Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪರಿಸರ ಸಮತೋಲನ ಕಾಪಾಡಲು ಸಾವಯವ ಕೃಷಿಯೇ ಪರಿಹಾರ : ಡಾ.ಪಿ.ರಮೇಶ್

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, (ಡಿ.23) : ನಮ್ಮ ಪರಿಸರ ಸಮತೋಲನ ಕಾಪಾಡಲು ಸಾವಯವ ಕೃಷಿಯೇ ಪರಿಹಾರ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಸಾವಯವ ಕೃಷಿಕರು ಹಾಗೂ ಪ್ರಗತಿಪರ ರೈತರಾದ ಜ್ಞಾನೇಶ್ ಅವರ ಜಮೀನಿನಲ್ಲಿ ಶುಕ್ರವಾರ ಜಿಲ್ಲಾಡಳಿತ, ಕೃಷಿ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಇಂಡಿಯನ್ ಫಾರ್ಮಸ್ ಫರ್ಟಿಲೈಸರ್ ಕೋ-ಆಪರೇಟಿವ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ರೈತ ಸಂವಾದ ಕಾರ್ಯಕ್ರಮವನ್ನು ದೇಸಿ ಗಿರ್ ಹಸುವಿಗೆ ಮೇವು ತಿನ್ನಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಸಮತೋಲನ ಕಾಪಾಡಲು ಸಾವಯವ ಕೃಷಿಗೆ ಬೇರೆ ಪರ್ಯಾಯ ಇಲ್ಲ. ಸಾವಯವ ಕೃಷಿಯನ್ನೇ ನಾವೆಲ್ಲರೂ ಚಿಂತನೆ ಮಾಡಬೇಕಿದೆ. ಸಾವಯವ ಕೃಷಿ ಸುಸ್ಥಿರ ಕೃಷಿಯಾಗಿ ಮಾರ್ಪಾಡಾಗಿ ಪ್ರಸ್ತುತ ದಿನಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿ ರೈತರು ಸಮರ್ಪಣಾ ಮನೋಭಾವದಿಂದ ಸಾವಯವ ಕೃಷಿಯನ್ನೇ ಮುಂದುವರೆಸಬೇಕಿದೆ ಎಂದರು.

ಸಾವಯವ ಕೃಷಿಯ ಬೆಳೆಗಳಿಗೆ ನಿಜವಾದ ಬೆಲೆ ಮಾರುಕಟ್ಟೆಯಲ್ಲಿ ದೊರಕುವಂತಾಗಬೇಕು. ಸಾವಯವ ಕೃಷಿ ಬೆಳೆಗಳಿಗೆ ಅದಕ್ಕೆ ಸರಿಸಮಾನವಾದ ಬೆಲೆಯನ್ನು ಕೊಟ್ಟು ಖರೀದಿ ಮಾಡುವ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಚಿಂತನೆಯನ್ನೂ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಾವಯವ ಕೃಷಿ ಮುನ್ನಲೆಗೆ ತರಬೇಕು. ಸಾವಯವ ಕೃಷಿ ಕುರಿತು ರೈತರಿಗೆ ಹಾಗೂ ನಾಗರಿಕರಿಗೂ ತಿಳುವಳಿಕೆ ನೀಡಬೇಕು ಎಂಬ ಉದ್ದೇಶದೊಂದಿಗೆ ಚಿತ್ರದುರ್ಗದಲ್ಲಿ ಸಾವಯವ ರೆಸ್ಟೋರೆಂಟ್‍ನ್ನು (ಆಗ್ರ್ಯಾನಿಕ್ ಕೆಫೆ) ತೆರೆಯುವ ಕುರಿತು ಹೊಸ ಚಿಂತನೆಯು ಸಾವಯವ ಕೃಷಿಕರು ಹಾಗೂ ಪ್ರಗತಿಪರ ರೈತರಾದ ಜ್ಞಾನೇಶ್ ಅವರಿಂದ ಪ್ರಾರಂಭವಾಗಿದೆ. ಎಲ್ಲ ಆಹಾರಗಳನ್ನು ಸಾವಯವ ಉತ್ಪನ್ನಗಳಿಂದಲೇ ತಯಾರು ಮಾಡಿ, ಬಹಳಷ್ಟು ಗುಣಮಟ್ಟದಿಂದ ಕೂಡಿದ ಉತ್ಪನವನ್ನು ಗ್ರಾಹಕರಿಗೆ  ನೀಡಬೇಕು ಎಂದು ಪರಿಕಲ್ಪನೆ ಇದೆ. ಸಾವಯವ ಕೃಷಿ ಮಾಡಿ, ಅದರಿಂದ ಬಂದ ಉತ್ಪನ್ನಗಳನ್ನು ಒಂದು ರೆಸ್ಟೋರೆಂಟ್ ಮೂಲಕ ಎಲ್ಲರಿಗೂ ಉತ್ತಮ ಗುಣಮಟ್ಟದ ಆಹಾರ ತಲುಪಿಸಿದಾಗ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬಹುದು ಎಂಬುದು ಈ ಚಿಂತನೆಯ ಸಾರಾಂಶವಾಗಿದೆ. ಈ ಪರಿಕಲ್ಪನೆಗೆ ಸೆಲ್ಕೋ ಫೌಂಡೇಶನ್, ಕೃಷಿ ಇಲಾಖೆಯೂ ಅಗತ್ಯ ಸಹಕಾರ ನೀಡಲಿದೆ ಎಂದರು.

ವರ್ಷದ ಎಲ್ಲ ದಿನವೂ ರೈತರ ದಿನವೇ: ಮಾಜಿ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನವನ್ನು ರೈತ ದಿನಾಚರಣೆಯನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ. ರೈತ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ. ವರ್ಷದ 365 ದಿನವೂ ರೈತರ ದಿನವೇ ಆಗಿದೆ. ಆದರೆ ಒಂದು ದಿನ ರೈತರಿಗೆ ಮೀಸಲಿಟ್ಟು, ಪ್ರತ್ಯೇಕವಾಗಿ ಕೃತಜ್ಞತೆ ಅರ್ಪಿಸಲಾಗುತ್ತಿದೆ. ರೈತರ ದಿನಾಚರಣೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಇದರ ಕುರಿತು ವ್ಯಾಪಾಕ ಪ್ರಚಾರ  ನೀಡುವ ಕೆಲಸ ಆಗಬೇಕಿದೆ. ರೈತ ದಿನಾಚರಣೆಯನ್ನು ಅರ್ಥಗರ್ಭೀತವಾಗಿ ಆಚರಿಸಬೇಕಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಅಭಿಪ್ರಾಯಪಟ್ಟರು.

ಕೃಷಿ ನಮ್ಮ ಬದುಕಿನ ಭಾಗ ಹಾಗೂ ರೀತಿಯಾಗುವುದರ ಜೊತೆಗೆ ಬದುಕನ್ನು ಎದುರಿಸುವ ಸವಾಲು ಆಗಬೇಕಿದೆ. ಈ ನಿಟ್ಟಿನಲ್ಲಿ ಹೊಸ ಚಿಂತನೆ ಹುಟ್ಟು ಹಾಕುವ ಅಗತ್ಯವಿದೆ. ಯಾವುದೇ ಕೆಲಸ ಮಾಡುವ ಮೂಲ ಪುರಷ ಪ್ರಜ್ಞಾವಂತರಾದರೆ ಉತ್ಪನ್ನವು ಗುಣಮಟ್ಟದಿಂದ ಕೂಡಿರುತ್ತದೆ. ಹಾಗಾಗಿ ರೈತರನ್ನು ಪ್ರಜ್ಞಾವಂತರನ್ನಾಗಿ ಮಾಡುವ ಕೆಲಸ ಮಾಡಬೇಕಿದೆ ಎಂದರು.

ರೈತ ಮುಖಂಡರಾದ ನುಲೇನೂರು ಶಂಕರಪ್ಪ ಮಾತನಾಡಿ, ಒಳ್ಳೆಯ ಆಹಾರ ಕೊಡುವುದು ಇಂದಿನ ಕಾಲದ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಚಿತ್ರದುರ್ಗದಲ್ಲಿ ಸಾವಯವ ರೆಸ್ಟೋರೆಂಟ್‍ನ್ನು (ಆಗ್ರ್ಯಾನಿಕ್ ಕೆಫೆ) ತೆರೆಯುವ ಕುರಿತು ಹೊಸ ಚಿಂತನೆಯು ಹೊಂದಿರುವ ಸಾವಯವ ಕೃಷಿಕರು ಹಾಗೂ ಪ್ರಗತಿಪರ ರೈತರಾದ ಜ್ಞಾನೇಶ್ ಅವರಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ನೈಸರ್ಗಿಕ ಕೃಷಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕಾನೂನುಗಳನ್ನು ರೂಪಿಸಬೇಕು ಎಂದು ಹೇಳಿದರು.

ರೈತ ಮುಖಂಡರಾದ ಭೂತಯ್ಯ ಮಾತನಾಡಿ, ಹೆಚ್ಚಿನ ಇಳುವರಿ, ಆದಾಯ ಪಡೆಯುವ ಉತ್ಸುಕತೆಯಲ್ಲಿ ರೈತರು ಭೂಮಿಗೆ ವಿಪರೀತವಾಗಿ ರಾಸಾಯನಿಕ ಗೊಬ್ಬರ ಬಳಸುವುದರಿಂದ ಭೂಮಿಯ ಫಲವತ್ತತೆ ಹಾಳಾಗಿದೆ. ರಾಸಾಯನಿಕ ಗೊಬ್ಬರ ಬಳಕೆ ನಿಲ್ಲಿಸಿ, ಮಣ್ಣಿನ ಸಾರ ವರ್ಧಿಸುವಂತಹ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಆತ್ಮಯೋಜನೆಯಡಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಪಶುಪಾಲನಾ ಇಲಾಖೆಯ ಕುಮಾರ್, ತಿಪ್ಪೇಸ್ವಾಮಿ, ರೇಷ್ಮೆ ಇಲಾಖೆಯ ಉಷಾ, ಕೃಷಿ ತಂತ್ರಜ್ಞರ  ಸಂಸ್ಥೆಯ ಶ್ರೀನಿವಾಸ್ ರೆಡ್ಡಿ, ಕೃಷಿ ಇಲಾಖೆ ಉಪನಿರ್ದೇಶಕ ಪ್ರಭಾಕರ್, ಸಹಾಯಕ ನಿರ್ದೇಶಕರಾದ ಚಂದ್ರಕುಮಾರ್, ಪ್ರವೀಣ್ ಚೌಧರಿ, ಆರ್‍ಬಿಐನ ಗುರುರಾಜ್ ಆಚಾರ್, ಸೆಲ್ಕೋ ಸಂಸ್ಥೆಯ ಮೋಹನ್ ಭಾಗವತ್, ಇಪ್ಕೋ ಸಂಸ್ಥೆಯ ಚಿದಂಬರಂ, ಪ್ರಗತಿಪರ ರೈತ ಮಹಿಳೆ ಅರುಣಾ, ರೈತ ಮುಖಂಡರಾದ ಸುರೇಶ್ ಬಾಬು, ಧನಂಜಯ, ಮಲ್ಲಿಕಾರ್ಜುನ್, ಪ್ರವೀಣ್ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು. ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಸಾವಯವ ಕೃಷಿಕರು ಹಾಗೂ ಪ್ರಗತಿಪರ ರೈತರಾದ ಜ್ಞಾನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಿ : ಶಿವಲಿಂಗಾನಂದ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ನ. 23 : ರಕ್ತವನ್ನು ಕೃತಕವಾಗಿ ತಯಾರು ಮಾಡಲು ಬರುವುದಿಲ್ಲ, ಅಲ್ಲದೆ ಯಾವ ಪ್ರಾಣಿಗಳ ರಕ್ತವನ್ನು

ಸೆಡೆಗಳು ಎಂದಿದ್ದ ರಜತ್ ಗೆ ಬೆವರಿಳಿಸಿದ ಬಾದ್ ಶಾ..!

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಶೋಭಾ ಶೆಟ್ಟಿ ಬಂದಿದ್ದಾರೆ. ರಜತ್ ಆರಂಭದಿಂದಾನು ಒಳ್ಳೆ ರೌಡಿಸಂ ತೋರಿಸುವ ರೀತಿಯೇ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರಬೇಕು

ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ : ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ. ಕೇವಲ ಪದವಿ ಪಡೆದರೆ ಸಾಲದು. ಶಿಕ್ಷಣದ

error: Content is protected !!