ಚಿತ್ರದುರ್ಗ,(ನ.18) : ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ನವೆಂಬರ್ 22ರಂದು ಒಂದು ದಿನ ಚಿತ್ರದುರ್ಗ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ 10ಕ್ಕೆ ಬೆಂಗಳೂರು ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲೆಕಾಪ್ಟರ್ ಮೂಲಕ ಹೊರಟು, ಬೆಳಿಗ್ಗೆ 10.45ಕ್ಕೆ ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಮುರಾರ್ಜಿ ದೇಸಾಯಿ ಮಾಡಲ್ ರೆಸಿಡೆನ್ಸಿಯಲ್ ಸ್ಕೂಲ್ ಆವರಣದ ಹೆಲಿಪ್ಯಾಡ್‍ಗೆ ಆಗಮಿಸಿ, ಹಿರಿಯೂರು ತಾಲ್ಲೂಕಿನ ಐತಿಹಾಸಿಕ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡುವರು. ನಂತರ ವಾಣಿ ವಿಲಾಸ ಸಾಗರ ಹತ್ತಿರ ಆಯೋಜಿಸಿರುವ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 1.45ಕ್ಕೆ ಹಿರಿಯೂರು ತಾಲ್ಲೂಕು ವಿವಿ ಪುರ ಮುರಾರ್ಜಿ ದೇಸಾಯಿ ಮಾಡಲ್ ರೆಸಿಡೆನ್ಸಿಯಲ್ ಸ್ಕೂಲ್ ಆವರಣದ ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಮೂಲಕ ಚಳ್ಳಕೆರೆ ಸಾಯಿ ಬಾಬಾ ಮಂದಿರ ಹತ್ತಿರ ಹೆಲಿಪ್ಯಾಡ್‍ಗೆ ಆಗಮಿಸಿ, ಮೀರಾಸಾಬಿಹಳ್ಳಿ ರಾಣಿಕೆರೆಗೆ ಬಾಗಿನ ಅರ್ಪಣೆ ಮಾಡುವರು. ನಂತರ ಚಳ್ಳಕೆರೆಯ ಬಿ.ಎಂ.ಜಿ.ಹೆಚ್.ಎಸ್.ರಂಗಮಂದಿರದ ಆವರಣದಲ್ಲಿ ಆಯೋಜಿಸಿರುವ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸಂಜೆ 4ಕ್ಕೆ ಚಳ್ಳಕೆರೆಯ ಸಾಯಿ ಬಾಬಾ ಮಂದಿರ ಹತ್ತಿರದ ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ತೆರಳುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ.ಚನ್ನಬಸವೇಶ ತಿಳಿಸಿದ್ದಾರೆ.