ಬೆಂಗಳೂರು: ಇಂದು ಹೈಕೋರ್ಟ್ ಹಿಜಾಬ್ ಗೆ ಸಂಬಂಧಿಸಿದಂತೆ ತೀರ್ಪು ನೀಡಿದೆ. ಈ ತೀರ್ಪನ್ನ ಎಲ್ಲರೂ ಸ್ವಾಗತಿಸಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ರಾಜ್ಯ ಸರ್ಕಾರ ಈಗ ಸಾಮಾರಸ್ಯ ಕಾಪಾಡೋದಕ್ಕೆ ತೀರ್ಮಾನ ತೆಗೆದುಕೊಳ್ಳುವುದರ ಬಗ್ಗೆ ನೋಡಬೇಕು ಎಂದಿದ್ದಾರೆ.
ನಾನು ನಿನ್ನೆ ರಾಜ್ಯದಲ್ಲಿ ಶಾಲಾ ಕಾಲೇಜಿನಲ್ಲಿ ಇರುವಂತ ಅಹಿತಕರ ವಾತಾವರಣ ಮತ್ತು ಈ ಸಮವಸ್ತ್ರದ ವಿಚಾರಕ್ಕೆ ಆದಂತ ರಾಜ್ಯದಲ್ಲಿ ಆದಂತ ಕಾನೂನು ಭಂಗಗಳು. ಸಾಮರಸ್ಯದ ನಿಲುವಳಿ ಸೂಚನೆ ಮಂಡಿಸಿದ್ದೆ. ಅದು ಕಾಕತಾಳೀಯವಾಗಿದೆ. ಇವತ್ತು ಹೈಕೋರ್ಟ್ ತೀರ್ಪು ಬಂದಿದ್ದು ನಾನು ಮಂಡಿಸಿದ್ದು ಕಾಕತಾಳೀಯವಾಗಿದೆ.
ಕೋರ್ಟ್ ನ ಆದೇಶ ಏನಿದೆ. ಅದನ್ನ ನಾವೆಲ್ಲರೂ ಪಾಲಿಸಬೇಕಾಗಿದೆ. ಸರ್ಕಾರದ ಕರ್ತವ್ಯ ಶಾಲೆಗಳಲ್ಲಿ ಮಕ್ಕಳ ಮೇಲಿನ ಭವಿಷ್ಯಕ್ಕೆ ಆಗಿರುವ ಕುತ್ತು, ಅವರ ಮೇಲೆ ಆಗಿರುವ ಪರಿಣಾಮ ಬಗೆಹರಿಸುವ ಜವಬ್ದಾರಿ ಅವರ ಮೇಲಿದೆ. ಸರ್ಕಾರ ಸಾಮರಸ್ಯ ಉಳಿಸೋದಕ್ಕೆ ಯಾವ ರೀತಿಯ ತೀರ್ಮಾನ ಮಾಡ್ತಾರೆ ಅನ್ನೋದನ್ನ ಕಾದು ನೋಡೋಣಾ ಎಂದಿದ್ದಾರೆ.