ಕೋಲಾರ: ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ಸಾಗಿದೆ. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೋಗುತ್ತಿದ್ದ ಕಾರನ್ನು ಮಕ್ಕಳು ತಡೆದಿದ್ದಾರೆ. ಬಳಿಕ ಶಾಲೆಯ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ. ಶಾಲಾ ಕಟ್ಟಡ ಅವ್ಯವಸ್ಥೆ ಬಗ್ಗೆ ಮನವಿ ಮಾಡಿದ್ದಾರೆ.
ಬಂಗವಾದಿ ಶಾಲಾ ಕಟ್ಟಡ ಶಿಥಿಲಾವಸ್ಥೆಯಿಂದ ಕೂಡಿದೆ. ಈ ಸಮಸ್ಯೆ ಹಿಡಿದು ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದರು. ಮಕ್ಕಳ ಪ್ರತಿಭಟನೆ ಕಂಡ ಕುಮಾರಸ್ವಾಮಿ ಅವರು ಮಕ್ಕಳ ಬಳಿ ವಿಚಾರಿಸಿದ್ದಾರೆ. ಮಕ್ಕಳ ಬಳಿ ಸಮಸ್ಯೆಯನ್ನು ಕೇಳಿದ್ದಾರೆ. ನಂತರ ಸ್ಕೂಲ್ ಬಳಿ ಹೋಗಿ ಕಟ್ಟಡವನ್ನು ವೀಕ್ಷಿಸಿದ್ದಾರೆ.
ಸ್ಥಳದಲ್ಲಿಯೇ ನಿಂತು ಶಿಕ್ಷಣ ಸಚಿವ ನಾಗೇಶ್ ಅವರಿಗೆ ಕರೆ ಮಾಡಿದ್ದಾರೆ. ಶಾಲೆಯ ಸಮಸ್ಯೆಯನ್ನು ವಿವರಿಸಿದ್ದಾರೆ. ಆ ಕಡೆಯಿಂದ ಫೋನ್ ನಲ್ಲಿಯೇ ಸಮಸ್ಯೆ ಬಗೆಹರಿಸುವುದಾಗಿ ಸಚಿವ ನಾಗೇಶ್ ಅವರು ಭರವಸೆ ನೀಡಿದ್ದಾರೆ. ಬಳಿಕ ಕುಮಾರಸ್ವಾಮಿ ಅವರು, ಡಿಡಿಪಿಐ ಗೂ ಕರೆ ಮಾಡಿದ್ದಾರೆ. ಅವರು ಕೂಡ ಶೀಘ್ರದಲ್ಲಿಯೇ ಕಟ್ಟಡ ಕಟ್ಟಿಸಿಕೊಡುವುದಾಗಿ ಮಾಹಿತಿ ನೀಡಿದ್ದಾರೆ.