ವಿಜಯಪುರ: ಉಕ್ರೇನ್ ರಷ್ಯಾ ಮಧ್ಯೆ ಯುದ್ಧ ಹಿನ್ನೆಲೆ, ಉಕ್ರೇನ್ ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ಪೋಷಕರ ಸಂಕಟ ಹೆಚ್ಚಾಗಿದೆ. ಐದು ತಿಂಗಳಾದ್ರೂ ವೈದ್ಯಕೀಯ ಶಿಕ್ಷಣದಿಂದ ಅತಂತ್ರದಲ್ಲಿದ್ದಾರೆ. ಹೀಗಾಗಿ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ನಮ್ಮ ಮಕ್ಕಳು ಮಾನಸಿಕ ಖಿನ್ನತೆಗೊಳಗಾಗಿದ್ದಾರೆ. ವೈದ್ಯರಾಗುವ ಕನಸು ನುಚ್ಚು ನೂರಾಗ್ತಿದೆ. ವೈದ್ಯಕೀಯ ಸಚಿವ ಸುಧಾಕರ್ ಭರವಸೆ ಕೊಟ್ಟಿದ್ದರು. ಇದೀಗ ಉಕ್ರೇನ್ ವೈದ್ಯಕೀಯ ಸ್ಟೂಡೆಂಟ್ ಗಳ ಶಿಕ್ಷಣಕ್ಕೆ ನೆರವು ಆಗ್ತಿಲ್ಲ. ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರಿಕೆಗೆ ಅವಕಾಶ ಕೊಡಿ.
ಸ್ಯಾಂಡ್ ವಿಚ್ ಪ್ರೋಗ್ರಾಂ ಮಾದರಿಯಲ್ಲೇ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಕಲಿಕೆಗೆ ಅವಕಾಶ ಕೊಡಿ. ವಿಜಯಪುರ ಜಿಲ್ಲೆಯಲ್ಲಿ 17 ವಿದ್ಯಾರ್ಥಿಗಳು ಸೇರಿ ರಾಜ್ಯದಲ್ಲಿ 690 ಕ್ಕೂ ಅಧಿಕ ವೈದ್ಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಆನ್ ಲೈನ್ ಶಿಕ್ಷಣವೂ ಸದ್ಯ ಸ್ಥಗಿತವಾಗಿದೆ. ಫೀಸ್ ತುಂಬಿ ಎಂದು ಹೇಳ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಿ ಸುಧಾಕರ್ ಗೆ ಪೋಷಕರ ಮನವಿ. ಉಕ್ರೇನ್ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸೂಕ್ತ ಕ್ರಮ ತಗೊಳ್ಳಿ ಅಂತ ಮನವಿ.