ಬೆಂಗಳೂರು: ಇಡೀ ಕರ್ನಾಟಕ ಜನತೆಗೆ ದಿಗ್ಭ್ರಾಂತರನ್ನಾಗಿ ಮಾಡಿದ ಸುದ್ದಿ ಅದು ಅಪ್ಪು ನಿಧನದ ಸುದ್ದಿ. ಪುನೀತ್ ಇನ್ನಿಲ್ಲ ಅನ್ನೋದನ್ನ ಯಾರಿಗೂ ಈಗಲೂ ಒಪ್ಪಿಕೊಳ್ಳೋದಕ್ಕೆ ಆಗ್ತಿಲ್ಲ. ಇದ್ಯಾವುದೋ ಕನಸೇನೋ ಎಂಬಂತೆ ಭಾಸವಾಗ್ತಾ ಇದೆ. ಇದು ಕನಸಾಗೇ ಉಳಿಬಾರದಾ..? ಅಪ್ಪು ಮತ್ತೆ ಎದ್ದು ಬರಬಾರದಾ ಎಂಬ ಆಸೆಗಳು ಎಲ್ಲರ ಮನಸ್ಸಲ್ಲಿ ಉಳಿದಿದೆ. ಆದ್ರೆ ವಿಧಿಯಾಟದ ಮುಂದೆ ಯಾರಾದರೇನು..? ಅಪ್ಪು ಕೂಡ ಯಮನ ಕರೆಗೆ ಹೂಗುಟ್ಟು ಹೊರಟೇ ಬಿಟ್ಟಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಸಂಜೆಯೇ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಅಪ್ಪು ಅಪ್ಪ-ಅಮ್ಮನ ಪಕ್ಕದಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ.
ಈಗಾಗಲೇ ಕಂಠೀರವ ಸ್ಟುಡಿಯೋದಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದೆ. ಸಾವಿರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರಿಗೆ ಪ್ರವೇಶ ನಿಲ್ಲಿಸಿದ್ದಾರೆ. ಮಗಳು ಅಮೆರಿಕಾದಿಂದ ಬರುವುದನ್ನೆ ಕಾಯ್ತಿದ್ದಾರೆ. ಮಗಳು ಬಂದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ರನ್ನು ಅಪ್ಪ ಅಮ್ಮನ ಬಳಿ ಕಳುಹಿಸಲು ಸಿದ್ಧತೆ ನಡೆದಿದೆ. ರಾಘವೇಂದ್ರ ರಾಜ್ ಕುಮಾರ್ ಮನಸ್ಸಲ್ಲಿ ನೋವಿದ್ದರು, ಅಭಿಮಾನಿಗಳಲ್ಲಿ ತೊಂದರೆ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ತಮ್ಮನಿಲ್ಲದ ದುಃಖದಲ್ಲೇ ಎಲ್ಲ ಕಾರ್ಯಗಳನ್ನ ಮುಗಿಸುತ್ತಿದ್ದಾರೆ. ಇಡೀ ಕುಟುಂಬ ದುಃಖದಲ್ಲಿದೆ. ಇಡೀ ರಾಜ್ಯದ ಜನತೆ ನೋವಿನಲ್ಲಿದೆ. ನಿರೀಕ್ಷಿಸದ ಸಾವು.. ಇನ್ಯಾವತ್ತು ನಮ್ಮ ಅಪ್ಪು ಮಾತಾಡಲ್ಲ, ಆ್ಯಕ್ಟ್ ಮಾಡಲ್ಲ, ಕುಣಿಯಲ್ಲ, ನಗಲ್ಲ ಎಂದಾಗ ಎಂಥವರಿಗೂ ತಡೆದುಕೊಳ್ಳಲಾಗದಂತ ದುಃಖ ಬಂದೇ ಬರುತ್ತೆ.