Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸರ್ಕಾರಿ ಶಾಲೆ ದತ್ತು ಸ್ವೀಕರಿಸಿದ ಲವಕುಮಾರ್ ಅವರ ಕಾರ್ಯ ಶ್ಲಾಘನೀಯ : ಎಂ. ಚಂದ್ರಪ್ಪ

Facebook
Twitter
Telegram
WhatsApp

ವರದಿ ಮತ್ತು ಫೋಟೋ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಸೆ.30) :  ಅಧಿಕಾರ ಶಾಶ್ವತವಲ್ಲ, ಅಧಿಕಾರ ಬಂದಾಗ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗವಾಗಬೇಕಿದೆ, ಆಗ ಮಾತ್ರ ಅಧಿಕಾರ ಸಿಕ್ಕಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಶಾಸಕರು ಹಾಗೂ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಎಂ. ಚಂದ್ರಪ್ಪ ತಿಳಿಸಿದರು.

ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಮೂರು ನೂತನ ಕೂಠಡಿಗಳ ನಿರ್ಮಾಣದ ಭೂಮಿ ಪೂಜಾ ಮತ್ತು ಶಾಲೆಯ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಧಿಕಾರ ಯಾವಾಗ ಬೇಕಾದರೂ ಬರಬಹುದು ಹೋಗಬಹುದು, ಅದರೆ ಸಿಕ್ಕಾಗ ಮಾತ್ರ ಉತ್ತಮವಾದ ಕೆಲಸವನ್ನು ಮಾಡುವುದರಿಂದ ಮುಂದೆ ಅವುಗಳು ಮಾಡಿದವರ ಹೆಸರನ್ನು ಹೇಳುತ್ತವೆ. ಎಷ್ಟೋ ಶ್ರೀಮಂತರು ತಮ್ಮ ಬಳಿ ಹಣವಿದ್ದರೂ ಸಹಾ ದಾನವನ್ನು ಮಾಡುವುದಿಲ್ಲ ಅದರ ಬದಲಾಗಿ ಅದಕ್ಕೆ ಮತ್ತಷ್ಟು ಸೇರಿಸುವಲ್ಲಿ ನಿರತರಾಗುತ್ತಾರೆ. ಆದರೆ ಕೆಲವೇ ಜನ ಲವಕುಮಾರ್ ಅಂತಹವರು ಈ ರೀತಿಯಾದ ದಾನವನ್ನು ಮಾಡುವುದಕ್ಕೆ ಮುಂದೆ ಬಂದು ಸರ್ಕಾರಿ ಶಾಲೆಯನ್ನು ದತ್ತು ಪಡೆಯುವುದರ ಮೂಲಕ ಅದರ ಅಭಿವೃದ್ದಿಗೆ ಕಾರಣರಾಗಿದ್ದಾರೆ ಎಂದು ಚಂದ್ರಪ್ಪ ತಿಳಿಸಿದರು.

ಮಾನವನಾಗಿ ಹುಟ್ಟಿದ ಮೇಲೆ ಏನಾದರೂ ಸಾಧನೆಯನ್ನು ಮಾಡಬೇಕು ಇಲ್ಲವಾದರೆ ಹುಟ್ಟಿದ್ದು ಸಾರ್ಥಕವಾಗುವುದಿಲ್ಲ, ದೇವರು ನಮಗೆ ನೀಡಿದ್ದಾನೆ. ಅದರಲ್ಲಿ ಸ್ವಲ್ಪ ಭಾಗವನ್ನು ಬೇರೆಯವರಿಗೆ ದಾನಮಾಡುವ ಬುದ್ದಿಯನ್ನು ಹೊಂದಬೇಕಿದೆ ಇದರಿಂದ ಹಲವಾರು ಜನತೆಗೆ ಸಹಾಯವಾಗುತ್ತದೆ.

ಸರ್ಕಾರಿ ಶಾಲಾ ದತ್ತು ಸ್ವೀಕರಿಸಿದ ಲವಕುಮಾರ್ ಅವರ ಕಾರ್ಯ ಶ್ಲಾಘನೀಯ.  ಅಂತಹ ಬುದ್ದಿ ಎಲ್ಲಿರಿಗೂ ಬರುವಂತಾಗಬೇಕು, ಆಗ ಈಂತಹ ಸರ್ಕಾರಿ ಶಾಲೆಗಳು ಉತ್ತಮವಾಗಿ ರೂಪುಗೂಳ್ಳಲು ಸಾಧ್ಯವಿದೆ. ಇಲ್ಲಿನ ಶಾಲಾ ಕೊಠಡಿಗಳು ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದವು ಈಗ ಶಿಥಿಲವಾಗಿದೆ. ಇಲ್ಲಿ ಮೂರು ಕೂಠಡಿಗಳನ್ನು ನಿರ್ಮಾಣ ಮಾಡಲು ಸೂಚನೆ ನೀಡಲಾಗಿದೆ.

ಇದೇ ಸಂದರ್ಭದಲ್ಲಿ ದಾನಿಗಳಾದ ಲವಕುಮಾರ್ ರವರು ಸಹಾ ಮತ್ತೊಂದು ಕೊಠಡಿಯನ್ನು ನಿರ್ಮಾಣ ಮಾಡುವಂತೆ ಹೇಳಿದ್ದೇವೆ. ಅದಕ್ಕೆ ಅವರು ಸಮ್ಮತಿಸಿದ್ದಾರೆ ಎಂದು ಹೇಳೀದರು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಕಳೆದ ಹಲವಾರು ವರ್ಷಗಳ ಹಿಂದೆ ಯಾವ ರೀತಿ ಇತ್ತು. ಈಗ ಯಾವ ರೀತಿ ಇದೆ ಅಗ ಉತ್ತಮವಾದ ರಸ್ತೆಗಳಿರಲಿಲ್ಲ, ಈಗ ಎಲ್ಲಾ ಕಡೆಗಳಲ್ಲಿಯೂ ಸಹಾ ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಸಂಚಾರ ಸುಗಮವಾಗಿ ಸಾರ್ವಜನಿಕರು ತಮ್ಮ ವಾಹನದ ಮೂಲಕ ಆರಾಮವಾಗಿ ಓಡಾಡಲು ಅನುಕೂಲವಾಗಿದೆ. ಮುಂದಿನ ದಿನದಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಅಭೀವೃದ್ದಿ ಕಾರ್ಯವನ್ನು ಮಾಡಲಾಗುವುದೆಂದು ಶಾಸಕ ಚಂದ್ರಪ್ಪ ತಿಳಿಸಿದರು.

ದಾನಿಗಳಾದ ಜಿ.ಎಂ.ಲವಕುಮಾರ್ ಮಾತನಾಡಿ, ಈ ಶಾಲೆಯಲ್ಲಿ ನಾನು ಓದಿದ್ದೇನೆ, ಇದಕ್ಕೆ ಏನಾದರೂ ಮಾಡಬೇಕೆಂದು ಕಾರ್ಯಕ್ರಮಕ್ಕೆ ಬಂದಾಗ ದತ್ತು ಪಡೆಯುವುದಾಗಿ ಹೇಳಿದ್ದೆ ಅದರಂತೆ ಈಗ ಶಾಲೆಯನ್ನು ಮುಂದಿನ 5 ವರ್ಷಗಳ ಕಾಲ ದತ್ತು ಪಡೆದು ಅದರ ಅಭಿವೃದ್ದಿಗೆ ಬೇಕಾದ ಸಹಾಯ, ಸಹಕಾರವನ್ನು ನೀಡಲಾಗುವುದು. ಈಗಾಗಲೇ ಶಾಲೆಗೆ ಬೇಕಾದ ವಿವಿಧ ರೀತಿಯ ಸಹಾಯವನ್ನು ಮಾಡಲಾಗುವುದು ಮುಂದಿನ ದಿನದಲ್ಲೂ ಸಹಾ ಶಾಲೆಯನ್ನು ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಡಲಾಗುವುದು ಎಂದರು.

ಸರ್ಕಾರ ಶಾಲೆಯನ್ನು ದತ್ತು ನೀಡುವಾಗ 5 ನಿಭಂದನೆಯನ್ನು ಹಾಕಿದೆ ಅವುಗಳನ್ನು ಪೂರ್ತಿ ಮಾಡಲಾಗುವುದು.‌ನಾನು ಓದಿದ ಶಾಲೆ ಚೆನ್ನಾಗಿ ಇರಬೇಕು. ಇದರಿಂದ ಗ್ರಾಮದ ಮಕ್ಕಳು ಬೇರೆ ಶಾಲೆಗೆ ಹೋಗದೇ ಇಲ್ಲಿಯೇ ಬಂದು ಶಿಕ್ಷಣವನ್ನು ಕಲಿಯಬೇಕೆಂಬುದು ನನ್ನ ಅಸೆಯಾಗಿದೆ ಇದಕ್ಕೆ ಇಲ್ಲಿನ ಬಿಇಓ, ಶಾಲಾ ಶಿಕ್ಷಕರು ಸಹಕಾರವನ್ನು ನೀಡಿದ್ದಾರೆ ಎಂದು ಜಿ.ಎಂ.ಲವಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಇಓ ಶ್ರೀನಿವಾಸ್, ಎಸ್,ಡಿ,ಎಂ.ಸಿ.ಅಧ್ಯಕ್ಷ ಉದಯಕುಮಾರ್, ಚಿತ್ರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಕಾಂತರಾಜ್, ಮಂಜುನಾಥ್, ಎಂ.ಆರ್. ನಾಗರಾಜ್, ಶ್ರೀಮತಿ ಶೀಲಾ ಮಲ್ಲಿಕಾರ್ಜನ್, ಸುರೇಂದ್ರನಾಥ್, ಹಳೆಯ ವಿದಾರ್ಥಿಗಳ ಸಂಘದ ಅಧ್ಯಕ್ಷ ರಾಜಪ್ಪ, ಗ್ರಾಮಸ್ಥರಾದ ಈಶ್ವರಪ್ಪ, ಚಂದ್ರಪ್ಪ, ಸುರೇಂದ್ರನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿದ್ಧರಾಮಯ್ಯ ಅವರನ್ನು ಕೆಣಕಿದ್ದಕ್ಕೆ ಜನ ತಕ್ಕ ಉತ್ತರ : ಮಾಜಿ ಸಚಿವ ಎಚ್.ಆಂಜನೇಯ

  ಸುದ್ದಿಒನ್, ಚಿತ್ರದುರ್ಗ, ನ. 23 : ಸಿದ್ದರಾಮಯ್ಯ ನಾಡು ಕಂಡ ಅಪರೂಪದ ನಾಯಕ, 40 ವರ್ಷ ನಿಷ್ಕಳಂಕ ರಾಜಕಾರಣ ಮಾಡಿದ ಮುತ್ಸದ್ಧಿ. ಆದರೆ, ಅವರ ಹೆಸರಿಗೆ ಕಳಂಕ ತರಲು ಅನಗತ್ಯವಾಗಿ ಮುಡಾ ವಿಷಯ

ಬಿಜೆಪಿಗೆ ಹೀನಾಯ ಸೋಲು : ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಸೋಲು

ಸುದ್ದಿಒನ್, ಬೆಂಗಳೂರು, ನವೆಂಬರ್.23 : ಕರ್ನಾಟಕದಲ್ಲಿ ನಡೆದ ಎಲ್ಲಾ ಮೂರು ವಿಧಾನಸಭಾ ಉಪಚುನಾವಣೆಗಳಾದ ಶಿಗ್ಗಾಂವ್, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇಬ್ಬರು ಬಿಜೆಪಿ ಅಭ್ಯರ್ಥಿಗಳು ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಮತದಾರ

ರೈತ ವಿರೋಧಿ ನೀತಿ ಖಂಡಿಸಿ ನವೆಂಬರ್ 26 ರಂದು ಪ್ರತಿಭಟನೆ : ಜೆ.ಯಾದವರೆಡ್ಡಿ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಸಂಯಕ್ತ ಹೋರಾಟ-ಕರ್ನಾಟಕ ವತಿಯಿಂದ ನ.26 ರಂದು ಜಿಲ್ಲಾಧಿಕಾರಿ

error: Content is protected !!