in ,

ಮುರುಘಾಮಠದ ಪರಂಪರೆಯ ಉಳಿವಿಗಾಗಿ ನೂತನ ಶಾಸಕ ಕೆ.ಸಿ.ವೀರೇಂದ್ರ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಿ : ಹೆಚ್.ಎಂ.ಮಂಜುನಾಥ್

suddione whatsapp group join

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಮೇ.25) : ಮುರುಘಾಮಠದ ಪರಂಪರೆಯ ಉಳಿವಿಗಾಗಿ ವೀರಶೈವ ಲಿಂಗಾಯಿತ ಯುವ ವೇದಿಕೆ ಹೋರಾಟ ಮಾಡಿಕೊಂಡು ಬರುತ್ತಿದ್ದು, ನೂತನ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಸಭೆ ಕರೆದು ಸಮಿತಿಗಳನ್ನು ರಚಿಸಲಿ ಎಂದು ವೀರಶೈವ ಲಿಂಗಾಯಿತ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಎಂ.ಮಂಜುನಾಥ್ ಮನವಿ ಮಾಡಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುರುಘಾಮಠದ ಡಾ.ಶಿವಮೂರ್ತಿ ಶರಣರ ಅಧಿಕಾರವಧಿಯನ್ನು ಜಿಲ್ಲಾ ನ್ಯಾಯಲಯ ಮೊಟಕುಗೊಳಿಸಿದ್ದು, ಉಚ್ಚ ನ್ಯಾಯಾಲಯ ಸದರಿ ಪ್ರಕರಣವನ್ನು ವಜಾಗೊಳಿಸಿದೆ. ಮುರುಘಾಮಠಕ್ಕೆ ಸರ್ಕಾರ ನೇಮಕ ಮಾಡಿದ್ದ ಆಡಳಿತಾಧಿಕಾರಿಯನ್ನು ವಜಾ ಮಾಡಿದ್ದು, ವೀರಶೈವ ಸಮಾಜ, ಮಠದ ಭಕ್ತರು ಹಾಗೂ ಇತರೆ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾಲ್ಕು ವಾರಗಳಲ್ಲಿ ಆಡಳಿತ ಸಮಿತಿಯನ್ನು ರಚಿಸಿ ನ್ಯಾಯಾಲಯಕ್ಕೆ ವರದಿ ನೀಡಲು ಆದೇಶಿಸಿರುವುದರಿಂದ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಭೆ ಕರೆದು ಸಮಿತಿ ರಚಿಸಲಿ ಎಂದು ಹೆಚ್.ಎಂ.ಮಂಜುನಾಥ್ ವಿನಂತಿಸಿದರು.

ವೀರಶೈವ ಲಿಂಗಾಯಿತ ಯುವ ವೇದಿಕೆ ಗೌರವಾಧ್ಯಕ್ಷ ಕೆ.ಸಿ.ಗಂಗಾಧರ್, ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಎಂ.ಎಸ್. ಕಾರ್ಯದರ್ಶಿ ಸಿ.ಬಿ.ನಾಗರಾಜ್, ತಾಲ್ಲೂಕು ಅಧ್ಯಕ್ಷ ಪ್ರಶಾಂತ್‍ರೆಡ್ಡಿ ಹೆಚ್. ನಗರಾಧ್ಯಕ್ಷ ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಹಿಂದೂಗಳ ಸದ್ದಡಗಿಸುವ ದಮನ ಮಾಡಲು ಹೊರಟರೆ ಪರಿಣಾಮ ನೆಟ್ಟಗಿರುವುದಿಲ್ಲ : ಕೆ.ಎಸ್.ನವೀನ್

ಚಿತ್ರದುರ್ಗ ನಗರದ ಮಳೆ ಹಾನಿ ಪ್ರದೇಶಕ್ಕೆ ಡಿಸಿ ಭೇಟಿ: ತ್ವರಿತ ಪರಿಹಾರಕ್ಕೆ ಸೂಚನೆ