ಹಾವೇರಿ: ಕರಾವಳಿ ಭಾಗದಲ್ಲಿ ಹೋರಿ ಹಬ್ಬಕ್ಕೆ ಸಿಕ್ಕಾಪಟ್ಟೆ ಪ್ರಾಶಸ್ತ್ಯ ಇದೆ. ದೀಪಾವಳಿ ಹಬ್ಬ ಮುಗಿದ ಬಳಿಕ ಹೋರಿ ಹಬ್ಬ ಮಾಡುವ ಪದ್ಧತಿ ಇದೆ. ಆದ್ರೆ ಕೊರೊನಾ ಇರುವ ಕಾರಣ ಹೋರಿ ಹಬ್ಬವನ್ನ ನಿಷೇಧ ಮಾಡಲಾಗಿತ್ತು. ಇದೀಗ ಹೋರಿ ಹಬ್ಬದಲ್ಲಿ ನಡೆಯುವ ಹೋರಿ ಸ್ಪರ್ಧೆಗೆ ಅನುಮತಿ ನೀಡಿ ಅಂತ ಸ್ವಾಮೀಜಿಗಳು ಪ್ರತಿಭಟನೆ ನಡೆಸಿದ್ದಾರೆ.
ಹೋರಿ ಹಬ್ಬದ ಸ್ಪರ್ಧೆ ನಿಷೇಧಿಸಿರುವುದು ರೈತ ಸಮುದಾಯಕ್ಕೂ ಬೇಸರ ತಂದಿದೆ. ಈ ಬಾರಿ ಕೊರೊನಾ ಕಡಿಮೆಯಾದ ಬೆನ್ನಲ್ಲೇ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರಿನಲ್ಲೂ ಹೋರಿ ಹಬ್ಬಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನೀಡ್ತಾರೆ ಅನ್ನೋ ಭರವಸೆಯಲ್ಲಿ ರೈತ ಸಮುದಾಯವಿತ್ತು. ಆದ್ರೆ ಆ ಭರವಸೆ ಹುಸಿಯಾಗಿರೋದ್ರಿಂದ ಸ್ವಾಮೀಜಿಗಳು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಈ ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ಸಮಿತಿ ಹಾಗೂ ಮೂವರು ಸ್ವಾಮೀಜಿಗಳು ಭಾಗಿಯಾಗಿದ್ದರು. ಚಿಕ್ಕ ಆಲೂರಿನಿಂದ ಹಾವೇರಿ ನಗರದವರೆಗೆ ಸುಮಾರು 10 ಕಿ.ಮೀ ಪಾದಯಾತ್ರೆ ನಡೆಸಿದರು. ಹೋರಿ ಸ್ಪರ್ಧೆಗೆ ಅನುಮತಿ ನೀಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.