ಸಫಾರಿ ಹೋದಾಗ ಶೌಚಾಲಯ ಬಳಸುವ ಮುನ್ನ ಎಚ್ಚರ..ಸಿಂಹವೂ ಶೌಚಾಲಯಕ್ಕೆ ಹೋಗಬಹುದು..!

ನವದೆಹಲಿ: ಶೌಚಾಲಯವೊಂದರ ಒಳಗಿಂದ ಸಿಂಹವೊಂದು ಹೊರಬಂದ ವಿಡಿಯೋ ಇಡೀ ಸೋಷಿಯಲ್ ಮೀಡಿಯಾದಲ್ಲೆಲ್ಲಾ ವೈರಲ್ ಆಗಿದೆ. ನೋಡಿದವರೆಲ್ಲಾ ಶೇರ್ ಮಾಡಿಕೊಂಡು ಆಶ್ರಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಜಂಗಲ್ ಸಫಾರಿ ವೇಳೆ ಈ ಘಟನೆ ನಡೆದಿದೆ. ಕಾಡಿನಲ್ಲಿ ಸಫಾರಿಗೆಂದು ಹೋದಾಗ ಈ ದೃಶ್ಯ ಸೆರೆಯಾಗಿದೆ. ಶೌಚಾಲಯ ಸಮೀಪಿಸುತ್ತಿದ್ದಂತೆ ಸಿಂಹ ಶೌಚಾಲಯದಿಂದ ಹೊರ ಬಂದ ದೃಶ್ಯ ಕಂಡಿದೆ. ಇದನ್ನ ಸಫಾರಿಗೆ ಹೋದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಮನುಷ್ಯರ ಶೌಚಾಲಯದಲ್ಲಿ ಸಿಂಹವೇನು ಮಾಡ್ತಿತ್ತು ಅಂತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇನ್ನು ಈ ವಿಡಿಯೋವನ್ನ ವೈಲ್ಡ್ ಲೆನ್ಸ್ ಇಕೋ ಫೌಂಡೇಶನ್ ಹಂಚಿಕೊಂಡಿದ್ದು, ಶೌಚಾಲಯ ಯಾವಾಗಲೂ ಮನುಷ್ಯರಿಗೆ ಸುರಕ್ಷಿತವಲ್ಲ. ಕೆಲವೊಮ್ಮೆ ಇದನ್ನು ಇತರರು ಕೂಡ ಬಳಸಬಹುದು ಎಂದು ಬರೆದು ಟ್ವೀಟ್ ಮಾಡಿದೆ. ಸದ್ಯಕ್ಕೆ ಈ ಭಯನಾಕ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *