ಹಿರಿಯೂರು, (ನ.30) : ಯುವಕರನ್ನು ಸಮಾಜಮುಖಿ ವ್ಯಕ್ತಿಗಳನ್ನಾಗಿ ಮಾಡುವಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಬಹುದೊಡ್ಡ ಸಾಧನವಾಗಿದೆ ಎಂದು ಸಮಾಜ ಸೇವಕಿ ಶ್ರೀಮತಿ ಶಶಿಕಲಾ ರವಿಶಂಕರ್ ಹೇಳಿದರು.
ನಗರದ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ ಅಂಡ್ ಗೈಡ್ಸ್ ರೇಂಜರ್ಸ್ ಮತ್ತು ರೋವರ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ಶಶಿಕಲಾ ರವಿಶಂಕರ್ ಮಾತನಾಡುತ್ತ, ಜಗತ್ತು ಈಗ ಸವಾಲುಗಳ ಮೇಲೆ ಸವಾಲುಗಳನ್ನು ಎದುರಿಸುತ್ತಿದೆ. ಶಾಂತಿ,ಸೌಹಾರ್ದತೆ, ಜಾಗತಿಕ ಆರೋಗ್ಯ ಕಾಯ್ದುಕೊಳ್ಳುವುದೂ ಒಂದೆಡೆ, ಕೊರೋನಾ.,ಈಗ ಓಮೆಕಾರ್ನ್ ನಂತಹ ಪ್ರಾಣಾಂತಿಕ ಸೋಂಕಿನ ವಿರುದ್ಧ ಕೂಡಾ ಸನ್ನಧ್ಧರಾಗುವುದೂ ಅತ್ಯವಶ್ಯವಾಗಿದೆ.
ಇಂತಹ ಸವಾಲುಗಳನ್ನು ಎದುರಿಸಲು ನಮ್ಮ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ರೇಂಜರ್ಸ್ ಆಂದೋಲನದಲ್ಲಿ ಸಕ್ರಿಯರಾಗಿರುವವರಿಂದ ಸಾಧ್ಯ.
ಸಮಾಜಮುಖಿಯಾಗಿ ಇಂದಿನ ಯುವಪೀಳಿಗೆ ರೂಪುಗೊಳ್ಳಬೇಕಿದೆ ಎಂದು ಸಮಾಜಸೇವಕಿ ಶಶಿಕಲ ರವಿಶಂಕರ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಚಂದ್ರಶೇಖರರವರು ಮಾತನಾಡಿ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪರಿಣಿತಿ ಹೊಂದಿರ ಬೇಕಾಗಿರುವುದು ಕಡ್ಡಾಯವಾಗಿ ಎಂದರು.
ಸ್ಕೌಟ್ ಅಂಡ್ ಗೈಡ್ ಸಂಯೋಜಕ ಪ್ರಸನ್ನಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಮಹೇಶ್ ನಾಯಕ್, ನಟರಾಜ್, ಗಿರೀಶ್, ಪ್ರಸಾದ್, ಭೂಮಿಕಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.