ಕರ್ನಾಟಕದ ಪಾಲಿಗೆ ಘನಘೋರ ಅನ್ಯಾಯ, ಇದೊಂದು ಋಣ ತೀರಿಸುವ ಬಜೆಟ್ : ಜೆ.ಯಾದವರೆಡ್ಡಿ

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 01 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಾಣಬೇಕೆಂಬ ಉದ್ದೇಶವಿಟ್ಟುಕೊಂಡು ಮಂಡಿಸಬೇಕಾಗಿದ್ದ ಕೇಂದ್ರ ಬಜೆಟ್‍ನಲ್ಲಿ ಬಿಹಾರಕ್ಕೆ ಹೆಚ್ಚಿನ ಒತ್ತು ನೀಡಿರುವುದನ್ನು ನೋಡಿದರೆ ಇದೊಂದು ಋಣ ತೀರಿಸುವ ಬಜೆಟ್ ಎನ್ನುವುದರಲ್ಲಿ ಅನುಮಾನವಿಲ್ಲ.

ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆ, ಕಾವೇರಿ, ಮೇಕೆದಾಟು ವಿವಾದ ಬಗ್ಗೆ ಬಜೆಟ್‍ನಲ್ಲಿ ಚಕಾರವೆತ್ತಿಲ್ಲ. ಇದೊಂದು ರೈತ ಹಾಗೂ ವಿದ್ಯಾರ್ಥಿಗಳ ಪಾಲಿಗೆ ನಿರಾಶದಾಯಕ ಬಜೆಟ್ ಎಂದರೆ ತಪ್ಪಾಗಲಾರದು.

ನರೇಂದ್ರಮೋದಿರವರು ಪ್ರಧಾನಿಯಾಗಲು ಬೆಂಬಲ ನೀಡಿದರೆಂಬ ಕಾರಣಕ್ಕಾಗಿ ಬಿಹಾರಕ್ಕೆ ಮೂಲಭೂತ ಸೌಕರ್ಯ, ವಿಶೇಷ ಅನುದಾನ ಘೋಷಿಸಿ ಬೇರೆ ರಾಜ್ಯಗಳನ್ನು ಕಡೆಗಣಿಸಿರುವುದು ಜನ ವಿರೋಧಿ ಬಜೆಟ್ ಎನ್ನುವುದು ಗೊತ್ತಾಗುತ್ತದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕರ್ನಾಟಕದ ಪಾಲಿಗೆ
ಘನಘೋರ ಅನ್ಯಾಯವಾಗಿದೆ ಎಂದು ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಕೇಂದ್ರ ಬಜೆಟ್‍ನ್ನು ವಿರೋಧಿಸಿದ್ದಾರೆ.

suddionenews

Recent Posts

ಕಂದಾಚಾರ, ಮೂಢನಂಬಿಕೆಗಳ ನಿರ್ಮೂಲನೆಗೆ ಶ್ರಮಿಸಿದವರು ಮಡಿವಾಳ ಮಾಚಿದೇವ : ಎಡಿಸಿ ಬಿ.ಟಿ.ಕುಮಾರಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

3 hours ago

ಕರ್ನಾಟಕ ವಿರೋಧಿ ಬಜೆಟ್ : ಡಾ.ಸಂಜೀವಕುಮಾರ ಪೋತೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

3 hours ago

ಮುಖ್ಯಮಂತ್ರಿಗಳ ಸಲಹೆಗಾರ ಹುದ್ದೆಗೆ ಬಿ.ಆರ್.ಪಾಟೀಲ್ ರಾಜೀನಾಮೆ..!

    ಬೆಂಗಳೂರು: ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದ ಶಾಸಕ ಬಿ.ಆರ್. ಪಾಟೀಲ್ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕಲಬುರಗಿ…

4 hours ago

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ಸತತವಾಗಿ 5 ನೇ ಬಾರಿಗೆ ನಿರ್ದೇಶಕರಾಗಿ ನಿಶಾನಿ ಜಯಣ್ಣ ಆಯ್ಕೆ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಫೆ. 01: ಚಿತ್ರದುರ್ಗ…

4 hours ago

ಸಬ್ಕಾ ವಿಕಾಸ್ ಅನ್ನು ಸಾಕಾರಗೊಳಿಸುವ ದೂರದೃಷ್ಟಿ ಬಜೆಟ್ : ಸಂಸದ ಗೋವಿಂದ ಎಂ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 01 : ಇಂದು…

5 hours ago

ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ : ಸೂರಜ್ ಎಂ.ಎನ್.ಹೆಗಡೆ

ಚಿತ್ರದುರ್ಗ, ಫೆಬ್ರವರಿ.01 : ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಅಸ್ಸಾಂ, ಜಾರ್ಖಂಡ್, ಮಹಾರಾಷ್ಟ್ರ,…

5 hours ago