ಬೆಂಗಳೂರು: ಕಳೆದ ಬಾರಿ ಬಿಜೆಪಿ ಪಕ್ಷ ಆಡಳಿತದಲ್ಲಿದ್ದಾಗ 40% ಕಮಿಷನ್ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಕಾಂಗ್ರೆಸ್ ಕಮಿಷನ್ ವಿಚಾರವನ್ನು ಖಂಡಿಸಿತ್ತು. ಆದರೆ ಇದೀಗ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಮೀಷನ್ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಿಎಂ ಅವರೇ ಒಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟವರು ವಿದೇಶದಲ್ಲಿದ್ದಾರೆ. ಸಿಎಂ ಹೇಳಿದರೂ ಆ ಅಧಿಕಾರಿಯನ್ನು ಕೆಲಸಕ್ಕೆ ತೆಗೆದುಕೊಳ್ಳಬೇಡಿ ಎಂದಿದ್ದಾರಂತೆ. ಈ ಹಿಂದೆ ಭಾಗ್ಯಗಳನ್ನು ನೀಡಿದ್ದರು. ಈಗ ಜ್ಯೋತಿ ಕಾರ್ಯಕ್ರಮ ನಡೆಯುತ್ತಿದೆ. ಎಸಿಬಿ ರೈಡ್ ಆಗಿದ್ದ ಅಧಿಕಾರಿಯನ್ನು ಸಿಎಂ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆ.
ಈ ಹಿಂದೆ ಸರ್ಕಾರದ ಹಗರಣವನ್ನು ತನಿಖೆ ಮಾಡಲಿ ಯಾರು ಬೇಡ ಅಂತಾರೆ. ಜನಪರ ಚಿಂತನೆ ಮಾಡಿ ಕೆಲಸ ಮಾಡಬೇಕು. ಆದರೆ ಈ ಸರ್ಕಾರ ಅದನ್ನು ಮಾಡುತ್ತಿಲ್ಲ. ಹಿಂದಿನ ಸರ್ಕಾರದ ಅಕ್ರಮಗಳನ್ನು ತನಿಖೆ ಮಾಡುವ ಸರ್ಕಾರ ಇದು. ಅವರಿಗೆ ಲ್ಯಾಂಡ್ ಕೊಟ್ಟಿದ್ದಾರೆ ಅಂತಾರಲ್ಲ ಇವರು ಅಧಿಕಾರದಲ್ಲಿದ್ದಾಗ ಯಾರಿಗೆಲ್ಲಾ ಲ್ಯಾಂಡ್ ಕೊಟ್ಟಿದ್ದಾರೆ. ಕಾಂಗ್ರೆಸ್ ನವರು ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿಯ 40% ಕಮಿಷನ್ ಆರೋಪ ಮಾಡಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಯಾವ ಗುತ್ತಿಗೆ ಸಂಘದೊಂದಿಗೆ ಸಭೆ ನಡೆಸಿದ್ದಾರೆ. ವರ್ಗಾವಣೆ ದಂಧೆ ಆರಂಭವಾಗಿರುವ ಬಗ್ಗೆ ಅಧಿಕಾರಿಗಳೇ ನನ್ನ ಬಳಿ ಹೇಳಿದ್ದಾರೆ. ಈಗ 5 ಪರ್ಸೆಂಟ್ ಗೆ ಯಾಕೆ ಬೇಡಿಕೆ ಇಟ್ಟಿದ್ದೀರಿ. ಅವರಿಗೆ 40% ಕೊಡುತ್ತಿದ್ರಿ ನಮಗೆ 5% ಕೊಡಿ ಅಂತ ಯಾಕೆ ಕೇಳ್ತಾ ಇದ್ದೀರಿ ಎಂದಿದ್ದಾರೆ.