ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯ ಪಾಲಿಕೆಯ ಒಂದೇ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಭಾಗ್ಯಶ್ರೀ ಎಮ್.ಎನ್, ಲತಾರಾಣಿ ಜಿಎಮ್ ಬಸವಂತಿ ಪಾಟೀಲ್, ವಿಲಾಸ್, ಮಂಜುಳಾ ನಾಟೇಕರ್ ಅವರನ್ನು ವರ್ಗಾವಣೆ ಮಾಡಿ, ಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಆದೇಶ ಹೊರಡಿಸಿದ್ದಾರೆ.
ವರ್ಗಾವಣೆಯಾಗಿರುವ ಅಧಿಕಾರಿಗಳ ಮೇಲೆ ಈಗಾಗಲೇ ಸಾಕಷ್ಟು ಬಾರಿ ದೂರುಗಳು ಬಂದಿದ್ದವು. ನಗರ ಯೋಜನೆ ಘಟಕದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ದೂರುಗಳ ಹಿನ್ನೆಲೆ ಅಧಿಕಾರಿಗಳಿಗೆ ಆಯುಕ್ತರು ಸಾಕಷ್ಟು ಬಾರೀ ನೋಟೀಸ್ ಕೂಡ ನೀಡಿದ್ದರು, ಆದರೂ ಅಧಿಕಾರಿಗಳು ತಮ್ಮ ಚಾಳಿ ಮುಂದುವರೆಸಿದ್ದ ಕಾರಣ, ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ.
ಈ ನಾಲ್ಕು ಅಧಿಕಾರಿಗಳು ಪಾಲಿಕೆಯ ಯೋಜನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಈ ಅಧಿಕಾರಿಗಳಿಂದ ಯಾವುದೇ ಕೆಲಸವಾಗಬೇಕು ಎಂದರು ಲಂಚ ಕೊಡಲೇಬೇಕಾಗಿತ್ತು. ಪ್ರಮಾಣ ಪತ್ರ, ಕಟ್ಟಡ ಪರವಾನಗಿ, ಮುಕ್ತಾಯ ಪ್ರಮಾಣ ಪತ್ರ ನೀಡಬೇಕೆಂದರು ಲಂಚ ಕೊಡಬೇಕಾಗಿತ್ತು. ಇಷ್ಟೆಲ್ಲಾ ದೂರುಗಳು, ಆರೋಪಗಳು ಬಂದ ಮೇಲೆ ಆಯುಕ್ತರು ಕ್ರಮ ತೆಗೆದುಕೊಂಡಿದ್ದಾರೆ. ಬೇರೆಡೆಗೆ ವರ್ಗಾಹಿಸಿ, ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.