ಕರ್ನೂಲ್: ಹಬ್ಬಗಳನ್ನ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮಾಡ್ತಾರೆ. ವಿಭಿನ್ನತೆ ಅನ್ನೋದು ಎಲ್ಲರ ಆಚರಣೆಯಲ್ಲೂ ಅಡಗಿರುತ್ತೆ. ಆದ್ರೆ ಕೆಲವೆಡೆ ವಿಚಿತ್ರ ಎನಿಸೋ ಸಂಪ್ರದಾಯವೂ ಆಗಾಗ ಸುದ್ದಿಯಾಗ್ತಾ ಇರುತ್ತೆ. ಇದೀಗ ಅಲ್ಲೊಂದು ಪ್ರದೇಶದಲ್ಲಿ ದಸರಾವನ್ನ ವಿಭಿನ್ನವಾಗಿ ಅಲ್ಲ ಭಯಂಕರವಾಗಿ ಆಚರಿಸಿದ್ದಾರೆ.
ಎಸ್.. ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ದಸರಾ ಹಬ್ಬ ಆಚರಿಸಿದ್ದಾರೆ. ಸಹಸ್ರಾರು ಮಂದಿ ಜನ ಸೇರಿದ್ದಾರೆ. ಅದಕ್ಕೆಂದೆ ಪೊಲೀಸರು ಪ್ರೊಟೆಕ್ಷನ್ ಕೊಡೋದಕ್ಕೆ ಆ ಜಾಗದಲ್ಲಿ ಇದ್ದರು. ಆದ್ರೆ ಪೊಲೀಸರಿಗೂ ಡೋಂಟ್ ಕೇರ್ ಎನ್ನದ ಜನ ಪೊಲೀಸರೆದುರೆ ದೆಣ್ಣೆ, ಕಬ್ಬಿಣದ ಬಡಿಗೆ ತೆಗೆದುಕೊಂಡು ಬಡಿದಾಡಿಕೊಂಡಿದ್ದಾರೆ.
ಇದು ಯಾವುದೋ ದ್ಷೇಷಕ್ಕೋ.. ಅಥವಾ ಹಬ್ಬದ ಸಮಯದಲ್ಲಿ ಜಗಳವಾಗಿದ್ದಕ್ಕಲ್ಲ.. ಅದು ಹಬ್ಬದ ಸಂಪ್ರದಾಯವಂತೆ. ಜಿಲ್ಲೆಯ ಅರಕೆರೆ, ನೇರಣಿಕಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ದಸರಾವನ್ನ ಪ್ರತಿ ವರ್ಷ ಇದೇ ರೀತಿ ವಿಭಿನ್ನವಾಗಿಯೇ ಆಚರಿಸಲಾಗುತ್ತದೆಯಂತೆ.
ಗ್ರಾಮದ ದೇವರನ್ನು ಕರೆತರುವಾಗ ಹೀಗೆ ಕಬ್ಬಿಣ, ದೊಣ್ಣೆಗಳಿಂದ ಹೊಡೆದಾಡಿಕೊಳ್ಳುತ್ತಾರಂತೆ. ಈ ರೀತಿ ಮಾಡಿದ್ರೆ ಗ್ರಾಮಕ್ಕೆ ಒಳ್ಳೆಯದಾಗುತ್ತೆ ಅನ್ನೋದು ಗ್ರಾಮಸ್ಥರ ನಂಬಿಕೆ. ಇದೀಗ ಈ ಸಂಪ್ರದಾಯದಿಂದ 80 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.