ಬೆಂಗಳೂರು: ಅಗ್ನೀಪಥ್ ಯೋಜನೆ ವಿರೋಧಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ರಾಮಲಿಂಗ ರೆಡ್ಡಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ್ದಾರೆ. 27 ರಂದು ಎಲ್ಲಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಅಗ್ನಿಪಥ್ ಯೋಜನೆ ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಅಧಿಕಾರಕ್ಕೆ ಬಂದ್ಮೇಲೆ ಹಂತ ಹಂತವಾಗಿ ನಾಶ ಮಾಡಲು ಹೊರಟಿದೆ. 17 ರಿಂದ 23 ವರ್ಷ ಯುವಕರನ್ನ ಬಳಸಿಕೊಂಡು ಆ ಮೇಲೆ ಆ ಯುವಕರು ಎಲ್ಲಿಗೆ ಹೋಗಬೇಕು. ಕೃಷಿ ಕಾಯಿದೆ ತಂದ್ರು ಆಮೇಲೆ ಸಾಕಷ್ಟು ವಿರೋಧರಿಂದ ಹಿಂಪಡೆದರು. ಅಗ್ನೀಪಥ್ ಯೋಜನೆಯಿಂದ ದೇಶದ ಭದ್ರತೆಯನ್ನ ನಾಶ ಮಾಡಲು ಹೊರಟಿದೆ. ಅಗ್ನೀಪಥ್ ಯೋಜನೆ ಹೆಸರಲ್ಲಿ ದೇಶ ಕಾಯುವ ಯೋಧರನ್ನ ಗುತ್ತಿಗೆ ಕಾರ್ಮಿಕರನ್ನಾಗಿಸೋದು, ಹಾಗೂ ಗುತ್ತಿಗೆ ಅಧಾರಲ್ಲಿ ಹರಾಜು ಹಾಕೋದು.
ಕಳೆದ ಮೂರು ವರ್ಷದಿಂದ ಆರ್ಮಿಯಲ್ಲಿ ನೇಮಕಾತಿಯೇ ನಡೆದಿಲ್ಲ. ಈ ಯೋಜನೆಯಲ್ಲಿ ಯೋಧರಿಗೆ ಸೇನೆಯಲ್ಲಿ ಶ್ರೇಣಿ ಇಲ್ಲ. ಪಿಂಚಣೆ ಇಲ್ಲ ಉದ್ಯೋಗ ಭದ್ರತೆ ಇಲ್ಲ. ಮೊದಲು ಹೇಗೆ ನೇಮಕಾತಿ ನಡೆಯುತ್ತಿತ್ತೋ ಹಾಗೇ ನೇಮಕಾತಿ ನಡೆಯಬೇಕು ಎಂದಿದ್ದಾರೆ.