ಮೈಸೂರು: ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿದ್ದ ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈಗಾಗಲೇ ಆರು ಜನ ಆರೋಪಿಗಳನ್ನ ಬಂಧಿಸಲಾಗಿತ್ತು. ಇದೀಗ ಏಳನೇ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಘಟನೆ ಬಳಿಮ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಮೈಸೂರು ಪೊಲಿಜಸರ ಬಲೆಗೆ ಬಿದ್ದಿದ್ದಾನೆ. ಘಟನೆ ನಡೆದ ಮೇಲೆ ಮೈಸೂರು ಪೊಲೀಸರು ಅಲರ್ಟ್ ಆಗಿದ್ರು. ಐದು ದಿನಗಳ ಬಳಿಕ ಆರೋಪಿಗಳನ್ನ ಹೆಡೆಮುರಿ ಕಟ್ಟಲಾಗಿತ್ತು. ಅದರಲ್ಲೂ ಒಬ್ಬ ಆರೋಪಿ ಎಸ್ಕೇಪ್ ಆಗಿದ್ರು.
ಇದೀಗ ತಮಿಳುನಾಡು ಪೊಲೀಸರ ಸಹಾಯದಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಈಗಾಗಲೇ ಆರೋಪಿಗಳಿಗೆ ಪೊಲೀಸರಿಂದ ಡ್ರಿಲ್ ಶುರುವಾಗಿದೆ. ಆರೋಪಿಗಳು ಕೂಡ ಮಾಡಿರುವ ತಪ್ಪನ್ನ ಒಪ್ಪಿಕೊಂಡಿದ್ದಾರೆ.
ಅಂದು ಸಂಜೆ 6.30 ರಿಂದ 7 ರ ಸಮಯ. ಚಾಮುಂಡಿ ಬೆಟ್ಟಕ್ಕೆ ಹೋಗಿದ್ದ ಇಬ್ಬರು ಸ್ನೇಹಿತರನ್ನ ದರೋಡೆ ಕೋರರು ಅಡ್ಡ ಹಾಕಿದ್ರು. ಯುವಕನಿಗೆ ಥಳಿಸಿ, ಜೊತೆಯಲ್ಲಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿ ಎಸ್ಕೇಪ್ ಆಗಿದ್ರು.