ಸುದ್ದಿಒನ್, ಚಿತ್ರದುರ್ಗ, (ಅ.03) : ಹಿಂದೂ ಮಹಾಗಣಪತಿ ಕರ್ತವ್ಯಕ್ಕೆ ಗೈರಾದ ಎಎಸ್ಐ ಆತ್ಮಹತ್ಯೆ ಮಾಡಿಕೊಂಡ ಘಟನೆ ದಂಡಿನಕುರುಬರಹಟ್ಟಿ ಬಳಿ ನಡೆದಿದೆ.
ಮೃತರನ್ನು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುಮೂರ್ತಿ(50) ಎಂದು ಗುರುತಿಸಲಾಗಿದೆ. ದಂಡಿನಕುರುಬರಹಟ್ಟಿ ಗ್ರಾಮದ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಯಕನಹಟ್ಟಿಗೂ ಮೊದಲು ಐಮಂಗಲದಲ್ಲಿ ಐಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಕೆಲ ದಿನಗಳ ಹಿಂದೆ ಎಎಸ್ ಐ ಆಗಿ ಬಡ್ತಿ ಪಡೆದಿದ್ದರು. ಹಿಂದೂ ಮಹಾಗಣಪತಿ ವಿಸರ್ಜನೆ ಬಂದೋ ಬಸ್ತ್ ಗೆ ತಾವೇ ಕೇಳಿ ಹಾಕಿಸಿಕೊಂಡಿದ್ದರು. ಆದರೆ ಬಂದೋಬಸ್ತ್ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ ಎಂದು ಎಸ್ಪಿ ರಾಧಿಕಾ ತಿಳಿಸಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.