ಚಿತ್ರದುರ್ಗ, (ಮೇ.30) : ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೆಳಗಳಹಟ್ಟಿ ಗೇಟ್ ನಿಂದ ಬೊಮ್ಮಲಿಂಗನಹಳ್ಳಿ
ಕಡೆಗೆ ಹೋಗುವ ಚಾನಲ್ ರಸ್ತೆಯ ಹತ್ತಿರ
ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಭೂಮಿಯನ್ನು ಶೋಧಿಸುತ್ತಿದ್ದ ನಾಲ್ವರು ನಿಧಿಗಳ್ಳರನ್ನು ಖಚಿತವಾದ ಮಾಹಿತಿ ಮೇರೆಗೆ ಮೊಳಕಾಲ್ಮೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು,
1] ಶ್ರೀನಿವಾಸುಲು ತಂದೆ ಪುಲ್ಲಯ್ಯ, ಸುಮಾರು 62 ವರ್ಷ, ವಿನಾಯಕ ವಾಟರ್ ಪ್ಲಾಂಟ್ ಮಾಲೀಕರು, ವಿನಾಯಕ
ನಗರ, ಅನಂತಪುರ ಟೌನ್, ಆಂಧ್ರ ಪ್ರದೇಶ ರಾಜ್ಯ
2] ರಾಜಸಂಗಮೇಶ್ವರ ಶರ್ಮ ಟಿ. ತಂದೆ ಆಂಜನೇಯ ಶರ್ಮ ಟಿ. ಸುಮಾರು 47 ವರ್ಷ, ಬಾಪು ನಗರ್, ಚಿಕ್ಕಡಪಲ್ಲಿ,
ಹೈದರಾಬಾದ್, ಆಂಧ್ರ ಪ್ರದೇಶ ರಾಜ್ಯ
3] ಬಹದ್ದೂರ್ ಧನ್ ತಂದೆ ಛತ್ರಬಹದ್ದೂರ್, ಸುಮಾರು 47 ವರ್ಷ, ವೆಂಕಟಗಿರಿ, ಯೂಸುಫಷ್ ಗುಡ, ಜೂಬ್ಲಿ ಹಿಲ್ಸ್,
ಶೇಖ್ ಪೇಟ, ಹೈದ್ರಾಬಾದ್, ಆಂಧ್ರ ಪ್ರದೇಶ ರಾಜ್ಯ
4] ಮೀನಪ್ಪ ಟಿ. ತಂದೆ ಹನುಮಂತು ಟಿ, ಸುಮಾರು 48 ವರ್ಷ, ಅಮ್ಮ ಆಸ್ಪತ್ರೆ ಹತ್ತಿರ, ಕರ್ನೂಲ್ ಟೌನ್, ಆಂದ್ರಪ್ರದದೇಶ, ಎಂದು ಗುರುತಿಸಲಾಗಿದೆ.
ಈ ನಾಲ್ವರು ಬಂಧಿತ ಆರೋಪಿಗಳಿಂದ
ಜಪ್ತು ಮಾಡಿದ ಬೆಲೆ ಬಾಳುವ ವಸ್ತುಗಳ ಒಟ್ಟು ಮೌಲ್ಯ ರೂ.6,21,900/- ಗಳಷ್ಟಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಸಿಕೊಂಡ ವಸ್ತುಗಳ ವಿವರ
1] ಬಿಳಿ ಬಣ್ಣದ ನಿಸ್ಸಾನ್ ಕಾರ್ ಅಂದಾಜು 4,00,000/- ರೂ.
2] 06 ಗ್ರಾಂ ತೂಕದ ಸುಮಾರು 20,000/- ರೂ ಬೆಲೆಬಾಳುವ ಬಂಗಾರದ 02 ಓಲೆಗಳು.
3] 02 ಗ್ರಾಂ ತೂಕದ ಸುಮಾರು 10,000/- ರೂ ಬೆಲೆಬಾಳುವ ಬಂಗಾರದ ಬಿಸ್ಕತ್.
4] 08 ಗ್ರಾಂ ತೂಕದ 500/- ರೂ ಬೆಲೆ ಬಾಳುವ ಬೆಳ್ಳಿಯ ಬಿಸ್ಕತ್.
5] 1.5 ಗ್ರಾಂ ತೂಕದ 100/- ರೂ ಬೆಲೆ ಬಾಳುವ ಬೆಳ್ಳಿಯ ಚೂರುಗಳು.
6] ನಿಧಿಯನ್ನು ಶೋಧಿಸುವ ಎಲೆಕ್ಟ್ರಾನಿಕ್ ಉಪಕರಣ ಅಂದಾಜು ಬೆಲೆ 1,00,000/- ರೂ,
7] ಡೈಮಂಡ್ ಡಿಟೆಕ್ಟರ್ ಉಪಕರಣ ಅಂದಾಜು ಬೆಲೆ 70,000/- ರೂ,
8] 02 ಹೆಡ್ ಲೈಟ್ ಗಳು ಅಂದಾಜು ಬೆಲೆ 200/- ರೂ,
9] 02 ಸೋಲಾರ್ ಲೈಟ್ ಗಳು ಅಂದಾಜು ಬೆಲೆ 1,000/- ರೂ ಗಳು,
10] ಒಂದು ಟೇಪ್ ಅಂದಾಜು ಬೆಲೆ 100/- ರೂಗಳು,
11] 04 ಮೊಬೈಲ್ ಸ್ಮಾರ್ಟ್ ಫೋನ್ ಗಳು ಅಂದಾಜು ಬೆಲೆ 20,000/- ರೂ ಗಳಾಗಿರುತ್ತೆ.
ಜಪ್ತು ಮಾಡಿದ ಒಟ್ಟು ಮೌಲ್ಯ 6,21,900/- ರೂಪಾಯಿಗಳಾಗಿರುತ್ತೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೆ. ಪರುಶುರಾಮ, ಪೊಲೀಸ್ ಅಧೀಕ್ಷಕರು, ಶ್ಲಾಘಿಸಿರುತ್ತಾರೆ.