Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಳ್ಳಕೆರೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಂಪೂರ್ಣ ಮಾಹಿತಿ…!

Facebook
Twitter
Telegram
WhatsApp

 

ಚಳ್ಳಕೆರೆ  ಹೊರವಲಯದ ವಾಲ್ಮೀಕಿ ನಗರದ ಖಾಸಗಿ ಲೇಔಟಲ್ಲಿ ಇತ್ತೀಚಿಗೆ ನಿರ್ಮಾಣವಾಗಿರುವ ಶ್ರೀರಾಘವೇಂದ್ರಸ್ವಾಮಿಗಳ ಮಠವು ಭಕ್ತರನ್ನು ಸೆಳೆಯುವ ಒಂದು ಆಧ್ಯಾತ್ಮಿಕ ಶ್ರದ್ಧಾಕೇಂದ್ರವಾಗಿದೆ. ಕಳೆದ ತಿಂಗಳಷ್ಟೇ ನೂತನವಾಗಿ ಲೋಕಾರ್ಪಣೆಗೊಂಡ ಬೃಂದಾವನವು ದಿನದಿಂದ ದಿನಕ್ಕೆ ಭಕ್ತರನ್ನು ತನ್ನತ್ತ  ಸೆಳೆಯುತ್ತಿದೆ.

ಶ್ರೀರಾಘವೇಂದ್ರಸ್ವಾಮಿಗಳ ಮಠ ಹಾಗೂ ಬೃಂದಾವನ  ಸನ್ನಿಧಿಯು ಭಕ್ತರ  ಶ್ರದ್ಧಾಕೇಂದ್ರವಾಗಿದೆ.

ಪ್ರತಿ ಗುರುವಾರ ನಡೆಯುವ ಪೂಜಾ ಕಾರ್ಯಕ್ರಮಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ. ಈ ಮಠವು ನಂಜನಗೂಡು  ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಆಡಳಿತಕ್ಕೆ ಒಳಪಟ್ಟಿರುತ್ತದೆ. ಮಂತ್ರಾಲಯದ ಮುಖ್ಯ ಮಠಕ್ಕೆ ಸೇರಿರುತ್ತದೆ.
ಮಠದ ಆವರಣದ ಒಳಗೆ ಕಾಲಿಡುತ್ತಿದ್ದಂತೆ ಅತ್ಯಂತ ನಿಶ್ಯಬ್ದ ಹಾಗೂ ಪ್ರಶಾಂತ ವಾತಾವರಣವನ್ನು ಕಾಣಬಹುದಾಗಿದೆ.

ಈ ಮಠದ ಸ್ಥಾಪನೆ ಮಾಡುವ ಹಿಂದೆ ಇಲ್ಲಿನ ಭಕ್ತರು ರಾಯರ ದರ್ಶನ ಪಡೆಯಬೇಕೆಂದರೆ ಚಿತ್ರದುರ್ಗದ ಮಠಕ್ಕೆ ತೆರಳಬೇಕಾಗಿತ್ತು. ಇದು ಎಲ್ಲರಿಗೂ ಸಾಧ್ಯವಾಗುತ್ತಿರಲಿಲ್ಲ. ಇದನ್ನು ಅರಿತ ಇಲ್ಲಿನ ಭಕ್ತ ಮಹಾಶಯರು ಈ ಕೊರಗನ್ನು ನೀಗಿಸುವ ಉದ್ದೇಶದಿಂದ 2013 ರಲ್ಲಿ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸ್ಥಾಪಿಸುವ  ಇಚ್ಚೆ ವ್ಯಕ್ತಪಡಿಸಿ ಅದೇ ವರ್ಷ ಜಾಗ ಗುರುತಿಸಿ, ಪೀಠಾಧ್ಯಕ್ಷರಾಗಿದ್ದ ಶ್ರೀ ಸುಯತೀಂದ್ರ ತೀರ್ಥ ಶ್ರೀ ಪಾದಂಗಳವರಿಂದ ಪಾಯ ಪೂಜೆ ಮಾಡಲಾಯಿತು. ಆದರೆ, ಕಾರಣಾಂತರಗಳಿಂದ ಈ ಮಠ ಸ್ಥಾಪನೆ ಮುಂದೂಡಲ್ಪಟ್ಟಿತು. ಹಲವಾರು ಭಕ್ತರು, ರಾಜಕಾರಣಿಗಳು ಈ ಮಠದ ನಿರ್ಮಾಣಕ್ಕೆ ಸಹಕರಿಸಿದ್ದಾರೆ.

ಉದಾರವಾಗಿ ನೆರವು ನೀಡಿದ್ದಾರೆ. ಹಿರಿಯೂರಿನ ಮಾಜಿ ಶಾಸಕರಾದ ಡಿ. ಸುಧಾಕರ್ ಅವರು ಬೃಂದಾವನ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಆದರೆ ರಾಯರ ಅನುಗ್ರಹದಿಂದ ಇದೇ ವರ್ಷ 2022 ಜೂನ್ ತಿಂಗಳಿನಲ್ಲಿ ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥರು ಆಗಮಿಸಿ ಈ ಮಠವನ್ನು ಲೋಕಾರ್ಪಣೆಗೊಳಿಸಿ ಭಕ್ತರಿಗೆ ದರ್ಶನ ಭಾಗ್ಯಕ್ಕೆ ಅನುವು ಮಾಡಿಕೊಟ್ಟರು. ಮಠದ ಆವರಣದಲ್ಲಿ ರಾಘವೇಂದ್ರಸ್ವಾಮಿಗಳ ಬೃಂದಾವನದ ಜೊತೆಗೆ ನರಸಿಂಹ ದೇವರನ್ನು ಸಹ ಪೂಜಿಸಲಾಗುತ್ತದೆ. ಈ ಮಠದ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಮಠದ ನಿರ್ಮಾಣಕ್ಕೆ ಚಳ್ಳಕೆರೆಯ ಪಾವಗಡ ರಸ್ತೆಯ ಸುಧಾ ಹೋಟೆಲ್ ಕುಟುಂಬದವರು ಮತ್ತು ಚಿತ್ರದುರ್ಗದ ಅಶ್ವಥ್ ನಾರಾಯಣ ಶೆಟ್ಟಿ ಅವರು ಜಮೀನನ್ನು ದಾನವಾಗಿ ನೀಡಿದ್ದಾರೆ.
ಸಾವಿರಾರು ಭಕ್ತರು ಈ ಮಠದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾದರು. ಘಟನೆಗೆ ಸಾಕ್ಷಿಯಾದರು.
ಇಲ್ಲಿನ ಭಕ್ತರ ಅಪೇಕ್ಷೆಯ ಮೇರೆಗೆ  ಮಂತ್ರಾಲಯದಲ್ಲಿ 48 ದಿನಗಳನ್ನು ಪೂಜಿಸಿದ ಮೃತ್ತಿಕೆಯನು ತಂದು ಬೃಂದಾವನ ಪ್ರತಿಷ್ಠಾಪಿಸಲಾಗಿದೆ.

ಪ್ರತಿ ಗುರುವಾರದ ದಿನ ಸಂಜೆ 7.30pm-8.30pm ವರೆಗೆ ರಾಘವೇಂದ್ರ ಸ್ವಾಮಿಗಳ ಬೃಂದಾವನದ ವಿಶೇಷ ಪೂಜೆ ಜರುಗುತ್ತದೆ.
ಪ್ರತಿ ತಿಂಗಳ ಪೌರ್ಣಮಿಯ ದಿನ ಇಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತವನ್ನು ಆಚರಿಸಲಾಗುತ್ತದೆ.

ಶ್ರಾವಣ ಮಾಸದಲ್ಲಿ ಮೂರುದಿನಗಳ ಕಾಲ ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾದ ನೆನಪಿಗೆ ಆರಾಧನಾ ಮಹೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತದೆ.

ಮಾಹಿತಿ :
ಡಾ.ಸಂತೋಷ್ ಹೊಳಲ್ಕೆರೆ

ದಂತ ವೈದ್ಯರು, ಲೇಖಕರು

ಚಿತ್ರದುರ್ಗ-577501

ಮೊ.ನಂ: 9342466936

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಿ : ಶಿವಲಿಂಗಾನಂದ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ನ. 23 : ರಕ್ತವನ್ನು ಕೃತಕವಾಗಿ ತಯಾರು ಮಾಡಲು ಬರುವುದಿಲ್ಲ, ಅಲ್ಲದೆ ಯಾವ ಪ್ರಾಣಿಗಳ ರಕ್ತವನ್ನು

ಸೆಡೆಗಳು ಎಂದಿದ್ದ ರಜತ್ ಗೆ ಬೆವರಿಳಿಸಿದ ಬಾದ್ ಶಾ..!

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಶೋಭಾ ಶೆಟ್ಟಿ ಬಂದಿದ್ದಾರೆ. ರಜತ್ ಆರಂಭದಿಂದಾನು ಒಳ್ಳೆ ರೌಡಿಸಂ ತೋರಿಸುವ ರೀತಿಯೇ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರಬೇಕು

ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ : ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ. ಕೇವಲ ಪದವಿ ಪಡೆದರೆ ಸಾಲದು. ಶಿಕ್ಷಣದ

error: Content is protected !!