ಬೆಂಗಳೂರು: ವಿಶ್ವಾಸ ದ್ರೋಹದಲ್ಲಿ ಬಿಜೆಪಿ ಎತ್ತಿದ ಕೈ. ಪಕ್ಷ ಕಟ್ಟಿ ಬೆಳೆಸಿದ , ಬಿಎಸ್ವೈ ಅವರನ್ನೇ ಅವಮಾನ ಮಾಡಿ ಅವರಿಂದ ಹೀನಾಯವಾಗಿ ರಾಜೀನಾಮೆ ಪಡೆದು. ಪಕ್ಷ ಕಟ್ಟಿದ ನಾಯಕನನ್ನು ದ್ರೋಹ ಮಾಡಿದ್ದು ದೊಡ್ಡ ವಿಶ್ವಾಸ ದ್ರೋಹ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ಕಿಡಿಕಾರಿದರು.
ಇನ್ನೂ ಫೇಸ್ ಬುಕ್ ಮೂಲಕ ಬಿಜೆಪಿ ವಿರುಧ್ದ ಟೀಕೆ ಮಾಡಿದ ಶರವಣ ಅವರು, ವಿಶ್ವಾಸ ದ್ರೋಹ ದ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗೆ ಇಲ್ಲ, ನಾಡಿನ ಜನ ಈ ಬಿಜೆಪಿ ಸಿಡಿಗಳನ್ನು ಕಣ್ಣಾರೆ ಕಂಡಿದ್ದರು. ಒಬ್ಬ ಅಲ್ಲ.. ಬೇಕಾದಷ್ಟು ನಾಯಕರು ಸಿಡಿ ಗಳಲ್ಲಿ ರಾಸಲೀಲೆಯಲ್ಲಿ ರಾರಜಿಸಿದ ನಾಯಕರ ಪಕ್ಷದಿಂದ ಕುಮಾರಣ್ಣ ನೈತಿಕತೆಯ ಪಾಠ ಕಲಿಯಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷ ಪಾಠದ ಬಗ್ಗೆ ಬಿಜೆಪಿ ಮಾತನಾಡುವುದು ಜೋಕ್. ಹಾಸ್ಯಾಸ್ಪದ. ಭ್ರಷ್ಟಚಾರದ ಕಾರಣಕ್ಕೆ ಆ ಪಕ್ಷದ ನಾಯಕರೇ ಜೈಲು ಸೇರಿದ್ದಾರೆ. ಭ್ರಷ್ಟಚಾರದ ಕಾರಣಕ್ಕೆ ಇತ್ತೀಚೆಗೆ ಮಾಜಿ ಸಿಎಂ ಆಪ್ತ…ಸಿಬ್ಬಂದಿ, ಗುತ್ತಿಗೆದಾರ ಮೇಲೆ..ಬಿಜೆಪಿ ಅವರೇ ದಾಳಿ ಮಾಡಿದ್ದಾರೆ.. ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡುವ ಸಣ್ಣ ಯೋಗ್ಯತೆ ಕೂಡ ಇಲ್ಲ.ಬೈಗಾಮಿ ಬಗ್ಗೆ…ಮಾತನಾಡಿರುವುದು ತಪ್ಪು. ಗಾಜಿನ ಮನೆಯಲ್ಲಿ ಕುಳಿತು. ಕಲ್ಲು ಹಿಡಿದಿರುವುದು ಸರಿಯಲ್ಲ. ಇತ್ತೀಚಿಗೆ ಸಚಿವರ ದಂಡು ಕೋರ್ಟ್ ಗೆ ಹೋಗಿ ಸಿಡಿ ಬಿಡುಗಡೆ ಬಗ್ಗೆ ಸ್ಟೆ ಪಡೆಯಿತು? ಅಂಥದ್ದು ತಪ್ಪು ಮಾಡಿದ್ದಾದರೂ ಏನು? ಅವರ ತಪ್ಪಿನ ಬಗ್ಗೆ ಅವರಿಗೆ ಏಕೆ ಅಂಜಿಕೆ ಎಂದು ಪ್ರಶ್ನಿಸಿದರು.
ರಾಜ್ಯದ ಪ್ರಭಾವಿ ಮಂತ್ರಿಗಳು, ಕೇಂದ್ರ ದ ಮಂತ್ರಿಗಳು, ಬಂಡಾಯ ನಾಯಕರು ಎಲ್ಲರದ್ದೂ ಒಂದೇ ಯೋಗ್ಯತೆ ಆದರೆ…ಈ ಪಕ್ಷಕ್ಕೆ ಮಾನ ಮರ್ಯಾದೆ ಇದೆಯೇ? ಹೆಸರಗಳನ್ನು ಹೇಳುವುದಾದರೆ… ಜಾರಕಿಹೊಲೀ, ಸದಾನಂದ ಗೌಡ, ಯತ್ನಾಳ್.ಇನ್ನು ಬಿಡುಗಡೆಗೆ ಕಾದಿರುವ ಸಿಡಿ ಬಗ್ಗೆ ಬಿಜೆಪಿ ಏನು ಹೇಳುತ್ತವೆ. ಒಬ್ಬ ಸಿಎಂ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಮಂತ್ರಿ ಸ್ಥಾನ ಪಡೆದವರು ಎಂದು ನಾನಲ್ಲ..ಅವರದ್ದೇ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿದ್ದಾರೆ…ಇಂಥ ಹೀನ, ನಾಚಿಕೆ ಗೆಟ್ಟ ಹಿನ್ನಲೆಯ ಬಿಜೆಪಿ ನಾಯಕರು ಕುಮಾರ ಸ್ವಾಮಿ ಬಗ್ಗೆ ಹೇಗೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ನಾವು ಸುಮ್ಮನಿರುವುದಿಲ್ಲ ಎಂದು ಫೇಸ್ ಬುಕ್ ಪೋಸ್ಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಮೇಲೆ ದಾಳಿ ನಡೆಸಿ 750 ಕೋಟಿ ಅಕ್ರಮ ಆಸ್ತಿ ಪಾಸ್ತಿ ಪತ್ತೆ ಹಚ್ಚಿದರಲ್ಲ.. ಅದು ಯಾರದ್ದು? ಗುತ್ತಿಗೆದಾರರ ಹಣ ಎಲ್ಲಿಗೆ ಹೋಗುತ್ತಿತ್ತು…ಯಾರ್ಯಾರು ಶಾಮೀಲು ಎಂದು ಪತ್ತೆ ಹಚ್ಚಲೀ..ಇವರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು ಆಗುತ್ತದೆ ಮಾಜಿ ಸಿಎಂ..ಆಪ್ತ ಉಮೇಶ ಹತ್ರ ಸುಮಾರು ಎರಡು ಸಾವಿರ ಕೋಟಿ ಆಸ್ತಿ ಎಲ್ಲಿಂದ ಬಂತು. ಅದು ಯಾರ ದುಡ್ಡು.KSRTC ಕಂಡಕ್ಟರ್ ಇಷ್ಟು ಹೆಗೆ ದುಡಿದ? ಅದು ಯಾರ ಅಕ್ರಮ ಹಣ?? ಉತ್ತರ ಕೊಡಿ ಎಂದು ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ ಗೈದರು.