ಮಂಡ್ಯ: ಇಷ್ಟು ವರ್ಷ ಬಿಜೆಪಿ ತನ್ನ ಭದ್ರಕೋಟೆಗಳತ್ತ ಮಾತ್ರ ಗಮನ ಕೊಟ್ಟಿತ್ತು. ಆದ್ರೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನೇ ಹೊಡೆಯಲು ಬಿಜೆಪಿ ಪ್ರಬಲ ಪ್ರಯತ್ನ ನಡೆಸುತ್ತಿದೆ. ಅದುವೆ ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಸಜ್ಜಾಗಿದೆ. ಅದೇ ಪ್ರಯತ್ನದ ಹಾದಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಬಿಜೆಪಿ ಮಾಡ್ತಾ ಇದೆ. ಅದರ ಭಾಗವಾಗಿ ಹೈಕಮಾಂಡ್ ನಾಯಕರು ಹಳೆ ಮೈಸೂರು ಭಾಗದಲ್ಲಿ ಸಂಚಾರ ಆರಂಭಿಸಿದ್ದಾರೆ.
ಮಾರ್ಚ್ 12ಕ್ಕೆ ಪ್ರಧಾನಿ ಮೋದಿ ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅದರ ಜೊತೆಗೆ ಅಂದೇ ಬೆಂಗಳೂರು – ಮೈಸೂರು ದಶಪಥ ರಸ್ತೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಚುನಾವಣೆಗೂ ಮುನ್ನ ಈ ರಸ್ತೆ ಉದ್ಘಾಟನೆ ಮಾಡುವುದರಿಂದ ಬಿಜೆಪಿಗೇನೆ ಪ್ಲಸ್ ಪಾಯಿಂಟ್ ಆಗಲಿದೆ. ಈ ವೇಳೆ ಜನರ ಮನಸ್ಸು ಸೆಳೆಯುವ ಪ್ರಯತ್ನವೂ ಪ್ರಧಾನಿ ಮೋದಿ ಅವರಿಂದ ಆಗುತ್ತದೆ.
ಇದೆಲ್ಲದರ ನಡುವೆ ಜೆಡಿಎಸ್ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ದೇವೇಗೌಡರು ಕೂಡ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಮಾರ್ಚ್ 26 ರಂದು ರೋಡ್ ಶೋ ನಡೆಸಲು ದೇವೇಗೌಡ ಅವರು ನಿರ್ಧಾರ ಮಾಡಿದ್ದಾರೆ. ಸಾವಿರಾರು ಕಾರ್ಯಕರ್ತರನ್ನು ಸೇರಿಸಿ ರೋಡ್ ಶೋ ಮಾಡಲು ನಿರ್ಧಾರ ಮಾಡಿದ್ದಾರೆ. ಈ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಸ್ಟ್ರಾಂಗ್ ಎಂಬುದನ್ನು ಪ್ರೂವ್ ಮಾಡಲು ಹೊರಟಿದ್ದಾರೆ.