ಚಿತ್ರದುರ್ಗ: ದಿನ ಬೆಳಗ್ಗೆಯಾದರೆ ವಿಚಿತ್ರ ಕೊಲೆಗಳ ಬಗ್ಗೆ ಸುದ್ದಿಗಳು ಬರುತ್ತಲೇ ಇರುತ್ತವೆ. ಚಿತ್ರದುರ್ಗ ಜಿಲ್ಲೆಯಲ್ಲೊಂದು ಅಮಾನುಷ ಕೊಲೆ ನಡೆದಿದೆ. ಪತ್ನಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ಪಟ್ಟಣದಲ್ಲಿ ನಡೆದಿದೆ.
ಪೂಜಾ ಎಂಬ ಮಹಿಳೆಯೇ ಕೊಲೆಯಾದ ದುರ್ದೈವಿ. ನಾಗೇಶ್ ಎಂಬಾತ ಕೊಲೆ ಮಾಡಿರುವ ಕ್ರೂರಿ. ಪತ್ನಿ ಪೂಜಾ ಮೇಲೆ ಅನುಮಾನಗೊಂಡು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮುದ್ದೆ ಕೋಲಿನಿಂದ ಜೋರು ಹೊಡೆದು. ದೇಹದ ಹಲವು ಭಾಗಗಳಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟಿದ್ದಾನೆ. ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾನೆ.
ಮದುವೆಯಾಗಿ ಆರಂಭದಲ್ಲಿ ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದರು ದಂಪತಿ. ಆದರೆ ಅದೇನಾಯ್ತೋ ಏನೊ ಪತ್ನಿ ಮೇಲೆ ಅನುಮಾನಗೊಂಡು ಜೀವನವನ್ನು ಕೊಲೆಯಲ್ಲಿ ಅಂತ್ಯ ಮಾಡಿಕೊಂಡಿದ್ದಾನೆ. ಸಂಬಂಧಗಳಲ್ಲಿ ಅನುಮಾನವೆಂಬ ಭೂತ ಯಾವತ್ತಿಗೂ ಬರಬಾರದು ಎಂಬ ಮಾತನ್ನ ಅನುಭವಸ್ಥರು ಸಾಕಷ್ಟು ಬಾರೀ ಹೇಳುತ್ತಾರೆ. ಸಣ್ಣ ಪುಟ್ಟ ಸಂಬಂಧದಲ್ಲಿ ಅನುಮಾನ ಹುಟ್ಟಿದರೇನೆ ಆ ಸಂಬಂಧಗಳು ಉಳಿಯುವುದಿಲ್ಲ. ಇನ್ನು ಸಂಸಾರದಲ್ಲಿ ಅನುಮಾನ ಎಂಬ ಭೂತ ಹುಟ್ಟಿಕೊಂಡರೆ ಸಂಸಾರದ ಸ್ಥಿತಿ ಅಧೋಗತಿಗೆ ತಲುಪಿ ಬಿಡುತ್ತದೆ. ಸಣ್ಣ ಅನುಮಾನವೇ ದೊಡ್ಡದಾಗುತ್ತಾ ಹೋಗುತ್ತದೆ. ಅದರಲ್ಲೂ ಗಂಡ-ಹೆಂಡತಿಯ ನಡುವೆ ಅನುಮಾನವೆಂಬುದು ಬಂದರೆ, ಹೊರಗೆ ಹೋಗಿ ಬಂದಾಗಲೂ, ಇನ್ಯಾವುದೋ ಸಣ್ಣ ಪುಟ್ಟ ತಪ್ಪಾದಾಗಲೂ ದೊಡ್ಡ ಮಟ್ಟಕ್ಕೆ ರಿಯಾಕ್ಟ್ ಆಗಲು ಶುರುವಾಗುತ್ತೆ. ಈಗ ನಾಗೇಶ್ ಮತ್ತು ಪೂಜಾ ಬದುಕಲ್ಲಿ ಅನುಮಾನ ಎಂಬ ಬಿರುಗಾಳಿ ಕೊಲೆಯನ್ನೇ ಮಾಡಿಸಿದೆ. ನಾಗೇಶ್ ವಿರುದ್ಧ ಮೊಣಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿಒನ್ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಹೀನಾಯವಾಗಿ ಸೋಲಿಸಿತು. ಇದರೊಂದಿಗೆ, ತಂಡವು 2017…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…
ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…
ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…
ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…
ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳನ್ನು ನಿರೀಕ್ಷಿಸುತ್ತಾರೆ.…