ಬೆಂಗಳೂರು: ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪನ ಮಗ ಪ್ರಶಾಂತ್ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಮಾಡಾಳು ಪ್ರಶಾಂತ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಇನ್ನು ಲೋಕಾಯುಕ್ತ ಅಧಿಕಾರಿಗಳು ಮಾಡಾಳು ಪ್ರಶಾಂತ್ ಮನೆಯಲ್ಲಿ ಪರಿಶೀಲನೆ ನಡೆಸುತ್ತಲೆ ಇಸಧಾರೆ. ಇಂದು ಡೈರಿಯೊಂದು ದೊರೆತಿದ್ದು, ಹಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಪ್ರಶಾಂತ್ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಕೆಲವೊಂದು ಕೋಡ್ ವರ್ಡ್ ಗಳು ಪತ್ತೆಯಾಗಿದೆ. ಕೆಲವೊಂದು ಹೆಸರುಗಳನ್ನು ಆ ಕೋಡ್ ವರ್ಡ್ ನಲ್ಲಿಯೇ ಉಲ್ಲೇಖಿಸಲಾಗಿದೆ. ಅದೇ ಡೈರಿಯಲ್ಲಿ ಕೋಟಿ ಕೋಟಿ ವ್ಯವಹಾರದ ದಾಖಲೆಗಳಿದೆ. ಚೀಟಿತೊಂದು ಪತ್ತೆಯಾಗಿದ್ದು, ಆ ಚೀಟಿಯಲ್ಲಿ ದಿನಾಂಕ ಹಾಗೂ ಹಣದ ಲೆಕ್ಕವನ್ನು ಬರೆಯಲಾಗಿದೆಯಂತೆ. ಆ ಹಣ ಯಾರಿಂದ ಪಡೆಯಲಾಗಿದೆ, ಎಲ್ಲಿಗೆ ಹೋಗುತ್ತೆ ಇದೆಲ್ಲವನ್ನು ತಿಳಿಯಬೇಕೆಂದರೆ ವಿಚಾರಣೆಯಲ್ಲಿ ಕೋಡ್ ವರ್ಡ್ ಸತ್ಯ ಬಯಲಾಗಬೇಕಿದೆ.
ಇನ್ನು ಇದೇ ಡೈರಿಯಲ್ಲಿ ಪೊಲೀಸ್ ಆಫೀಸರ್ ಒಬ್ಬರ ಹೆಸರು ಕೂಡ ಪತ್ತೆಯಾಗಿದೆಯಂತೆ. ಪ್ರಶಾಂತ್ ಮನೆಯಲ್ಲಿ ಬಗೆದಷ್ಟು ಮೊಗದಷ್ಟು ವಿಚಾರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತಿದೆ. ಸೋ ಪೊಲೀಸರು ಈ ವಿಚಾರಣೆಯಲ್ಲಿ ಸರಿಯಾದ ರೀತಿಯಲ್ಲಿ ನಡೆಸಿದರು ಇನ್ನಷ್ಟು ಸತ್ಯ ಹೊರ ಬೀಳುವ ಸಾಧ್ಯತೆ ಇದೆ.