ತುಮಕೂರು: ಮೆಡಿಕಲ್ ಶಾಪ್ ನಲ್ಲಿ ಕುಳಿತವರು ಮೆಡಿಸನ್ ಕೊಡುವಾಗ ಗಮನ ಸರಿಯಾಗಿರಬೇಕು. ಯಾಕಂದ್ರೆ ಅವರು ಕೊಡುವ ಮೆಡಿಸನ್ ಜನರ ಪ್ರಾಣದ ಜೊತೆಗೆ ಆಟವಾಡಿದಂತಾಗಬಾರದು. ಇಷ್ಟೆಲ್ಲಾ ಹೇಳೋದಕ್ಕೆ ಕಾರಣ ಅಲ್ಲೊಂದು ಮೆಡಿಕಲ್ ನಲ್ಲಿ ಮಾಡಿದ ಮಹಾ ಯಡವಟ್ಟು.
ಜಿಲ್ಲೆಯ ಮಧುಗಿರಿ ತಾಲೂಕಿನ ಐಡಿಹಳ್ಳಿಯ ಮೆಡಿಕಲ್ ವೊಂದರಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಮೆಡಿಕಲ್ ಬಂದು ಮಗುವಿಗೆ ಕುಡಿಸುವ ಗ್ರೈಪ್ ವಾಟರ್ ಕೇಳಿದ್ದಾರೆ. ಆದ್ರೆ ಮೆಡಿಕಲ್ ನಲ್ಲಿ ಕುಳಿತಿದ್ದ ಮಹಿಳೆ ವಿಷದ ಬಾಟಲಿ ನೀಡಿದ್ದಾರೆ. ಮನೆಗೆ ಹೋಗಿ ಬಾಟಲಿ ತೆರೆದರೆ ಗಬ್ಬು ವಾಸನೆ ಮೂಗಿಗೆ ಬಡಿದಿದೆ.
ಇದಕ್ಕೆ ಅನುಮಾನಗೊಂಡ ಆ ಮಹಿಳೆ ತನ್ನ ಪತಿಗೆ ಹೇಳಿದ್ದಾಳೆ. ಆ ಬಳಿಕ ನೋಡಿದಾಗ ಅದು ಸರ್ಜಿಕಲ್ ಸ್ಪಿರಿಟ್ ಎನ್ನೋದು ತಿಳಿದು ಬಂದಿದೆ. ಈ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೆಡಿಕಲ್ ನಲ್ಲಿ ಕುಳಿತುಕೊಳ್ಳುವವರು.. ಜೊತೆಗೆ ಔಷಧಿ ತೆಗೆದುಕೊಂಡು ಹೋಗುವವರು ಒನ್ಮೆ ಪರಿಶೀಲಿಸಿ. ಸುಮ್ಮನೆ ಮೆಡಿಕಲ್ ಅವ್ರನ್ನ ನಂಬಿ ಪ್ರಾಣ ಕಳೆದುಕೊಳ್ಳುವ ಹಂತ ತಲುಪಬಾರದು. ಒಂದು ವೇಳೆ ಅದು ವಾಸನೆ ಬಡಿಯದೇ ಹೋಗಿದ್ದರೆ, ಆ ವಿಷವನ್ನ ಮಹಿಳೆ ಮಗುವಿಗೆ ಕುಡೊಸಿದ್ದರೆ ಪರಿಣಾಮ ಏನಾಗ್ತಾ ಇತ್ತು ಅಲ್ವಾ..?