹೆಚ್ಚು ಅನುದಾನ ನನ್ನ ಕ್ಷೇತ್ರಕ್ಕೆ ನೀಡಿದ್ದಾರೆ.ಅಲ್ಲದೆ ನಮ್ಮ ಸರಕಾರ ಬಂದ ಮೇಲೆ ಅನೇಕ ಶೈಕ್ಷಣಿಕ ಪ್ರಗತಿಯಾಗಿದೆ ಎಂದು ಹೇಳಿದರು.
ಇದೇ ಸಮಯದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಟೀಲ ತೋಟ ಶಾಲೆಯ ವತಿಯಿಂದ ಸಚಿವರಾದ ಗೋವಿಂದ.ಎಂ.ಕಾರಜೋಳ ಹಾಗೂ ಊರಿನ ಪ್ರಮುಖರಾದ ಮಾಚಪ್ಪನ್ನವರ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಮಯದಲ್ಲಿ ಎಸ್.ಡಿ.ಎಂ.ಸಿ.ಯ ಅಧ್ಯಕ್ಷರಾದ ಸುಮೀತ್ರಾ ಹುಲ್ಲೂರ, ಊರಿನ ಪ್ರಮುಖರಾದ ಪಾಂಡಪ್ಪ ದೇಸಾಯಿ, ಬಾಬು ಅವಳಕೋಡ,ಬಸಪ್ಪ ಚಿಗರಿ,ಬೀಮಸಿ ಅಮನಿ,ಹನುಮಂತ ಎಡಹಳ್ಳಿ,ಮುಖ್ಯೋಪಾಧ್ಯಾಯರಾದ ವೀಣಾ ಚನ್ನಿ,ಶಿಕ್ಷಕರಾದ ತುಕರಾಮ ಲಮಾಣಿ,ಮುಖ್ಯ ಅಡಿಗೆದಾರರಾ ಮಂಜುಳಾ ತಳವಾರ ಮುಂತಾದವರು ಹಾಜರಿದ್ದರು.