ಬೆಂಗಳೂರು: ಒಂದು ಕಾಲದಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರು ಕಾಂಗ್ರೆಸ್ ಜೊತೆಗಿದ್ದರು. ಕಾಂಗ್ರೆಸ್ ಜಾತಿ, ಮತ ರಾಜಕೀಯವನ್ನು ನೆಚ್ಚಿಕೊಂಡಿದೆ. ಈಗ ಹಿಂದುಳಿದವರು ಮತ್ತು ದಲಿತರಲ್ಲಿ ಶೇ 70ಕ್ಕೂ ಹೆಚ್ಚು ಜನರು ಬಿಜೆಪಿ ಜೊತೆಗಿದ್ದಾರೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಈ ವೇಳೆ ಮಾತನಾಡಿದ ಅವರು, ರಾಷ್ಟ್ರೀಯಯವಾದ ಮುಸ್ಲಿಮರು ಬಿಜೆಪಿ ಜೊತೆಗಿದ್ದಾರೆ. ಅವರೆಲ್ಲರೂ ನರೇಂದ್ರ ಮೋದಿಯವರು, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ನಮ್ಮ ಜೊತೆಗಿದ್ದಾರೆ ಎಂದು ತಿಳಿಸಿದರು.
ಕಂಬಳಿ ವಿಚಾರ ಮೇಲೆತ್ತಿ ಸ್ವಲ್ಪವಾದರೂ ಮತ ಪಡೆಯಲು ಕಾಂಗ್ರೆಸ್‌ನವರು ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು. ಹೆಬ್ಬೆಟ್ಟು ಗಿರಾಕಿ ಅಂತ ಪ್ರಧಾನಿಯನ್ನ, ಮುಖ್ಯಮಂತ್ರಿ ಆಗಿದ್ದವರು ಕರೆಯುತ್ತಾರೆ.ಕುರುಬರನ್ನ ಓಲೈಕೆ ಮಾಡೋ ಕೆಲಸ ಮಾಡ್ತಿದ್ದಾರೆ, ಯಾರನ್ನೂ ನಾನು ವೈಯಕ್ತಿಕ ಟೀಕೆ ಮಾಡೋದಿಲ್ಲ. ಕನಕ ಜಯಂತಿ ಮಾಡಿದ್ದು ಕುರುಬರಿಗಾಗಿ ಅಲ್ಲ, ಜಾತಿಗಾಗಿ ಅಲ್ಲ. ಅವರದ್ದು ಕೂಡ ನಮ್ಮಂತೆಯೇ ಚಿಂತನೆ ಇತ್ತು. ಕುಲ ಕುಲ ಕುಲವೆಂದು ಒಡೆದಾಡದಿರಿ ಅಂತ ಹೇಳಿದ್ರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಇಡೀ ದೇಶದಲ್ಲಿ ಶೌಚಾಲಯ ಕಟ್ಟಲಾಗಿದೆ. ಹಿಂದೆ 70 ವರ್ಷದಲ್ಲಿ ಕೊಟ್ಟಿರುವ ಶೌಚಾಲಯದ ನೂರರಷ್ಟು ಶೌಚಾಲಯ ಮೋದಿ ಅವರು ಬಂದ ಮೇಲೆ ಮಾಡಿದ್ದೇವೆ. ಮನೆ ಮನೆಗೆ ನೀರು ತಲುಪಿಸೋ ಕೆಲಸ ಮೋದಿ ಅವರು ಬಂದ ನಂತರ ಆಗಿದೆ. ಮತ್ತೆ ಅಸೆಂಬ್ಲಿ ಬರುತ್ತೆ, ಲೋಕಸಭೆ ಚುನಾವಣೆ ಬರುತ್ತೆ ನಾವು ಗೆಲ್ಲುತ್ತೇವೆ ಎಂದರು.