ಬೆಂಗಳೂರು: ಬಜೆಟ್ ಮೇಲಿನ ಚರ್ಚೆ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಬಜೆಟ್ ಬಗ್ಗೆ, ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾತನಾಡಿದ್ದಾರೆ.
ಬಜೆಟ್ ಮಂಡಿಸುವಾಗ ನನಗೆ ನನ್ನದೆ ಆದ ಆತಂಕವಿತ್ತು ಎಂದು ಇಂದು ಪರಿಷತ್ ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಪರೀಕ್ಷೆ ರೂಪಕವಾಗಿ ಬಜೆಟ್ ಬಂದಿದೆ ಎನಿಸಿತ್ತು. ಹಣಕಾಸು ಸ್ಥಿತಿಯಿಂದ ಅನೇಕ ಕಾರ್ಯಕ್ರಮ ಮೊಟಕುಗೊಳಿಸಲಾಗಿತ್ತು. ಕೋವಿಡ್ ಕಾರಣದಿಂದಾಗಿ ಅತಿಯಾದ ಖರ್ಚು ವೆಚ್ಚವಾಗಿದೆ. ಆರ್ಥಿಕ ಸಂಕಷ್ಟ ಬಂದರೂ ಅಭಿವೃದ್ಧಿಯಾಗಿದೆ.
ಶ್ರೀಮಂತರು ಅಭಿವೃದ್ಧಿ ಮಾಡುತ್ತಾರೆಂಬ ಭ್ರಮೆ ಇದೆ. ಕೂಲಿಕಾರರು, ರೈತರು ಆರ್ಥಿಕತೆಗೆ ಮೂವ್ ಮಾಡ್ತಾರೆ. ಬಂಡವಾಳ ಬೇಕು ಅದರ ವಿರುದ್ಧ ನಾನಿಲ್ಲ. ಆರ್ಥಿಕತೆ ಪರಿವರ್ತನೆ ಮಾಡುವವರು ಯಾರೆಂದು ಚಿಂತಿಸಿ. 2022-23ರ ಬಜೆಟ್ ಮಂಡನೆ ಮಾಡಿದ್ದೇನೆ ಎಂದಿದ್ದಾರೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು.
ಬಿಜೆಪಿ ರಾಜ್ಯ ರಾಜಕಾರಣಿ ಸಭೆ ಮುಂದೂಡಿಕೆಯಾಗಿದೆ.ಏಪ್ರಿಲ್ ಎರಡನೇ ವಾರದಲ್ಲಿ ಈ ಸಭೆ ನಡೆಯಲಿದೆ ಎಂದಿದ್ದಾರೆ.