ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಜುಲೈ.19) : ಚಾಲೆಂಜಿಂಗ್ ಸ್ಟಾರ್ ದರ್ಶನ್‍ರವರ ಕ್ರಾಂತಿ ಸಿನಿಮಾ ಪ್ರಮೋಷನ್‍ಗೆ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದಿಂದ ನಗರದಲ್ಲಿ ಮಂಗಳವಾರ ಬೈಕ್ ರ್ಯಾಲಿ ನಡೆಯಿತು.
ಮುರುಘಾಮಠದಿಂದ ಹೊರಟ ಬೈಕ್ ರ್ಯಾಲಿಯನ್ನು ಉದ್ಘಾಟಿಸಿದ ಡಾ.ಶಿವಮೂರ್ತಿ ಶರಣರು ಚಿತ್ರನಟರ ಬಗ್ಗೆ ಪ್ರೇಕ್ಷಕರಲ್ಲಿ ಅಭಿಮಾನವಿರಬೇಕು. ಹಾಗಂತ ಯುವಕರು ನಡೆಸುವ ಬೈಕ್ ರ್ಯಾಲಿ ಶಾಂತಿಯುತವಾಗಿರಬೇಕು. ಎಲ್ಲಿಯೂ ಹಿಂಸೆಯಾಗಬಾರದು. ಪ್ರತಿಭಟನೆ, ಚಳುವಳಿಗಳು ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡಬಾರದು ಎಂದು ಹೇಳಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ರಾಜ್ಯಾಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ ಇಂತಹ ಸಿನಿಮಾ ರ್ಯಾಲಿಗಳು ಸಮಾಜವನ್ನು ಜಾಗೃತಿಗೊಳಿಸುವಂತಿರಬೇಕು. ಚಿತ್ರನಟರು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಬೇಕು. ರ್ಯಾಲಿಗಳು ಜನತೆಯಲ್ಲಿ ಬೇಸರವನ್ನುಂಟು ಮಾಡುವಂತಿರಬಾರದು ಎಂದು ಸಲಹೆ ನೀಡಿದರು.
ಮುರುಘಾಮಠದಿಂದ ಹೊರಟ ಬೈಕ್ ರ್ಯಾಲಿ ಹೊಳಲ್ಕೆರೆ ರಸ್ತೆಯಿಂದ ಕನಕವೃತ್ತ, ಸಂಗೊಳ್ಳಿರಾಯಣ್ಣ ವೃತ್ತ, ಗಾಂಧಿ ಸರ್ಕಲ್, ಎಸ್.ಬಿ.ಎಂ.ಸರ್ಕಲ್, ಅಂಬೇಡ್ಕರ್ ಪ್ರತಿಮೆ, ಮದಕರಿನಾಯಕ ಪ್ರತಿಮೆ ಮುಂಭಾಗದಿಂದ ಒನಕ್ಕೆ ಓಬವ್ವ ವೃತ್ತಕ್ಕೆ ಆಗಮಿಸಿತು.
ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ಅಧ್ಯಕ್ಷ ಕುಮಾರ್‍ನಾಯ್ಕ, ರಘು ದರ್ಶನ್, ತಿಪ್ಪೇಶ್‍ನಾಯ್ಕ, ಕಿರಣ, ಮಧು, ಜಗ್ಗ, ಮಹೇಶ್, ಹನುಮಂತು, ದೇವರಾಜ್, ಮಣಿ, ನೌಶದ್, ತಿಮ್ಮೇಶ್, ಕಿರಣ ಸೇರಿದಂತೆ ಡಿಬಾಸ್ ಅಭಿಮಾನಿಗಳು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.