in

ಬಾಗಲಕೋಟೆಯಲ್ಲಿ ಆ ಹೋರಿ 3 ಲಕ್ಷ 25 ಸಾವಿರಕ್ಕೆ ಬೆಲೆ ಬಾಳುತ್ತಂತೆ..!

suddione whatsapp group join

 

ಬಾಗಲಕೋಟೆ: ಜಗತ್ತು ಆಧುನಿಕತೆಯ ಕಡೆ ಹೆಚ್ಚು ವಾಲಿದಷ್ಟು ಹಿಂದಿನಿಂದ ನಡೆಸಿಕೊಂಡು ಬಂದ ಕೆಲವೊಂದಿಷ್ಟು ಸಂಪ್ರದಾಯಗಳನ್ನ ಹಾಗೆ ನೆನೆಗುದಿಗೆ ತಳ್ಳುತ್ತಾ ಹೋಗಿ ಬಿಡುತ್ತೇವೆ. ಅದರಲ್ಲಿ ಹಳ್ಳಿಗಳಲ್ಲಿ ಸಿಕ್ತಾ ಇದ್ದಂತ ಎತ್ತುಗಳು, ಹೋರಿಗಳು ಕೂಡ.

ಈ ಹಿಂದೆ ಬೇಸಾಯ ಮಾಡೋದಕ್ಕಾಗಿ ಎತ್ತುಗಳನ್ನ ದಷ್ಟಪುಷ್ಟವಾಗಿ ಸಾಕ್ತಾ ಇದ್ರು. ಆದ್ರೆ ಆ ಜಾಗಕ್ಕೆ ಅದ್ಯಾವಾಗ ಯಂತ್ರಗಳು ಬಂದ್ವೋ ಎತ್ತುಗಳು ಕಣ್ಮರೆಯಾದ್ವು. ಗ್ರಾಮಗಳಲ್ಲಿ ಹೋರಿಗಳು ಕಣ್ಣು ಕುಕ್ಕುವಂತೆ ಕಾಣ್ತಾ ಇದ್ವು ಈಗ ಅದು ಇಲ್ಲ. ಆದ್ರೆ ಬಾಗಲಕೋಟೆಯಲ್ಲಿ ಹೋರಿಯೊಂದಿದ್ದು, ಅದರ ಬೆಲೆ ಕೇಳಿದ್ರೇನೆ ಶಾಕ್ ಆಗುವಂತಿದೆ.

ಹೌದು, ಹದಿನೆಂಟು ತಿಂಗಳ ಕಿಲಾರಿ ಹೋರಿ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ಭೀಮಪ್ಪ ಬರಡಗಿ ಎಂಬುವವರು ಈ ಹೋರಿ ಸಾಕಿದ್ರು.

ಇದೀಗ ಆ ಹೋರಿ ಸುಮಾರು 3 ಲಕ್ಷದ 25 ಸಾವಿರಕ್ಕೆ ಮಾರಾಟವಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಶೋಕ ಕುರಿ ಎಂಬುವವರು ಈ ಹೋರಿಯನ್ನ ತೆಗೆದುಕೊಂಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಇನ್ನು ಅದ್ಯಾವ ಮನಸ್ಥಿತಿಯಲ್ಲಿದ್ದಾರೆ ಅಲ್ಲಿನ ಜನ : ದಲಿತ ಮಗು ದೇವಸ್ಥಾನದೊಳಗೆ ಹೋಯ್ತು ಅಂತ 25 ಸಾವಿರ ದಂಡ ಹಾಕೋದಾ..?

ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಿಯೇ ವಿಧಿಸ್ತೀವಿ : ಸಿಎಂ ಬಸವರಾಜ್ ಬೊಮ್ಮಾಯಿ