ಗದಗ: ಜಿಲ್ಲೆಗೆ ಭೇಟಿ ನೀಡಿದ್ದ ಸಚಿವ ಕೆ ಎಸ್ ಈಶ್ವರಪ್ಪ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಗುಡುಗಿದ್ದಾರೆ. ಆರ್ ಎಸ್ ಎಸ್ ವಿಚಾರವಾಗಿ, ಅವರು ಹುಟ್ಟುವ ಮೊದಲೇ ಆರ್ ಎಸ್ ಎಸ್ ಇತ್ತು ಎಂದಿದ್ದಾರೆ.
1925 ರಲ್ಲೇ ಆರ್ ಎಸ್ ಎಸ್ ಅಸ್ತಿತ್ವದಲ್ಲಿತ್ತು. ಅಂದೇನು ದೇವೇಗೌಡರವರು ಹುಟ್ಟಿರಲಿಲ್ಲ ಎಂದಿದ್ದಾರೆ. ದೇವೇಗೌಡರ ಮೂಲಕ ಆರ್ ಎಸ್ ಎಸ್ ಗೆ ವಿಶೇಷ ಪ್ರಭಾವ ಬೆಳೆಯುವ ಅವಶ್ಯಕತೆಯಿಲ್ಲ. ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಆನಂದವಾಗಿ ರಾಜಕಾರಣ ಮಾಡಲಿ ಎಂದಿದ್ದಾರೆ.
ಆರ್ ಎಸ್ ಎಸ್ ಬಗ್ಗೆ ಮಾತನಾಡಿದ್ರೆ ಪ್ರಚಾರ ಸಿಗುತ್ತೆ ಅಂತ ಈ ರೀತಿ ಮಾತನಾಡಿದ್ದಾರೆ. ಸೂರ್ಯನಿಗೆ ಬೈದರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲೇ ಕೆಲವರಿರ್ತಾರೆ. ಕುಮಾರಸ್ವಾಮಿಯೂ ಆ ಭ್ರಮೆಯಲ್ಲೇ ಇದ್ದಾರೆ. ಕುಮಾರಸ್ವಾಮಿ ಎಲ್ಲಿ..? ಆರ್ ಎಸ್ ಎಸ್ ಎಲ್ಲಿ..? ಎಂದು ಪ್ರಶ್ನಿಸಿದ್ದಾರೆ.