ರಾಯಚೂರು : ನಿರಂತರ ಅಕಾಲಿಕ ಮಳೆಯಿಂದಾಗಿ ರೈತರು ಸಾಕಷ್ಟು ನಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಯೆಲ್ಲಾ ಸಂಪೂರ್ಣವಾಗಿ ನಾಶವಾಗಿದೆ. ನೂರಾರು ಎಕರೆ ಬೆಳೆನಾಶವಾಗಿದೆ. ಇದರಿಂದ ಮನನೊಂದು ಜಿಲ್ಲೆಯಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸೂಗೂರು ತಾ.ಬೋಗಾಪುರ ಗ್ರಾಮದ ರೈತ ವೀರನಗೌಡ ಪಾಟೀಲ್ ( 55) , ಲಿಂಗಸೂಗೂರು ತಾ. ತುರಡಗಿ ಗ್ರಾಮದ ರೈತ ಸಿದ್ದಪ್ಪ (55), ಭತ್ತದ ಬೆಳೆಹಾಳಾಗಿದ್ದಕ್ಕೆ ಸಿಂಧನೂರು ತಾ. ರೌಂಡಗುಂದಾ ಗ್ರಾಮದ ರೈತ ರಂಗಣ್ಣ(30) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂವರು ರೈತರ ಆತ್ಮಹತ್ಯೆ ಪ್ರಕರಣ ಸಂಬಂಧ ರಾಯಚೂರು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿಕೆ ನೀಡಿದ್ದು, ಮೂವರು ರೈತರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅಕಾಲಿಕ ಮಳೆಯಾದ ಬಳಿಕ ಒಂದು ರೈತ ಆತ್ಮಹತ್ಯೆ ಎಂಬ ಕೇಸ್ ಆಗಿಲ್ಲ. ರೈತ ಆತ್ಮಹತ್ಯೆ ಎಂದು ಪರಿಗಣಿಸಲು, ರೈತರು ಇರಬೇಕು,ರೈತರಿಗೆ ಸಾಲ ಇರಬೇಕು, ಬ್ಯಾಂಕ್ ನಿಂದ ನೋಟೀಸ್ ಬರಬೇಕು. ಈ ಮೂರು ಅಂಶಗಳು ಇರುವರು ಒಬ್ಬರು ರೈತರು ಇಲ್ಲ. ಮೃತರು ಬಗ್ಗೆ ಎಫ್ ಐಆರ್ ನಲ್ಲಿ ರೈತರ ಆತ್ಮಹತ್ಯೆವೆಂದು ಫೈಲ್ ಆಗಿದೆ. ಮೃತರಾದವರು ರೈತರಾಗಿದ್ದಾರೆ. ಅವರಿಗೆ ಸಾಲ ಕೂಡ ಇದೆ. ಆದ್ರೆ ಸಾಲ ಪಾವತಿ ಮಾಡಿ ಎಂದು ಒತ್ತಡ ಹಾಕಿಲ್ಲ.
ಬ್ಯಾಂಕ್ ನಿಂದ ಒತ್ತಡ ಬಂದಿರಬೇಕು ಅಂದಾಗ ಅದು ರೈತ ಆತ್ಮಹತ್ಯೆ ಆಗುತ್ತೆ. ಪೊಲೀಸರ ಮಾಹಿತಿ ಆಧರಿಸಿ ನಾವು ತನಿಖೆ ನಡೆಸಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಆತ್ಮಹತ್ಯೆ ಆಗಿಲ್ಲ ಮೃತರು ಬೇರೆ ಕಾರಣಕ್ಕಾಗಿ ಆತ್ಮಹತ್ಯೆ ಗೆ ಶರಣಾಗಿರಬಹುದು. ಮಾನವೀಯತೆ ದೃಷ್ಟಿಯಿಂದ ನೋಡಿದ್ರೂ ಸಹ ರೈತ ಆತ್ಮಹತ್ಯೆ ಎಂದು ಹೇಳಲು ಆಗಲ್ಲ. ನಿಯಮ ಪ್ರಕಾರ ನೋಡಿದ್ರೂ ಸಹ ರೈತ ಆತ್ಮಹತ್ಯೆ ಎಂದು ಪರಿಗಣಿಸಲು ಆಗಲ್ಲವೆಂದಿದ್ದಾರೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್.